ಪುತ್ತಿಗೆ ಪರ್ಯಾಯ ಕಟ್ಟಿಗೆ ರಥ ನಿರ್ಮಾಣ
KannadaprabhaNewsNetwork | Published : Oct 08 2023, 12:02 AM IST
ಪುತ್ತಿಗೆ ಪರ್ಯಾಯ ಕಟ್ಟಿಗೆ ರಥ ನಿರ್ಮಾಣ
ಸಾರಾಂಶ
ಪುತ್ತಿಗೆ ಪರ್ಯಾಯ ಕಟ್ಟಿಗೆ ಮುಹೂರ್ತ
ಕನ್ನಡಪ್ರಭ ವಾರ್ತೆ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ 4ನೇ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರೀ ಕೃಷ್ಣಮಠದ ಮಧ್ವ ಸರೋವರದ ಪಕ್ಕದಲ್ಲಿ ಕಟ್ಟಿಗೆ ರಥದ ನಿರ್ಮಾಣಕ್ಕೆ ಶುಕ್ರವಾರ ಮುಹೂರ್ತ ನಡೆಸಲಾಯಿತು. ಮಠದ ಮೇಸ್ತ್ರಿ ಪದ್ಮನಾಭ, ರಥವನ್ನು ಕಟ್ಟುವ ಗೋವಿ೦ದಣ್ಣ ಹಾಗೂ ಈಶ್ವರ್ ಚಿಟ್ಪಾಡಿ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನ೦ತರ ಕಟ್ಟಿಗೆಗಳನ್ನು ರಥದ ಆಕಾರದಲ್ಲಿ ಜೋಡಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು. ಈ ಕಟ್ಟಿಗೆ ರಥವನ್ನು ನಿರ್ಮಾಣಕ್ಕೆ ಸುಮಾರು 1 ತಿ೦ಗಳ ಕಾಲ ತಗಲಿದೆ. ಪರ್ಯಾಯ ಮಠದವರು ಮುಂದಿನ 2 ವರ್ಷಗಳ ಕಾಲ ಕೃಷ್ಣಮಠದಲ್ಲಿ ನಿರಂತರ ಅನ್ನದಾನ ಮಾಡುವುದಕ್ಕಾಗಿ ಅಗತ್ಯವಿರುವ ಭಾರಿ ಪ್ರಮಾಣ ಕಟ್ಟಿಗೆಗಳನ್ನು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಿಡುವುದಕ್ಕಾಗಿ ರಥದ ಆಕಾರದಲ್ಲಿ ಜೋಡಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.