ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನೀಚ ಕೃತ್ಯ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ

| Published : Mar 16 2025, 01:46 AM IST

ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನೀಚ ಕೃತ್ಯ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವ ನೀಚ ಕೃತ್ಯಕ್ಕೆ ಮಕ್ಕಳು ಇಳಿದಿದ್ದಾರೆ. ಗಂಡು ಹುಟ್ಟಿದರೆ ಸಂತೋಷ ಪಡುತ್ತಿದ್ದ ಹೆತ್ತವರು ಇಂದು ವೃದ್ಧಾಶ್ರಮದಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದಿದೆ. ಹೆಣ್ಣು ಮಗುವಿನ ಬಗ್ಗೆ ತಾತ್ಸರ ಬಿಡಬೇಕು. ಹೆಣ್ಣುಮಕ್ಕಳು ತಮ್ಮ ಪೋಷಕರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಯೋವೃದ್ಧರನ್ನು ಮಕ್ಕಳು ಮನೆಯಿಂದ ಹೊರಹಾಕುತ್ತಿರುವುದು ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ವಿಷಾದಿಸಿದರು.

ಕಾರ್ಕಹಳ್ಳಿ ಗೇಟ್ ಬಳಿ ಇರುವ ಜ್ಞಾನಗಂಗೋತ್ರಿ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ನಮ್ಮ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವ ನೀಚ ಕೃತ್ಯಕ್ಕೆ ಮಕ್ಕಳು ಇಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗಂಡು ಹುಟ್ಟಿದರೆ ಸಂತೋಷ ಪಡುತ್ತಿದ್ದ ಹೆತ್ತವರು ಇಂದು ವೃದ್ಧಾಶ್ರಮದಲ್ಲಿ ದಿನ ಕಳೆಯುವ ಪರಿಸ್ಥಿತಿ ಬಂದಿದೆ. ಹೆಣ್ಣು ಮಗುವಿನ ಬಗ್ಗೆ ತಾತ್ಸರ ಬಿಡಬೇಕು. ಹೆಣ್ಣುಮಕ್ಕಳು ತಮ್ಮ ಪೋಷಕರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ ಎಂದರು.

ಖಾಸಗಿ ವಿದ್ಯಾಸಂಸ್ಥೆಗಳನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಅವರಲ್ಲಿ ಗುಣಾತ್ಮಕ ಶಿಕ್ಷಣವಿದ್ದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ನಿಲ್ಲುತ್ತವೆ. ಮಕ್ಕಳಿಗೆ ಪುಸ್ತಕ ಓದುವ ಅಭ್ಯಾಸ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.

ವಾರ್ಷಿಕ ಶಾಲಾ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಭಾರತೀ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಾ.ಮ.ರಾಮಕೃಷ್ಣ, ಶಾಲೆ ಸಂಸ್ಥಾಪಕ ಮಾದರಹಳ್ಳಿ ಈರೇಗೌಡ, ಪ್ರಾಧ್ಯಾಪಕ ಚಂದ್ರಪ್ಪ, ಅಧ್ಯಕ್ಷ ಎಂ.ಈ.ಪ್ರತಾಪ್, ಕಾರ್ಯದರ್ಶಿ ಎಂ.ಈ.ಪವಿತ್ರ ಚಂದ್ರಪ್ಪ, ಖಜಾಂಜಿ ವೇದಶ್ರೀ, ಮುಖ್ಯ ಶಿಕ್ಷಕಿ ಲತಾ, ಶಿಕ್ಷಕರಾದ ಸರಳಪ್ರದಾನ್, ಅನಿತಾ, ಗಿರೀಶ್, ಜಯಮಾಲಿನಿ, ಸೌಮ್ಯ, ನಳಿನಿ, ರಶ್ಮಿ, ಪೂಜಾ, ಅನುಷ, ಮಮತಾ, ರೇಷ್ಮ, ಆಶಾ, ನಿಹಾರಿಕ ಸೇರಿದಂತೆ ಮತ್ತಿತರಿದ್ದರು.