ಅಕ್ಷಯ ಪದವಿ ಕಾಲೇಜಿನಲ್ಲಿ ಬಿೆಚ್ಎಸ್ ವಿಭಾಗದ ವತಿಯಿಂದ ತಸ್ತ್ರೀಯ ಫುಡ್ ಫೆಸ್ಟ್ ಅಮೆರಿಕಾದ ರಘುನಾಥ್ ಮೂರ್ತಿ ಪ್ರಾಯೋಜಕತ್ವದಲ್ಲಿ ಸಂಪನ್ನಗೊಂಡಿತು.

ಪುತ್ತೂರು: ಅಕ್ಷಯ ಪದವಿ ಕಾಲೇಜಿನಲ್ಲಿ ಬಿೆಚ್ಎಸ್ ವಿಭಾಗದ ವತಿಯಿಂದ ತಸ್ತ್ರೀಯ ಫುಡ್ ಫೆಸ್ಟ್ ಅಮೆರಿಕಾದ ರಘುನಾಥ್ ಮೂರ್ತಿ ಪ್ರಾಯೋಜಕತ್ವದಲ್ಲಿ ಸಂಪನ್ನಗೊಂಡಿತು.

ಮುಖ್ಯ ಅತಿಥಿ ಮಾಸ್ಟರ್ ಶೆಫ್ ಆಗಿರುವ ಮಹಮ್ಮದ್ ಆಶಿಕ್ಕಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು, ಇಂದಿನ ಕಾರ್ಯಕ್ರಮಕ್ಕೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಿದೆ. ಮತ್ತು ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಮತ್ತು ಶೇ. 100 ಪ್ಲೇಸ್ಮೆಂಟ್ ಆಗಿರುವುದು ಅಕ್ಷಯ ಕಾಲೇಜಿನ ಯಶಸ್ಸು ಮತ್ತು ಹೆಮ್ಮೆ ಎಂದರು.ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತ ಅಧಿಕಾರಿಯಾದ ಅರ್ಪಿತ್ ಟಿ. ಎ, ಶೈಕ್ಷಣಿಕ ಮಾರ್ಗದರ್ಶಕರಾದ ಅಭಿಲಾಶ್ ಕ್ಷತ್ರಿಯ ಮತ್ತು ಕಾಯು ಸಂಘದ ಅಧ್ಯಕ್ಷರಾಗಿರುವ ಗಗನ್ ಉಪಸ್ಥಿತರಿದ್ದರು.ಸಾಂಸ್ಕೃತಿಕ ವೈವಿಧ್ಯ: ಚೆಂಡೆ, ನೃತ್ಯ, ಹಾಡು ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದವು. ವಿಚಾರ ಗೋಷ್ಠಿ: ಮಂಗಳೂರು ಅಡುಗೆ ಶೈಲಿಯ ಸಾಂಸ್ಕೃತಿಕ ಮಹತ್ವ, ಆಧುನಿಕ ಪ್ರಭಾವಗಳು, ಆಧುನಿಕ ಪದಾರ್ಥಗಳ ತಯಾರಿಕಾ ವಿಧಾನಗಳನ್ನು ಉಳಿಸುವ ಅಗತ್ಯ, ಹಾಗೂ ಈ ಶ್ರೀಮಂತ ಆಹಾರ ಪರಂಪರೆಯನ್ನು ಮುಂದಿನ ಪೀಳಿಗೆಯವರು ಹೇಗೆ ಕಾಪಾಡಬಹುದು ಎಂಬ ವಿಚಾರಗಳ ಕುರಿತಾಗಿ ವಿಚಾರ ಗೋಷ್ಠಿ ನಡೆಯಿತು.ಫುಡ್ ಫೆಸ್ಟ್ ನಲ್ಲಿ ರುಚಿಯಾದ ಅನೇಕ ಖಾದ್ಯಗಳು ಇದ್ದು ನೂರಾರು ಮಂದಿ ಇದನ್ನು ಸವಿದರು. ಬಿಎಚ್ಎಸ್ ವಿಭಾಗದ ಎಚ್‌ಓಡಿಯಾದ ಅವಿನಾಶ್ ಸ್ವಾಗತಿಸಿ, ಪ್ರಜ್ವಲ್ ವಂದಿಸಿ, ಉಪನ್ಯಾಸಕಿ ಶ್ರತ ಅತಿಥಿಗಳ ಪರಿಚಯ ವಾಚಿಸಿ ನಿರೂಪಿಸಿದರು