ಸಾರಾಂಶ
ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗೆ ಬಸ್ಸಿನ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಹಾಗೂ ಪತ್ರಿಕೆಗಳಲ್ಲಿ ಮುಂಚಿತವಾಗಿ ಮಾಹಿತಿ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಏ.೧೭ರಂದು ನಡೆಯಲಿರುವ ಸುಡುಮದ್ದು ಪ್ರದರ್ಶನ ಮತ್ತು ರಥೋತ್ಸವವನ್ನು ಸಮಯ ಮೀರದಂತೆ ನಿಗದಿತ ಸಮಯದ ಒಳಗಾಗಿ ನಡೆಸುವಂತೆ ಭಕ್ತಾದಿಗಳು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ರಥೋತ್ಸವದ ದಿನ ದೇವರು ರಥಾರೋಹಣದ ವೀಕ್ಷಣೆಗೆ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರಥಬೀದಿಯಿಂದ ಕನಿಷ್ಠ ೭೫-೮೦ಮೀಟರ್ ದೂರದಲ್ಲಿ ವ್ಯಾಪಾರ ಮಳಿಗೆಗಳನ್ನು ಅಳವಡಿಸುವುದು. ಸುಡುಮದ್ದು ಪ್ರದರ್ಶನವನ್ನು ಸಾಕಷ್ಟು ದೂರದ ಸುರಕ್ಷಿತ ಪ್ರದೇಶದಲ್ಲಿ ವ್ಯವಸ್ಥೆಗೊಳಿಸುವುದು, ರಥೋತ್ಸವವನ್ನು ಮುಹೂರ್ತ ಸಮಯ ಮೀರದಂತೆ ಹಾಗೂ ವಿಳಂಬವಾಗದಂತೆ ಸಮಯ ನಿಗದಿಪಡಿಸುವುದು. ದೂರದ ಊರುಗಳಿಂದ ಆಗಮಿಸುವ ಭಕ್ತಾದಿಗಳಿಗೆ ಬಸ್ಸಿನ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಹಾಗೂ ಪತ್ರಿಕೆಗಳಲ್ಲಿ ಮುಂಚಿತವಾಗಿ ಮಾಹಿತಿ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭ ವಕೀಲರಾದ ಗಿರೀಶ್ ಮಳಿ, ನರಸಿಂಹ ಪ್ರಸಾದ್, ಕೃಷ್ಣ ನಾಯ್ಕ್ ತೆಂಕಿಲ, ಕೃಷ್ಣಪ್ರಸಾದ್ ನಡ್ಸಾರ್, ಕೃಷ್ಣಪ್ಪ ಗೌಡ, ಬನ್ನೂರು ಗ್ರಾ.ಪಂ. ಮಾಜಿ ಸದಸ್ಯ ಅಣ್ಣಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.