ಸಾರಾಂಶ
ಉದ್ಯಮಿ ಶಿವಪ್ರಸಾದ್ ಶೆಟ್ಟಿ-ಸುಜಾತ ಶೆಟ್ಟಿ ದಂಪತಿ ನೇತೃತ್ವದಲ್ಲಿ, ಸ್ನೇಹಿತರ ಸಹಕಾರದೊಂದಿಗೆ ನಿರ್ಮಾಣಗೊಂಡ ಸ್ವರ್ಣ ಪೀಠವನ್ನು ಶಿವಪ್ರಸಾದ್ ಪುತ್ರ ಶ್ರವಣ್ ಕುಮಾರ್ ಶೆಟ್ಟಿ, ಪುತ್ರಿ ಶಾಯರಿ ಶೆಟ್ಟಿ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೊತ್ಸವದ ೨ನೇ ದಿನವಾದ ಶುಕ್ರವಾರ ಉತ್ಸವದ ಪುಷ್ಪಕನ್ನಡಿಯಲ್ಲಿನ ಬಲಿ ಮೂರ್ತಿಗೆ ಸುಮಾರು ರು. ೪ ಲಕ್ಷ ವೆಚ್ಚದಲ್ಲಿ ಸ್ವರ್ಣಪೀಠ ಸಮರ್ಪಣೆ ಮಾಡಲಾಗಿದೆ.ಉದ್ಯಮಿ ಶಿವಪ್ರಸಾದ್ ಶೆಟ್ಟಿ-ಸುಜಾತ ಶೆಟ್ಟಿ ದಂಪತಿ ನೇತೃತ್ವದಲ್ಲಿ, ಸ್ನೇಹಿತರ ಸಹಕಾರದೊಂದಿಗೆ ನಿರ್ಮಾಣಗೊಂಡ ಸ್ವರ್ಣ ಪೀಠವನ್ನು ಶಿವಪ್ರಸಾದ್ ಪುತ್ರ ಶ್ರವಣ್ ಕುಮಾರ್ ಶೆಟ್ಟಿ, ಪುತ್ರಿ ಶಾಯರಿ ಶೆಟ್ಟಿ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಸಮರ್ಪಿಸಿದರು. ದೇವಳದ ಪ್ರಧಾನ ಆರ್ಚಕ ವೇದಮೂರ್ತಿ ವಿ.ಎಸ್. ಭಟ್ ಸಮರ್ಪಣಾ ಕಾರ್ಯ ನೆರವೇರಿಸಿದರು.
ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ಮಹಾಬಲ ರೈ ವಳತ್ತಡ್ಕ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಶಿವಪ್ರಸಾದ್ ಅವರ ಸಹವರ್ತಿಗಳಾದ ಉದ್ಯಮಿ ಶಿವರಾಮ ಆಳ್ವ, ವಾಮದೇವ ಆಚಾರ್ಯ, ಪ್ರಭಾಕರ ಶೆಟ್ಟಿ, ವಿಖಾಸ್, ಪ್ರಸನ್ನ ಎನ್. ಕೆ, ನಿವೃತ್ತ ಯೋಧ ಚಂದ್ರಶೇಖರ್ ಗೌಡ, ನಿವೃತ್ತ ವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಶೆಟ್ಟಿ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕ್ಷೇತ್ರದ ಬ್ರಹ್ಮವಾಹಕ ವೇದಮೂರ್ತಿ ಹರೀಶ್ ಭಟ್ ಮಾರ್ಗದರ್ಶನದಂತೆ, ಕಳೆದ ಬಾರಿ ಸ್ವರ್ಣ ಪುಷ್ಪ ಮತ್ತು ಚಕ್ರ ಮಾಲೆ ಸಮರ್ಪಣೆ ಮಾಡಲಾಗಿತ್ತು. ಈ ಬಾರಿ ಬ್ರಹ್ಮವಾಹಕರ ಮಾರ್ಗದರ್ಶನದಂತೆ ಬಲಿ ಮೂರ್ತಿಗೆ ಸ್ವರ್ಣಪೀಠ ಸಮರ್ಪಣೆ ಮಾಡಲಾಗಿದೆ ಎಂದು ಉದ್ಯಮಿ ಶಿವಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.