ಸಾರಾಂಶ
ಅಕ್ರಮ ಸಕ್ರಮ ಫೈಲು ಒಬ್ಬ ಶಾಸಕನ ಕಚೇರಿಗೆ ಹೋಗಿ ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ಹೋಗಿ ಮಂಜೂರು ಮಾಡುವ ಪದ್ಧತಿ ಹಿಂದಿನ ಯಾವುದೇ ಶಾಸಕರ ಅವಧಿಯಲ್ಲಿ ನಡೆದಿರಲಿಲ್ಲ. ಹಾಗಾಗಿ ಭ್ರಷ್ಟಾಚಾರ ಶಾಸಕರ ಕಚೇರಿಯಿಂದಲೇ ಆರಂಭಗೊಳ್ಳುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಪುತ್ತೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿ ಲೋಕಾಯುಕ್ತ ದಾಳಿಯಾದಾಗ ತಹಸೀಲ್ದಾರ್ ಪರಾರಿಯಾದ ಪ್ರಸಂಗ ನಡೆದಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಅಭಿವೃದ್ಧಿಯಲ್ಲಿ ಸುದ್ದಿಯಾಗಬೇಕಾಗಿದ್ದ ಪುತ್ತೂರು ಈಗ ಲಂಚಾವತಾರದಲ್ಲಿ ಸುದ್ದಿಯಾಗುತ್ತಿದೆ. ಪುತ್ತೂರಿನ ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಬ್ಬಂದಿ ಸುನಿಲ್ ಎಂಬಾತವನ್ನು ಬಂಧಿಸಿದ್ದು, ತಹಸೀಲ್ದಾರ್ ಕಚೇರಿಯಿಂದ ಪರಾರಿಯಾಗಿದ್ದಾರೆ. ಇದು ಪುತ್ತೂರಿನ ಜನತೆಯ ಪಾಲಿಗೆ ಖೇದಕರ ವಿಚಾರವಾಗಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಸಕ್ರಮ ಫೈಲು ಒಬ್ಬ ಶಾಸಕನ ಕಚೇರಿಗೆ ಹೋಗಿ ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ಹೋಗಿ ಮಂಜೂರು ಮಾಡುವ ಪದ್ಧತಿ ಹಿಂದಿನ ಯಾವುದೇ ಶಾಸಕರ ಅವಧಿಯಲ್ಲಿ ನಡೆದಿರಲಿಲ್ಲ. ಹಾಗಾಗಿ ಭ್ರಷ್ಟಾಚಾರ ಶಾಸಕರ ಕಚೇರಿಯಿಂದಲೇ ಆರಂಭಗೊಳ್ಳುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಪುತ್ತೂರಿನ ಇತಿಹಾಸದಲ್ಲಿಯೇ ಪ್ರಥಮ ಬಾರಿ ಲೋಕಾಯುಕ್ತ ದಾಳಿಯಾದಾಗ ತಹಸೀಲ್ದಾರ್ ಪರಾರಿಯಾದ ಪ್ರಸಂಗ ನಡೆದಿದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಶಿಧರ್ ನಾಯ್ಕ್ ಉಪಸ್ಥಿತರಿದ್ದರು.