ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಂಪನ್ನ

| Published : Mar 03 2025, 01:45 AM IST

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದಲ್ಲಿ ೫ ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದಲ್ಲಿ ೫ ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಿತು.

ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕ್ಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ರಾಜೆ ಹಾಗೂ ಶಬರೀಶ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೋಣ ಓಡಿಸಿದವರು ಕಕ್ಕೆಪದವು ಪೆಂರ್ಗಾಲು ಕಾರ್ತಿಕ್ ಗೌಡ. ನಂದಳಿಕೆ ಶ್ರೀಕಾಂತ್ ಭಟ್ ಅವರ ಮೋಡೆ ಹಾಗೂ ಕಾಟಿ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ.

ಹಗ್ಗ ಕಿರಿಯ ವಿಭಾಗದಲ್ಲಿ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ ಶೆಟ್ಟಿ ಅವರ ಬೊಲ್ಲೆ ಹಾಗೂ ಪಾಂತೆ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿತು. ಕೋಣ ಓಡಿಸಿದವರು ಮಂಗಲ್ಪಾಡಿ ರಕ್ಷಿತ್ ಶೆಟ್ಟಿ, ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ ಬಿ. ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡವು.

ಅಡ್ಡ ಹಲಗೆ ವಿಭಾಗದಲ್ಲಿ ಪುತ್ತೂರು ಸರೋವರ ಹವೀಶ ಹರೀಶ್ ಶಾಂತಿ ಅವರ ಬಾಬು ಹಾಗೂ ಕರ್ಣೆ ಕೋಣಗಳು ಪ್ರಥಮ ಸ್ಥಾನ ಪಡೆದುಕೊಂಡಿತು. ಭಟ್ಕಳ ಹರೀಶ್ ಕೋಣ ಓಡಿಸಿದವರು. ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿತು.

ನೇಗಿಲು ಹಿರಿಯ ವಿಭಾಗದಲ್ಲಿ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರ ದಾಸ ಹಾಗೂ ಹೊನ್ನು ಕೋಣ ಪ್ರಥಮ. ಇದನ್ನು ಓಡಿಸಿದವರು ಮಿಜಾರು ಅಶ್ವತ್ಥಪುರ. ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಅಪ್ಪು ಹಾಗೂ ಜಿಂಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕುಂದಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಕೋಣ ಓಡಿಸಿದ್ದರು. ಮಿಜಾರು ಹರಿಮೀನಾಕ್ಷಿ ದೋಟ ಹರಿಯಪ್ಪ ಶೆಟ್ಟಿ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಕನಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹಾಯಿಸಿದ ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ ಪ್ರಥಮ ಪಡೆದುಕೊಂಡಿದೆ. ತೆಕ್ಕಟ್ಟೆ ಸುಧೀರ್ ದೇವಾಡಿಗ ಕೋಣ ಓಡಿಸಿದ್ದರು. ಬೈಂದೂರು ಸಸಿಹಿತ್ತು ವೆಂಕಟ ಪೂಜಾರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ ಕೋಣ ಓಡಿಸಿದ್ದರು.