ಸಾರಾಂಶ
ಇದೇ ಫಲಕಗಳ ಆಸುಪಾಸಿನ ರಸ್ತೆಯಲ್ಲಿ ವಾಹನ ನಿಧಾನ ಸಂಚರಿಸಬೇಕೆನ್ನುವ ಸ್ಪೀಡ್ ಬ್ರೇಕರ್‌ಗಳನ್ನೂ ಹಾಕಲಾಗಿದೆ ಹೀಗಿರುವಾಗ ತಪ್ಪು ಮಾಹಿತಿ ನೀಡುವ ಸೂಚನಾಫಲಕಗಳು ಯಾಕಾಗಿ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಮೌನೇಶ ವಿಶ್ವಕರ್ಮ
ಕನ್ನಡಪ್ರಭ ವಾರ್ತೆ ಪುತ್ತೂರುರಸ್ತೆ ಪಕ್ಕದಲ್ಲಿ ಸಂಚಾರಿ ನಿಯಮಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಅಳವಡಿಸಲಾಗುತ್ತದೆ. ಅದರಂತೆ ವಾಹನಗಳನ್ನು ಚಲಾಯಿಸಬೇಕಾದ್ದು ನಿಯಮ. ಆದರೆ ಪುತ್ತೂರು ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿ ಎಂಬಲ್ಲಿ ಇತ್ತೀಚೆಗಷ್ಟೇ ಎದ್ದು ನಿಂತಿರುವ ಎರಡು ಸೂಚನಾಫಲಕಗಳ ಸೂಚನೆಯನ್ನು ಯಾರಾದರೂ ಪಾಲಿಸಿದರೆ ಇಲ್ಲಿ ಎಡವಟ್ಟು ಆಗೋದು ಗ್ಯಾರಂಟಿ..
ಅಂತದ್ದೇನಾಗಿದೆ...?: ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗಕ್ಕೆ ಮಿತಿ ಹೇರುವುದು ಸಾಮಾನ್ಯ. ಕಳೆದ ಒಂದು ವರ್ಷಗಳಿಂದ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದ ಮುಂಭಾಗದ ರಸ್ತೆ ಅಗಲೀಕರಣದ ಕಾರ್ಯ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಅಂತಿಮ ಹಂತದ ಕಾರ್ಯ ಎಂಬಂತೆ ಇಲ್ಲಿ ಅಳವಡಿಸಿರುವ ಎರಡು ಸೂಚನಾ ಫಲಕ ಪ್ರಯಾಣಿಕರನ್ನು ಹಾದಿ ತಪ್ಪಿಸುತ್ತಿದೆ..80 ಮತ್ತು 40: ನಗರ ವ್ಯಾಪ್ತಿಗೆ ಸೇರಿರುವ ಈ ರಸ್ತೆಯ ಇಕ್ಕೆಲಗಳಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚರಿಸಬೇಕು ಎನ್ನುವ ಫಲಕವಿದೆ. ವಿಪರ್ಯಾಸ ವೆಂದರೆ ದರ್ಬೆಯಿಂದ ಮುಕ್ರಂಪಾಡಿಕಡೆಗೆ ಹೋಗುವ ರಸ್ತೆಯ ಪಕ್ಕ 80 ಕಿ.ಮೀ. ಎಂದು ಬರೆದಿರುವ ಫಲಕದಿಂದ ನೂರು ಮೀಟರ್ ದೂರದಲ್ಲಿ 40 ಕಿ.ಮೀ. ಮಿತಿಯ ಬೋರ್ಡ್ ಹಾಕಲಾಗಿದೆ. ಒಂದೆಡೆಯಲ್ಲಿ ತಿರುವು, ಮತ್ಗೊಂದೆಡೆಯಲ್ಲಿ ಏರು ರಸ್ತೆಯಿರುವ ಈ ಪ್ರದೇಶದಲ್ಲಿ ವಾಹನ ಸವಾರರನ್ನು ದಾರಿ ತಪ್ಪಿಸುವ ಈ ಫಲಕಗಳನ್ನು ಯಾಕಾಗಿ ಹಾಕಿದ್ದಾರೆ ಎನ್ನುವುದು. ಇದೇ ಫಲಕಗಳ ಆಸುಪಾಸಿನ ರಸ್ತೆಯಲ್ಲಿ ವಾಹನ ನಿಧಾನ ಸಂಚರಿಸಬೇಕೆನ್ನುವ ಸ್ಪೀಡ್ ಬ್ರೇಕರ್‌ಗಳನ್ನೂ ಹಾಕಲಾಗಿದೆ ಹೀಗಿರುವಾಗ ತಪ್ಪು ಮಾಹಿತಿ ನೀಡುವ ಸೂಚನಾಫಲಕಗಳು ಯಾಕಾಗಿ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.