ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
೮೧ ವರ್ಷಗಳ ಪರಂಪರೆಯ ಇತಿಹಾಸ ಹೊಂದಿರುವ, ದಕ್ಷಿಣ ಕನ್ನಡದ ಅತಿದೊಡ್ಡ ಚಿನ್ನದ ಮಳಿಗೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರಿನ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ವಿಸ್ತರಿತ ಕಟ್ಟಡದೊಂದಿಗೆ ನವೀಕೃತಗೊಂಡಿದೆ. ನವೀಕೃತ ಮಳಿಗೆಯ ಲೋಕಾರ್ಪಣೆ ಮತ್ತು ಮುಳಿಯ ಆರಂಭೋತ್ಸವ ೨೦ರಂದು ನಡೆಯಲಿದೆ.ಮುಳಿಯ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್, ಚಿತ್ರನಟ ರಮೇಶ್ ಅರವಿಂದ್ ಮುಳಿಯ ಆರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20ರಂದು ಪುತ್ತೂರಿಗೆ ಆಗಮಿಸುವ ರಮೇಶ್ ಅರವಿಂದ್ ಬೆಳಗ್ಗೆ ೯.೩೦ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬಳಿಕ ಅವರನ್ನು ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಕೋರ್ಟ್ ರಸ್ತೆಯ ಸುಲೋಚನಾ ಟವರ್ಸ್‌ನಲ್ಲಿರುವ ಮುಳಿಯ ಸಂಸ್ಥೆಗೆ ಕರೆತರಲಾಗುತ್ತದೆ. ಮೆರವಣಿಗೆಯಲ್ಲಿ ದೇವರ ದೀಪ ತರಲಾಗುತ್ತದೆ. ಆ ಬಳಿಕ ಸಂಸ್ಥೆಯ ಅಪರಂಜಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ದೀಪಪ್ರಜ್ವಲನ ಮಾಡಿ, ಏ.೨೦ರಿಂದ ಮೇ ೧೩ರವರೆಗೆ ನಡೆಯುವ ಮುಳಿಯ ಆರಂಭೋತ್ಸವಕ್ಕೆ ಅವರು ಚಾಲನೆ ನೀಡಲಿದ್ದಾರೆ ಎಂದರು.ಆರಂಭೋತ್ಸವದ ಪ್ರಯುಕ್ತ ಏ. ೨೦ರಿಂದ ಮುಂದಿನ ೧ ತಿಂಗಳ ಕಾಲ ವಿವಿಧ ದಿನಗಳಲ್ಲಿ ಅಪರಂಜಿ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ೨೨ರಂದು ಸಂಜೆ ಗಿರಿಜಾ ಕಲ್ಯಾಣ ಯಕ್ಷಗಾನ, ೨೪ರಂದು ಸಂಗೀತ ರಸಸಂಜೆ, ೨೮ರಂದು ಅಕ್ಷಯ ತೃತೀಯ ಮಹತ್ವದ ಕುರಿತು ವಿಶೇಷ ಸಂವಾದ, ಮೇ ೧ರಂದು ಸ್ವಚ್ಛ ಪುತ್ತೂರು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಮೇ ೪ರಂದು ಪ್ರಶ್ನೋತ್ತರ ಮತ್ತು ಗೇಮಿಂಗ್, ಮೇ ೫ರಂದು ಶ್ರೀರಾಮ ಪುನರಾಗಮನ ನೃತ್ಯರೂಪಕ, ಮೇ. ೬ರಂದು ಸಂಜೆ ಕುಂಕುಮಾರ್ಚನೆ ಎಂಬ ವಿಶಿಷ್ಟ ಕಾರ್ಯಕ್ರಮ, ಮೇ ೯ರಂದು ಸಂಜೆ ಪುದರ್ ದೀತ್‌ಜಿ ತುಳು ನಾಟಕ, ಮೇ ೧೧ರಂದು ಬೆಳಗ್ಗೆ ೧೧ ಗಂಟೆಗೆ ಕೃಷಿ ವಿಚಾರಗೋಷ್ಠಿ, ಮೇ ೧೩ರಂದು ಸಂಜೆ ಗೊಂಬೆಯಾಟ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ವಿಶಾಲ ವಿಸ್ತರಿತ ಮಳಿಗೆ:೧೦ ಸಾವಿರ ಚದರ ಅಡಿ ವಿಸ್ತೀರ್ಣದ ವಿಶಾಲ ವಿಸ್ತರಿತ ಮಳಿಗೆ ಪ್ರಸ್ತುತ ಲೋಕಾರ್ಪಣೆಗೊಳ್ಳುತ್ತಿದೆ. ಇದರೊಂದಿಗೆ ಬೆಂಗಳೂರಿನ ಮುಳಿಯ ಮಳಿಗೆ ವಿಸ್ತರಣೆಗೊಳ್ಳಲಿದೆ. ಗೋಣಿಕೊಪ್ಪ ಮಳಿಗೆ ಹೊಸ ಕಟ್ಟಡ ಹೊಂದಲಿದೆ. ಬೆಳ್ತಂಗಡಿ ಮಳಿಗೆಗೆ ಹೊಸ ಸ್ಥಳಾವಕಾಶ ಲಭ್ಯವಾಗಲಿದೆ ಎಂದರು.
ಪ್ರಸ್ತುತ ೫ ಕಡೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ಕಾರ್ಯಾಚರಿಸುತ್ತಿದ್ದು, ೨ ಕಡೆ ಬೆಳ್ಳಿ ಮಳಿಗೆಗಳಿವೆ. ಮುಂದಿನ ದಿನಗಳಲ್ಲಿ ಮಳಿಗೆಗಳ ಸಂಖ್ಯೆ ವೃದ್ಧಿಯಾಗಲಿದೆ. ವಿಸ್ತೃತ ಮಳಿಗೆಯಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರಾಭರಣಗಳ ಪ್ರತ್ಯೇಕ ಕೌಂಟರ್‌ಗಳಿವೆ. ಮಕ್ಕಳ ಆಟೋಟ ಕೊಠಡಿ, ಶಿಶು ಆರೈಕೆ ಕೊಠಡಿ, ವಾಚ್ ಸೆಂಟರ್, ಶೌಚಾಲಯ, ವ್ಯಾಲೆಟ್ ಪಾರ್ಕಿಂಗ್, ದೇಶದಲ್ಲೇ ಪ್ರಥಮ ಬಾರಿಗೆ ಎನ್ನಬಹುದಾದ ಗೋಲ್ಡ್ ಪ್ಯೂರಿಟಿ ಅನಲೈಸರ್, ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಶನ್ ಇದೆ. ಮಧ್ಯಾಹ್ನ ಗ್ರಾಹಕರಿಗೆ ಭೋಜನ ವ್ಯವಸ್ಥೆ, ಸಂಜೆ ಉಪಾಹಾರ ವ್ಯವಸ್ಥೆ ಇದೆ. ಬೆಳ್ಳಿಯ ದೈವಾಭರಣ ಮತ್ತು ದೇವರ ಆಭರಣಗಳನ್ನು ಲಾಭ ರಹಿತವಾಗಿ ಕೇವಲ ತಯಾರಿಕಾ ವೆಚ್ಚದಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.ಹಿಂದೆ ‘ಮುಳಿಯ ಕೇಶವ ಭಟ್ ಆ್ಯಂಡ್ ಸನ್ಸ್’ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಸಂಸ್ಥೆಯುನ್ನು ೨೦೧೨ರಿಂದ ‘ಮುಳಿಯ ಜುವೆಲ್ಸ್’ ಎಂದು ಬದಲಾಯಿಸಿ ಹೊಸ ಬ್ರಾಂಡ್ ಸೃಷ್ಟಿಸಲಾಯಿತು. ಪ್ರಸ್ತುತ ‘ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್’ ಎಂದು ಮರುನಾಮಕರಣ ಮಾಡಲಾಗಿದೆ. ವಜ್ರಾಭರಣ ಪ್ರಿಯ ಗ್ರಾಹಕರಿಗಾಗಿ ಸ್ಪಂದಿಸಲಾಗಿದೆ. ‘ಇನ್ನಷ್ಟು ಹೊಸತನದೊಂದಿಗೆ- ಸದಾ ಸಂತೋಷಕ್ಕಾಗಿ’ ಎಂಬ ಘೋಷ ವಾಕ್ಯ ಬಿಡುಗಡೆ ಮಾಡಲಾಗಿದೆ. ಮುಳಿಯಕ್ಕೆ ಹೊಸ ಲೋಗೋ ಅಳವಡಿಸಲಾಗಿದೆ. ಮಿನುಗುವ ನಕ್ಷತ್ರ ಲೋಗೋದ ನಡುವಿನಲ್ಲಿದೆ. ಸಮೃದ್ಧಿಯ ಸಂಕೇತವಾದ ಬಿಳಿ ಆನೆ ಮರಿ ಚಿತ್ರವನ್ನು ಪ್ರತ್ಯೇಕವಾಗಿ ಫೋಕಸ್ ಮಾಡಲಾಗಿದೆ. ಸಂಸ್ಥೆಯನ್ನು ರಾಜ್ಯಮಟ್ಟದಲ್ಲಿ ವಿಸ್ತರಿಸಲಾಗುತ್ತಿದೆ. ಮುಂದೆ ಸಂಸ್ಥೆಯ ಬ್ರಾಂಡ್ ಅಂಬಾಸೀಡರ್ ಆಗಿ ಚಿತ್ರನಟ ರಮೇಶ್ ಅರವಿಂದ್ ಮುಂದುವರಿಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಳಿಯ ಬ್ರಾಂಚ್ ಮೆನೇಜರ್ ರಾಘವೇಂದ್ರ ಪಾಟೀಲ್, ಬ್ರಾಂಡ್ ಕನ್ಸಲ್ಟೆಂಟ್ ವೇಣು ಶರ್ಮ ಉಪಸ್ಥಿತರಿದ್ದರು.