ಪುತ್ತೂರು ಶ್ರೀ ಮಹಾಲಿಂಗೇಶ್ವರ ವಾರ್ಷಿಕ ಜಾತ್ರೋತ್ಸವ ಸಂಪನ್ನ

| Published : Apr 20 2024, 01:04 AM IST

ಪುತ್ತೂರು ಶ್ರೀ ಮಹಾಲಿಂಗೇಶ್ವರ ವಾರ್ಷಿಕ ಜಾತ್ರೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ದೇವರು ಸುಮಾರು ೧೦.೧೫ ಗಂಟೆಗೆ ದೇವಳಕ್ಕೆ ಹಿಂದಿರುಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ವಾರ್ಷಿಕ ಜಾತ್ರೋತ್ಸವ ಸಂಪನ್ನಗೊಂಡಿತು.

ಪುತ್ತೂರು: ಏ.೧೦ರಿಂದ ಆರಂಭಗೊಂಡು ಪ್ರತಿದಿನ ಬಲಿ ಉತ್ಸವ, ಕಟ್ಟೆಪೂಜೆಗಳೊಂದಿಗೆ ವೈಭವಯುತವಾಗಿ ನಡೆದ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಶುಕ್ರವಾರ ಬೆಳಗ್ಗೆ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು.

೧೮ರಂದು ಸಂಜೆ ದೇವರು ರಕ್ತೇಶ್ವರಿ ದೈವದೊಂದಿಗೆ ಮಾತುಕತೆ ನಡೆದು ಬಳಿಕ ಸುಮಾರು ೧೫ ಕಿ.ಮೀ. ದೂರದಲ್ಲಿರುವ ವೀರಮಂಗಲಕ್ಕೆ ಸಾವಿರಾರು ಭಕ್ತ ಜೊತೆಗೆ ಅವಭೃತ ಸ್ನಾನಕ್ಕಾಗಿ ತೆರಳಿದರು. ದಾರಿಮಧ್ಯೆ ೫೭ ಕಟ್ಟೆಗಳಲ್ಲಿ ದೇವರಿಗೆ ಕಟ್ಟೆಪೂಜೆ ನಡೆದು ಶುಕ್ರವಾರ ಬೆಳಗ್ಗಿನ ಜಾವ ವೀರಮಂಗಲ ತಲುಪಿ ಕುಮಾರಧಾರಾ ನದಿಯಲ್ಲಿ ಭಕ್ತರ ಸಮ್ಮುಖದಲ್ಲಿ ದೇವರ ಅವಭೃತ ಸ್ನಾನ ನಡೆಯಿತು. ಬಳಿಕ ದೇವರು ಸುಮಾರು ೧೦.೧೫ ಗಂಟೆಗೆ ದೇವಳಕ್ಕೆ ಹಿಂದಿರುಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ವಾರ್ಷಿಕ ಜಾತ್ರೋತ್ಸವ ಸಂಪನ್ನಗೊಂಡಿತು.