ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಸ್ವಾಮಿ ಕಲಾಮಂದಿರ ಆಶ್ರಯದಲ್ಲಿ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಜೂ. ೧ರಿಂದ ೭ವರೆಗೆ ಸಂಜೆ ೬ರಿಂದ ೮ರತನಕ ಬೈಪಾಸ್ ರಸ್ತೆಯ ದರ್ಶನ ಕಲಾಮಂದಿರದಲ್ಲಿ ನಡೆಯಲಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿಯ ಬಲರಾಮ ಆಚಾರ್ಯ ಮತ್ತು ಬಹುವಚನಂ ನ ಡಾ. ಶ್ರೀಶ ಕುಮಾರ್ ಎಂ. ಕೆ., ಪುತ್ತೂರಿನಲ್ಲಿ ಮೊದಲ ಬಾರಿಗೆ ಶ್ರೀ ವೇದವ್ಯಾಸ ವಿರಚಿತ ಪುರಾಣರಾಜ ಶ್ರೀಮದ್ಭಾಗವತ ಪ್ರವಚನವನ್ನು ಖ್ಯಾತ ವಾಗ್ಮಿ ವೀಣಾ ಬನ್ನಂಜೆ ನಡೆಸಲಿದ್ದಾರೆ. ಸನಾತನ ಧರ್ಮದ ಅರಿವನ್ನು ನೀಡುವ ನಿಟ್ಟಿನಲ್ಲಿ ಪ್ರವಚನವನ್ನು ಏರ್ಪಡಿಸಲಾಗಿದ್ದು, ೬೦೦ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಮುಂದಿನ ಪೀಳಿಗೆಗೆ ವಿಚಾರಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಸಪ್ತಾಹದಲ್ಲಿ ಶ್ರೀಮದ್ಭಾಗವತದ ಸಾರ ತಿಳಿಸುವ ಕಾರ್ಯ ನಡೆಯಲಿದ್ದು, ಆಧ್ಯಾತ್ಮದ ಕಡೆಗೆ ಒಲವಿರುವ ಪ್ರತಿಯೊಬ್ಬರು ಪ್ರವಚನದಲ್ಲಿ ಭಾಗವಹಿಸಬಹುದಾಗಿದೆ. ಜನರ ಆಸಕ್ತಿ ಗಮನಿಸಿಕೊಂಡು ಪ್ರವಚನವನ್ನು ಮುಂದಿನ ದಿನ ಮುಂದುವರಿಸುವ ನಿರ್ಧಾರ ಮಾಡಲಾಗುವುದು ಎಂದರು.ಜೂ.೧ರಂದು ಸಂಜೆ ನಿವೃತ್ತ ಸರ್ಕಾರಿ ವೈದ್ಯ ಡಾ. ರಘು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿ.ಎಲ್. ಸಮೂಹ ಸಂಸ್ಥೆಯ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೂ.೭ರಂದು ಸಂಜೆ ನಡೆಯುವ ಭಗವದರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಹಿಸಲಿದ್ದಾರೆ. ಭಗವದರ್ಪಣೆಯ ಮಾತನ್ನು ಚಿಂತಕ ಲಕ್ಷ್ಮೀಶ ತೋಳ್ಪಾಡಿ ನಡೆಸಲಿದ್ದಾರೆ. ಬಿರುಮಲೆ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಸ್ವಾಮಿ ಕಲಾ ಮಂದಿರದ ಮಾಧವ ಸ್ವಾಮಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))