ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ

| Published : Sep 23 2024, 01:18 AM IST

ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘವು ಪ್ರತಿವರ್ಷವೂ ಅಶಕ್ತರಿಗೆ ವೀಲ್ ಚೇರ್‌ ವಿತರಣೆ ಮಾಡುತ್ತಿದೆ. ಈ ವರ್ಷವೂ ವೀಲ್ ಚೇರ್‌, ವಾಕರ್, ವಾಕಿಂಗ್ ಸ್ಟಿಕ್ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ನೆಲ್ಯಾಡಿಯಲ್ಲಿ ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ೨೦೨೩-೨೪ನೇ ಸಾಲಿನಲ್ಲಿ ಸಂಘವು ೩೪.೫೪ ಕೋಟಿ ರು. ವ್ಯವಹಾರ ಮಾಡಿದೆ. ಕಳೆದ ಸಾಲಿನಲ್ಲಿ ಸಂಘವು ೨೬.೫೬ ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ರಬ್ಬರ್‌ಗೆ ೫೦ ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು.ಸಂಘವು ಪ್ರತಿವರ್ಷವೂ ಅಶಕ್ತರಿಗೆ ವೀಲ್ ಚೇರ್‌ ವಿತರಣೆ ಮಾಡುತ್ತಿದೆ. ಈ ವರ್ಷವೂ ವೀಲ್ ಚೇರ್‌, ವಾಕರ್, ವಾಕಿಂಗ್ ಸ್ಟಿಕ್ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ಸಂಘವು ೧,೩೮,೭೧,೨೯೬ ರು. ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿದೆ. ಪುತ್ತೂರು ತಾಲೂಕಿನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವಲ್ಲಿ ನಮ್ಮ ಸಂಘವು ಪ್ರಥಮ ಸ್ಥಾನದಲ್ಲಿದೆ. ೨೩-೨೪ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ರಬ್ಬರ್ ಹಾಕಿದ ತಲಾ ಮೂವರು ಸದಸ್ಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಸಭೆಯಲ್ಲಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕ ಸಿ.ಜೋಜು ಕುಟ್ಟಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್ ಎಸ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್ ಬಿ., ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ವರದಿ ಮಂಡಿಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸ್ವಾಗತಿಸಿ, ರಾಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ರುಕ್ಮಯ ಕಾರ್ಯಕ್ರಮ ನಿರೂಪಿಸಿದರು.