ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಪದವಿ ಹಾಗೂ ೨೦೨೩-೨೪ ಮತ್ತು ೨೦೨೪-೨೫ ನೇ ಶೈಕ್ಷಣಿಕ ವರ್ಷಗಳ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಥಮ ಪದವಿ ಪ್ರದಾನ ಸಮಾರಂಭ ‘ಸಪ್ತಪರ್ಣೋತ್ಸವ’ ಕಾರ್ಯಕ್ರಮ 21ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ಪ್ರಥಮ ಸಪ್ತಪರ್ಣೊತ್ಸವ ಭಾಷಣ ಮಾಡಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಕವಿತಾ ಕೆ.ಆರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹಾಗೂ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.ರ್‍ಯಾಂಕ್ ಪ್ರದಾನ ಕಾರ್ಯಕ್ರಮ:


ಮಹಾವಿದ್ಯಾಲಯವು ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಒಟ್ಟು ಎಂಟು ರ್‍ಯಾಂಕ್‌ಗಳನ್ನು ಘೋಷಿಸಿದೆ. ಬಿ.ಎ ವಿಭಾಗದಲ್ಲಿ ವೈಷ್ಣವಿ ಶೆಟ್ಟಿ (೯೮.೬೨%) ಪ್ರಥಮ ರ್‍ಯಾಂಕ್‌ ಬಿಎಸ್ಸಿ ವಿಭಾಗದಲ್ಲಿ ಧನ್ಯಶ್ರೀ ಸಿ.ಡಿ (೯೬.೧೭%) ಪ್ರಥಮ ರ್‍ಯಾಂಕ್‌, ಬಿಬಿಎ ವಿಭಾಗದಲ್ಲಿ ತನಿಷಾ ಬಿ (೯೩.೩೭%) ಪ್ರಥಮ ರ್‍ಯಾಂಕ್‌, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ಕೆ. (೯೬.೬೫%) ಪ್ರಥಮ ರ್‍ಯಾಂಕ್‌ ಹಾಗೂ ಅಮೃತಾ (೯೬.೫೧%) ದ್ವಿತೀಯ.ಬಿಸಿಎ ವಿಭಾಗದಲ್ಲಿ ಚೈತ್ರಾಯು.ಎಂ (೯೬.೨೯%) ಪ್ರಥಮ ರ್‍ಯಾಂಕ್‌, ಮೇಘನಾ (೯೫.೮೨%) ದ್ವಿತೀಯ ರ್‍ಯಾಂಕ್‌ ಹಾಗೂ ದೀಕ್ಷಾ ಬಿ (೯೪.೨೨%) ತೃತೀಯ ರ್‍ಯಾಂಕ್‌ ಪಡೆದಿರುತ್ತಾರೆ. ಸ್ನಾತಕೋತ್ತರ ಪದವಿಯಲ್ಲಿ ೨೦೨೩-೨೪ರಸಾಲಿನಲ್ಲಿ ಒಟ್ಟು ನಾಲ್ಕು ರ್‍ಯಾಂಕ್‌ಗಳು ಲಭಿಸಿದ್ದು ಎಂಕಾಂ ವಿಭಾಗದಲ್ಲಿ ಧನ್ಯಾಶ್ರೀ ಐ (೯.೦೩ ಸಿಜಿಪಿಎ) ಪ್ರಥಮ ರ್‍ಯಾಂಕ್‌, ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ವಂದನಾ ಎಸ್.ಎಂ (೮.೦೧ ಸಿಜಿಪಿಎ) ಪ್ರಥಮ ರ್‍ಯಾಂಕ್‌, ಎಂಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ವಿದ್ಯಾ ವಿ (೭.೦೫ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಹಾಗೂ ಜೆಎಂಸಿ ವಿಭಾಗದಲ್ಲಿ ಲಾವಣ್ಯ ಎಸ್ (೮.೬೬ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಗಳಿಸಿರುತ್ತಾರೆ.೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಮೂರು ರ್‍ಯಾಂಕ್‌ಗಳು ಲಭಿಸಿದ್ದು ಎಂಕಾಂವಿಭಾಗದಲ್ಲಿ ಲಾವಣ್ಯ ಕೆ (೮.೮೩ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಎಂಎಸ್ಸಿ ರಸಾಯನಶಾಸ್ತ್ರದಲ್ಲಿ ಮನಸ್ವಿ ಪಿ (೭.೫೭ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಹಾಗೂ ಜೆಎಂಸಿಯಲ್ಲಿ ಸುಲಕ್ಷಣಾ ಕೆ (೮.೨೨ ಸಿಜಿಪಿಎ) ಪ್ರಥಮ ರ್‍ಯಾಂಕ್‌ ಪಡೆರುತ್ತಾರೆ. ರ್‍ಯಾಂಕ್‌ ವಿಜೇತರಿಗೆ ಸಪ್ತಪರ್ಣೋತ್ಸವ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ರ‍್ಯಾಂಕ್ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು ಹಾಗೂ ದತ್ತಿ ನಿಧಿ ಮತ್ತು ಪ್ರಾವೀಣ್ಯತಾ ಬಹುಮಾನಗಳ ಪ್ರದಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಮತ್ತು ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ. ತಿಳಿಸಿದ್ದಾರೆ.