ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನಡೆದಿದ್ದು, ವೈಯಕ್ತಿಕ ವಿಭಾಗದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಹೃಷಿಕೇಶ್ ಪ್ರಥಮ ಸ್ಥಾನ, ಗುಂಪು ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಮರ್ಥ್ ಸುಮಂತ್ ಮತ್ತು ಆರ್ಯನ್ ಪಿ.ಎಲ್. ಪ್ರಥಮ ಸ್ಥಾನ ಪಡೆದರು.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನಡೆದಿದ್ದು, ವೈಯಕ್ತಿಕ ವಿಭಾಗದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಹೃಷಿಕೇಶ್ ಪ್ರಥಮ ಸ್ಥಾನ, ಗುಂಪು ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಮರ್ಥ್ ಸುಮಂತ್ ಮತ್ತು ಆರ್ಯನ್ ಪಿ.ಎಲ್. ಪ್ರಥಮ ಸ್ಥಾನ ಪಡೆದರು.

ವಿಜ್ಞಾನ ವಸ್ತುಪ್ರದರ್ಶನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ ಮಾತನಾಡಿ, ವಿದ್ಯಾರ್ಥಿಗಳು ಆತ್ಮಸ್ಥೈರ್ಯದೊಂದಿಗೆ ವೈಜ್ಞಾನಿಕ ಮನೋಭಾವ ಮತ್ತು ಕಾರ್ಯತಂತ್ರ ಮೂಡಿಸಿಕೊಳ್ಳಬೇಕು ಎಂದರು.

ವೈಯಕ್ತಿಕ ವಿಭಾಗದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಹೃಷಿಕೇಶ್ ಪ್ರಥಮ ಸ್ಥಾನ, ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಕೆ. ದ್ವಿತೀಯ ಸ್ಥಾನ, ಅಲಂಕಾರಿನ ಶ್ರೀ ದುರ್ಗಾಂಬ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಅಲ್ವಿನ್ ಕೆ ಎಸ್ ತೃತೀಯ ಸ್ಥಾನ ಪಡೆದರು.

ಗುಂಪು ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ 8ನೇ ತರಗತಿಯ ಸಮರ್ಥ್ ಸುಮಂತ್ ಮತ್ತು ಆರ್ಯನ್ ಪಿ ಎಲ್ ಪ್ರಥಮ ಸ್ಥಾನ, ಶ್ರೀರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ಅಭಿಷೇಕ್ ಪ್ರಭು ಮತ್ತು ಉದಿತ್ ಟಿ ದ್ವಿತೀಯ ಸ್ಥಾನ, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿಯ ಪ್ರಜ್ವಲ್ ರಾವ್ ಮತ್ತು ಶ್ರವಣ್ ಕುಮಾರ್ ತೃತೀಯ ಸ್ಥಾನ ಪಡೆದುಕೊಂಡರು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಜಲಜಾಕ್ಷಿ, ಶಿಕ್ಷಣ ಸಂಯೋಜಕ ಅಮೃತಾ ಕಲಾ, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಇದ್ದರು. ಅಂಬಿಕಾ ವಿದ್ಯಾಲಯದ ಶಿಕ್ಷಕಿ ವೀಣಾ ಸರಸ್ವತಿ ನಿರೂಪಿಸಿದರು.