ಬಿಜೆಪಿ ಕಚೇರಿಯಲ್ಲಿ ದೀಪೋತ್ಸವ, ವಠಾರದಲ್ಲಿ ಮೋದಿ ಚಹಾ ವಿತರಣೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಿಮ ತುಪ್ಪದ ದೀಪ ಬೆಳಗಿಸಲಾಯಿತು.

ಪುತ್ತೂರು : ದೇಶ ಮೊದಲು ಎಂಬ ಚಿಂತನೆ ಹಾಗೂ ಸಂದೇಶವನ್ನು ಜನರಲ್ಲಿ ಬಿತ್ತುವ ಕಾರ್ಯವಾಗಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ, ಸೇವಾ ಸಂಕಲ್ಪ ಅಭಿಯಾನದ ಆಚರಣೆ ವೇಳೆ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಮಾಸಿಕ ಕಾರ್ಯಕ್ರಮಗಳನ್ನು ಅ.೧೭ರವರೆಗೆ ವಿವಿಧ ಸೇವಾ ಹಾಗೂ ಜನಸಂಪರ್ಕ ಚಟುವಟಿಕೆಗಳನ್ನು ನಡೆಸಬೇಕು ಎಂದು ಹೇಳಿದರು.

ಬಿಜೆಪಿ ಕಚೇರಿಯಲ್ಲಿ ದೀಪೋತ್ಸವ, ವಠಾರದಲ್ಲಿ ಮೋದಿ ಚಹಾ ವಿತರಣೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಸಿಮ ತುಪ್ಪದ ದೀಪ ಬೆಳಗಿಸಲಾಯಿತು. ಬಳಿಕ ಬಿಜೆಪಿ ಕಚೇರಿಯಲ್ಲಿ ದೀಪ ಪ್ರಜ್ವಲನೆಯ ಮೂಲಕ ಎಲ್ಲರು ಹಣತೆ ಬೆಳಗಿಸಿ ದೀಪೋತ್ಸವ ಆಚರಿಸಿದರು.ಬಿಜೆಪಿ ಕಚೇರಿ ಬಳಿಕಾರ್ಯಕರ್ತರಿಗೆ ಸಾರ್ವಜನಿಕರಿಗೆ ಚಹಾ, ಬಿಸ್ಕತ್ ಮತ್ತು ಲಾಡು ವಿತರಿಸಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್ ಚಾಕೋಟೆ, ಸುನಿಲ್ ದಡ್ಡು, ಶಶಿಧರ್ ನಾಯಕ್, ಯುವರಾಜ್, ಜಯಲಕ್ಷ್ಮೀ ಶಗ್ರಿತ್ತಾಯ, ಮಹಿಳಾ ಮೋರ್ಚಾ ನಗರ ಮಂಡಲದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಾ ಗೌಡ, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು, ಗ್ರಾಮಾಂತರ ಮಾದ್ಯಮ ವಕ್ತಾರ ಮಹೇಶ್ ಕೇರಿ ಮತ್ತಿತರರಿದ್ದರು.