ಪುತ್ತೂರು: ವೈದ್ಯರಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಬಹು ಮಂದಿ ಹೆತ್ತವರೂ ತಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣ ಹೊಂದಿ ಸಮಾಜದಲ್ಲಿ ಪ್ರತಿಷ್ಠಿತ ವೈದ್ಯರೆನಿಸಬೇಕೆಂಬ ಕನಸನ್ನು ಹೊಂದಿಯೇ ಇರುತ್ತಾರೆ.
ಈ ನೆಲೆಯಲ್ಲಿ ಪಿಯು ಹಂತದ ಕ್ಷಣದ ಜತೆ ಜತೆಗೆ ನೀಟ್ ಪರೀಕ್ಷಾ ತರಬೇತಿಗೂ ಹಲವಾರು ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುವುದಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ಅವರು ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಪ್ರಧಾನ.ಏತನ್ಮಧ್ಯೆ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವಲ್ಲಿ ಸಫಲರಾಗದ ಹಲವು ವಿದ್ಯಾರ್ಥಿಗಳು ನೀಟ್ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ ಹೊಂದಿ ಮುಂದಿನ ಒಂದು ವರ್ಷ ಪೂರ್ತಿ ನೀಟ್ ತರಬೇತಿಯನ್ನಷ್ಟೇ ಪಡೆದು ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳುವುದಿದೆ. ಅತ್ಯುತ್ತಮ ತರಬೇತಿ ದೊರಕಿ, ಸಾಕಷ್ಟು ಪ್ರಯತ್ನ ನಡೆಸಿದರೆ ರಿಪೀಟರ್ಸ್ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕೈಗೆಟಕುವಂತೆ ಮಾಡುವುದು ಕಷ್ಟಸಾಧ್ಯವೇನಲ್ಲ.
ಹೀಗೆ ದ್ವಿತೀಯ ಪಿಯು ಪೂರೈಸಿ ತಕ್ಷಣ ನೀಟ್ ಪರೀಕ್ಷೆಯನ್ನೂ ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ಎಡವಿದ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡದ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ನೀಟ್ ಅಕಾಡೆಮಿಯು ಕಳೆದ ಮೂರು ವರ್ಷಗಳಿಂದ ‘ನೀಟ್ ರಿಪೀಟರ್ಸ್ ಬ್ಯಾಚ್’ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ‘ಅಂಬಿಕಾ’ ನೀಟ್ ಪರೀಕ್ಷೆಗೆ ಅತ್ಯುತ್ಕೃಷ್ಟ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷವೂ ಈ ಸಂಸ್ಥೆಯಿಂದ ಹಲವಾರು ಮಂದಿ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಹೊಂದುತ್ತಿದ್ದಾರೆ.ಪ್ರತಿ ದಿನ ಪ್ರಾಯೋಗಿಕ ಅನುಭವ, ವಾರಕ್ಕೊಮ್ಮೆ ಪರೀಕ್ಷೆಗಳನ್ನು ಈ ನೀಟ್ ರಿಪೀಟರ್ಸ್ ತರಗತಿಗಳಲ್ಲಿ ನಡೆಸಲಾಗುತ್ತದೆ. ತತ್ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ನೀಟ್ ಸಿಲೆಬಸ್‌ನ ಪ್ರತಿಯೊಂದು ವಿಷಯಗಳಲ್ಲೂ ಮಾದರಿ ಪರೀಕ್ಷೆ ನಡೆದಂತಹ ಅನುಭವ ಲಭ್ಯವಾಗಿ ಅಂತಿಮ ಪರೀಕ್ಷೆ ಸುಲಭ ಸಾಧ್ಯವೆನಿಸುತ್ತದೆ. ಜತೆಗೆ ಅನುಭವಿ ಪ್ರಾಧ್ಯಾಪಕರಿಂದ ನಿರಂತರ ಸಲಹೆ ಸೂಚನೆಗಳು, ಪರಸ್ಪರ ಸಂವಹನದ ಮೂಲಕ ಚರ್ಚಾ ತರಗತಿಗಳು, ವ್ಯಾಪಕ ಓದಿಗೆ ಪೂರಕವಾದ ಅಧ್ಯಯನ ಸಾಮಗ್ರಿಗಳು ಹೀಗೆ ಹತ್ತು ಹಲವು ವಿಷಯಗಳನ್ನು ನೀಟ್ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ನೀಟ್ ಪರೀಕ್ಷೆ ಬರೆದವರಲ್ಲಿ ೨:೩ ಅನುಪಾತದಲ್ಲಿ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳನ್ನು ಪ್ರವೇಶಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲೂ ತೀವ್ರ ನಿಗಾ ಇರಿಸಿ ಆ ವಿದ್ಯಾರ್ಥಿಯು ತನ್ನ ಗುರಿಯನ್ನು ಈಡೇರಿಸಿಕೊಳ್ಳುವಂತೆ ನಮ್ಮ ಸರ್ವ ಸಹಕಾರವನ್ನೂ ನೀಡಲಾಗುತ್ತದೆ. ನಮ್ಮಲ್ಲಿಗೆ ಬಂದ ವಿದ್ಯಾರ್ಥಿಗಳು ನೂರು ಪ್ರತಿಶತ ತಮ್ಮ ಗುರಿಯನ್ನು ಸಾಧಿಸಬೇಕೆಂಬುದೇ ನಮ್ಮ ಕನಸು ಎನ್ನುವುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ ಅವರ ಮಾತು.
ನೀಟ್ ರಿಪೀಟರ್ಸ್ ಬ್ಯಾಚ್‌ಗೆ ದಾಖಲಾತಿ ಹೊಂದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವೂ ಲಭ್ಯವಿದೆ. ಬೆಂಗಳೂರು, ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ನೀಟ್ ಪರೀಕ್ಷಾ ತರಬೇತಿ ಪುತ್ತೂರಿನ ಅಂಬಿಕಾದಲ್ಲಿ ದೊರಕುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಮೊದಲ ಪ್ರಯತ್ನದಲ್ಲಿ ವೈದ್ಯಕೀಯ ಶಿಕ್ಷಣದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂಬಿಕಾದ ನೀಟ್ ರಿಪೀಟರ್ಸ್ ಬ್ಯಾಚ್ ವರದಾನವಾಗಿ ಪರಿಣಮಿಸಿದೆ.
ಈ ಬಾರಿಯ ನೀಟ್ ರಿಪೀಟರ್ಸ್ ಬ್ಯಾಚ್ ದಾಖಲಾತಿ ನಡೆಯುತ್ತಿದ್ದು, ಹಲವಾರು ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಸದ್ಯದಲ್ಲೇ ತರಗತಿಗಳು ಆರಂಭಗೊಳ್ಳಲಿದ್ದು, ಆಸಕ್ತರು ೯೪೮೨೮೨೨೮೦೦ / ೯೪೪೮೮೩೫೪೮೮ / ೯೭೪೧೪೮೧೬೦೦ ಸಂಖ್ಯೆಗೆ ಕರೆ ಮಾಡಬಹುದು.