ಯುವಶಕ್ತಿ ಎನ್ನುವುದು ಒಂದು ರಾಷ್ಟ್ರದ ಶಕ್ತಿ. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಅದು ಒಂದು ಉತ್ತಮ ಶಕ್ತಿಯಾಗಿ ಹೊರಹೊಮ್ಮುತ್ತದೆ. ಯಶಸ್ಸನ್ನು ಸಾಧಿಸಬೇಕಾದರೆ ಧೈರ್ಯ, ಶಿಸ್ತು ಮತ್ತು ಪರಿಶ್ರಮ ಈ ಮೂರು ಅಂಶಗಳು ನಮ್ಮಲ್ಲಿರಬೇಕು ಎಂದು ಉಡುಪಿಯ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಹೇಳಿದ್ದಾರೆ.

ಪುತ್ತೂರು: ಯುವಶಕ್ತಿ ಎನ್ನುವುದು ಒಂದು ರಾಷ್ಟ್ರದ ಶಕ್ತಿ. ಇದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಅದು ಒಂದು ಉತ್ತಮ ಶಕ್ತಿಯಾಗಿ ಹೊರಹೊಮ್ಮುತ್ತದೆ. ಯಶಸ್ಸನ್ನು ಸಾಧಿಸಬೇಕಾದರೆ ಧೈರ್ಯ, ಶಿಸ್ತು ಮತ್ತು ಪರಿಶ್ರಮ ಈ ಮೂರು ಅಂಶಗಳು ನಮ್ಮಲ್ಲಿರಬೇಕು ಎಂದು ಉಡುಪಿಯ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಹೇಳಿದ್ದಾರೆ.

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇದರ ಸಹಯೋಗದಲ್ಲಿ ಗುರುವಾರ ನಡೆದ ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ವಿವೇಕಾನಂದರು ಒಬ್ಬ ದೇಶ ನಾಯಕ. ಇವರು ರೋಮಾಂಚನಕಾರಿಯಾದ ವ್ಯಕ್ತಿತ್ವ ಹೊಂದಿದ್ದು, ಸಾಮಾಜಿಕ ಚಿಂತನೆಗಳನ್ನು ಜನತೆಗೆ ನೀಡಿದ್ದಾರೆ. ಇವರು ಸಿದ್ಧಿ ಪುರುಷ ಎಂದೇ ಪ್ರಸಿದ್ಧರಾದವರು. ಭಾರತ ದೇಶದ ಸಂಸ್ಕೃತಿ ಕೇವಲ ಇಲ್ಲಿಗೆ ಮಾತ್ರ ಸೀಮಿತವಾಗಿರದೆ ಹೊರದೇಶಕ್ಕೂ ತಲುಪಿದೆ ಎಂದರು.

ಪ್ರಾಂಶುಪಾಲ ಮುರಳೀಧರ್ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ಹಾಜರಿದ್ದರು.

ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ವಿಜಯಸರಸ್ವತಿ ಸ್ವಾಗತಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ್ ಎಸ್ ವಂದಿಸಿದರು. ಸ್ನಾತಕೋತ್ತರ ಎಂಕಾಂ ವಿಭಾಗದ ವಿದ್ಯಾರ್ಥಿನಿ ಅನನ್ಯಾ ಎಸ್ ನಿರೂಪಿಸಿದರು.