ಸಾರಾಂಶ
ಸಂಜೆ ಶ್ರೀ ದೇವಸ್ಥಾನದ ಕೆ. ರಾಜನ್ ಮತ್ತು ಬಳಗದವರಿಂದ ನಾಗಸ್ವರ ಮತ್ತು ಸ್ಯಾಕ್ಸೋಫೋನ್ ಕಛೇರಿ, ಬಳಿಕ ಶ್ರೀ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘ ಶರವು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶರಭೇಶ್ವರ ಮತ್ತು ಮಹಾಗಣಪತಿ ದೇವರ ಸಂಭ್ರಮದ ರಥೋತ್ಸವ ಮಂಗಳವಾರ ನಡೆಯಿತು.ಬೆಳಗ್ಗೆ ರಥಕಲಶ ನಡೆದು ಬಳಿಕ ಮಹಾಪೂಜೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾರಥೋತ್ಸವ ನಡೆಯಿತು. ಬಳಿಕ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆದಿದ್ದು, ಸಹಸ್ರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೊಡ್ಡ ರಥೋತ್ಸವ, ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ನಡೆಯಿತು.ಈ ಸಂದರ್ಭ ದೇವಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಸುದೇಶ್ ಶಾಸ್ತ್ರಿ, ರಾಹುಲ್ ಶಾಸ್ತ್ರಿ ಮತ್ತಿತರರು ಇದ್ದರು.ಸಂಜೆ ಶ್ರೀ ದೇವಸ್ಥಾನದ ಕೆ. ರಾಜನ್ ಮತ್ತು ಬಳಗದವರಿಂದ ನಾಗಸ್ವರ ಮತ್ತು ಸ್ಯಾಕ್ಸೋಫೋನ್ ಕಛೇರಿ, ಬಳಿಕ ಶ್ರೀ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘ ಶರವು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು.ಇಂದಿನ ಕಾರ್ಯಕ್ರಮ:
ಏ.17ರಂದು ಬೆಳಗ್ಗೆ 7.00ಕ್ಕೆ ಕವಾಟೋದ್ಘಾಟನೆ, 10 ಗಂಟೆಗೆ ಓಕುಳಿ, ರಾತ್ರಿ 8.30ಕ್ಕೆ ಬಲಿ ಉತ್ಸವ, ರಥೋತ್ಸವ, ಬೆಡಿಮದ್ದು ಸುಡುವುದು (ಬೆಡಿಕಂಬ). ರಾತ್ರಿ 11.00ಕ್ಕೆ ಅವಭೃತ ಸ್ನಾನ, ಧ್ವಜಾವರೋಹಣ. ರಾತ್ರಿ 12.00ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.ರಾತ್ರಿ 7.30ಕ್ಕೆ ಮಲ್ಲಿಕಾ ಕಲಾವೃಂದದಿಂದ ವಾದ್ಯಗೋಷ್ಠಿ ಮತ್ತು ಭಕ್ತಿ ಮಂಜರಿ, ಸಂಜೆ 6.00ರಿಂದ ಸಮಾರೋಪ ಸಮಾರಂಭ ಹಾಗೂ ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.