ಸ್ವಚ್ಛತೆ, ಸಿಬ್ಬಂದಿ ಕಾರ್ಯನಿರ್ವಹಣೆ ಉತ್ತಮ ಪಡಿಸಲು ಕ್ಯೂಆರ್‌ ಕೋಡ್‌

| Published : May 18 2025, 01:19 AM IST

ಸ್ವಚ್ಛತೆ, ಸಿಬ್ಬಂದಿ ಕಾರ್ಯನಿರ್ವಹಣೆ ಉತ್ತಮ ಪಡಿಸಲು ಕ್ಯೂಆರ್‌ ಕೋಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಸ್ ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ "ನಮ್ಮ ಬಸ್ ನಿಲ್ದಾಣ- ಸ್ವಚ್ಛ ಬಸ್ ನಿಲ್ದಾಣ " ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ: ಬಸ್ ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕಸ್ನೇಹಿಯಾಗುಸುವ ನಿಟ್ಟಿನಲ್ಲಿ ಸ್ವಚ್ಚತೆ, ಶೌಚಾಲಯಗಳ ನಿರ್ವಹಣೆ ಹಾಗೂ ಸಿಬ್ಬಂದಿ ಕಾರ್ಯವೈಖರಿ ಉತ್ತಮಪಡಿಸಲು ಸಾರ್ವಜನಿಕರು ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಮುದ್ರಿತ ಕ್ಯೂ ಆರ್ ಕೋಡ್ ಹಾಗೂ ಜಾಗೃತಿ ಭಿತ್ತಿಪತ್ರಗಳನ್ನು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಬಿಡುಗಡೆ ಮಾಡಿದರು.

ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಬಸ್ ನಿಲ್ದಾಣಗಳನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ "ನಮ್ಮ ಬಸ್ ನಿಲ್ದಾಣ- ಸ್ವಚ್ಛ ಬಸ್ ನಿಲ್ದಾಣ " ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ, ಪ್ರಯಾಣಿಕರ ಅಭಿಪ್ರಾಯ ಹಾಗೂ ಸುಧಾರಣೆಗೆ ಸಲಹೆಗಳನ್ನು ಪಡೆಯಲು ಕ್ಯೂ ಆರ್ ಕೋಡ್ ರೂಪಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಮೊಬೈಲ್ ನಿಂದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಬಸ್ ನಿಲ್ದಾಣ ಸ್ವಚ್ಛತೆ, ಶೌಚಾಲಯ ನಿರ್ವಹಣೆ, ಕುಡಿಯುವ ನೀರಿನ ವ್ಯವಸ್ಥೆ, ಬಸ್ ಗಳ ವೇಳಾಪಟ್ಟಿ ಪ್ರದರ್ಶನ, ತ್ಯಾಜ್ಯ ವಿಲೇವಾರಿ, ಶೌಚಾಲಯ ಬಳಕೆ ದರ ಪಟ್ಟಿ ಅಳವಡಿಕೆ, ಪ್ರಯಾಣಿಕರೊಂದಿಗೆ ಸಾರಿಗೆ ನಿಯಂತ್ರಕರ ಸೌಜನ್ಯದ ವರ್ತನೆ ಮುಂತಾದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಾಗೂ ಬಸ್ ನಿಲ್ದಾಣದ ಕುರಿತು ಒಟ್ಟಾರೆ ರೇಟಿಂಗ್ ಮತ್ತು ಸುಧಾರಣೆಗೆ ಸಲಹೆಗಳನ್ನು ನೀಡಬಹುದಾಗಿದೆ. ಇದರಿಂದ ಬಸ್ ನಿಲ್ದಾಣಗಳ ಸುಧಾರಣೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಅನಿಸಿಕೆ,ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

ಅಧಿಕಾರಿಗಳಾದ ಡಿ.ಟಿ.ಒ. ಸಂಗಪ್ಪ ಮಾಟೋಳಿ, ಡಿ.ಎಂ.ಇ. ದೀಪಕ ಜಾಧವ, ಡಿಪೋ ಮ್ಯಾನೇಜರ್‌ ವಿನೋದ ಅಮ್ಮಣಗಿ, ನಿಲ್ದಾಣಾಧಿಕಾರಿ ವಿ.ಎಸ್. ಹಂಚಾಟೆ, ಸಾರಿಗೆ ನಿಯಂತ್ರಕರು, ಕಾರ್ಮಿಕ ಸಂಘಟನೆಗಳ ಮುಖಂಡರಾದ ಆರ್.ಎಫ್.ಕವಳಿಕಾಯಿ, ಗಂಗಾಧರ ಕಮಲದಿನ್ನಿ, ಅಣ್ಣಪ್ಪ ಯಾವಗಲ್ ಮತ್ತಿತರರು ಇದ್ದರು.