ಸಾರಾಂಶ
ರಾಣಿಬೆನ್ನೂರು: ಹೋಮ ಹವನಾದಿ, ಪೂರ್ಣಾಹುತಿಗಳಿಗೆ ಹಿಂದೂ ಧರ್ಮದಲ್ಲಿ ಮೊದಲಿನಿಂದಲೂ ವಿಶೇಷ ಪ್ರಾಮುಖ್ಯತೆಯಿದೆ ಎಂದು ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯರು ನುಡಿದರು. ತಾಲೂಕಿನ ಮುಷ್ಟೂರ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಕಾರ್ತಿಕೋತ್ಸವದ ಪ್ರಯುಕ್ತ ಶನಿವಾರ ಏರ್ಪಡಿಸಿಲಾಗಿದ್ದ ಅಭಿಷೇಕ, ಹೋಮ, ಹವನ, ಪೂರ್ಣಾಹುತಿ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಮಾಡುವುದರಿಂದ ಮನೆ ಹಾಗೂ ಪರಿಸರದಲ್ಲಿನ ನಕಾರಾತ್ಮಕ ಶಕ್ತಿಯು ದೂರವಾಗಿ ಗುಣಾತ್ಮಕ ಶಕ್ತಿಯು ನೆಲೆಸುತ್ತದೆ. ಪ್ರಾಚೀನ ಯುಗದಿಂದಲೂ ಈ ಪರಂಪರೆ ಈಗಲೂ ಮನುಷ್ಯರಿಂದ ಮುನ್ನಡೆಯುತ್ತಾ ಬಂದಿರುವುದೇ ಹೋಮಕ್ಕಿರುವ ಮಹಿಮೆಗೆ ಜ್ವಲಂತ ಸಾಕ್ಷಿಯಾಗಿದೆ. ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ ವೈಜ್ಞಾನಿಕವಾಗಿ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ ಎಂದು ಇತಿಹಾಸಗಳಿಂದ ತಿಳಿದು ಬಂದಿದೆ ಎಂದರು.ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಗೌಡ ಪಾಟೀಲ, ಪ್ರಭು ತಳವಾರ, ರಾಜುಗೌಡ ಪಾಟೀಲ, ಮಂಜಣ್ಣ ಹಲ್ಡಲ್ಡರ, ಆನಂದರೆಡ್ಡಿ ಎರೇಕುಪ್ಪಿ, ಮಾಲತೇಶ ಅಜರೆಡ್ಡಿ, ಪ್ರಕಾಶ ಎರೇಶಿಮಿ, ಜಯಣ್ಣ ಮಡಿವಾಳರ, ನಿಂಗನಗೌಡ ಪಾಟೀಲ, ಅಶೋಕ ಮಡಿವಾಳರ, ಗುರನಗೌಡ ಪಾಟೀಲ, ಕಾಂತೇಶ ತಳವಾರ, ಹನುಮಂತಪ್ಪ ಬೆಳಕೇರಿ, ತಿರಕಪ್ಪ ಹೊನ್ನತ್ತಿ, ಬಸವಣ್ಣೆಪ್ಪ ದೇವರಮನಿ, ಡಿಳ್ಳೆಪ್ಪ, ಗಂಗಣ್ಣನವರ, ಅಣ್ಣಪ್ಪ ತಳವಾರ, ಷಣ್ಮುಖ ಮಡಿವಾಳರ, ಗಂಗಾಧರ ಕಮ್ಮಾರ, ರುದ್ರೇಶ ಹೊನ್ನತ್ತಿ, ಅರ್ಚಕರಾದ ಗಣೇಶ, ಪ್ರಕಾಶ, ಶಿವಪ್ಪ ಹಾಗೂ ಸಮಿತಿಯ ಪದಾಧಿಕಾರಿಗಳು ಮಹಿಳೆಯರು ಇದ್ದರು.