ಗುಣಾತ್ಮಕ ತಾಂತ್ರಿಕ ಶಿಕ್ಷಣ ಇಂದಿನ ಅಗತ್ಯ

| Published : Dec 23 2023, 01:45 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ 1ವಾರದ ಅವಧಿಯ ಎಫ್‌ಡಿಪಿ-ಸಿಬ್ಬಂದಿ ಅಭಿವೃದ್ದಿ ಕಾರ್ಯಾಗಾರಕ್ಕೆ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಚಾಲನೆ ನೀಡಿದರು.

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ 1ವಾರದ ಅವಧಿಯ ಎಫ್‌ಡಿಪಿ-ಸಿಬ್ಬಂದಿ ಅಭಿವೃದ್ದಿ ಕಾರ್ಯಾಗಾರಕ್ಕೆ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಚಾಲನೆ ನೀಡಿದರು.

ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರಗಳು ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿದ್ದು, ಹಲವು ರಚನಾತ್ಮಕ ಚಿಂತನೆಗಳ ಅನುಷ್ಠಾನಕ್ಕೆ ಅವಶ್ಯವಾಗಿವೆ. ತಾಂತ್ರಿಕ ಶಿಕ್ಷಣದಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದ್ದು, ಬದಲಾದ ಕಾಲಘಟ್ಟದ ಅವಶ್ಯಕತೆಗಳಿಗೆ ಅನುಗುಣವಾಗಿ ಅವಕಾಶಗಳ ವಿಸ್ತರಣೆ ಆಗಬೇಕು ಎಂದರು.

ರಿಟ್ಟಲ್ ಇಂಡಿಯಾ ಕಂಪನಿಯ ಸಂದೀಪ್ ಪಾಂಡುರಂಗ ಚೌಗುಲೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಎಂಜಿನಿಯರಿಂಗ್ ವಲಯದಲ್ಲಿ ನಡೆಯುತ್ತಿರುವ ಪ್ರಯೋಗಶೀಲ ಚಟುವಟಿಕೆಗಳಿಗೆ ಉತ್ತೇಜನ ಅಗತ್ಯ. ಪಠ್ಯದ ಹೊರತಾದ ತಾಂತ್ರಿಕ ಜ್ಞಾನವೂ ಬೋಧಕರಿಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ರಿಟ್ಟಲ್ ಇಂಡಿಯಾದ ಕೆ.ಎಸ್.ಶೇಷಗಿರಿ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಕೆ.ಸುನಿಲ್ ಕುಮಾರ, ಅಕಾಡೆಮಿಕ್ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಎಚ್ಆರ್ ನಿರ್ದೇಶಕ ಬಾಬುರೆಡ್ಡಿ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಡಾ.ಲೋಕೇಶ್ ಯಾದವ್, ಡಾ.ಹನುಮಂತೇಗೌಡ, ಎ.ಎನ್.ವಿಜಯ್, ಟಿ.ವಿ.ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.

22ಕೆಡಿಬಿಪಿ1- ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿಯ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಸಿಬ್ಬಂದಿ ಅಭಿವೃದ್ದಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.