ಸಾರಾಂಶ
ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನ ಬಿಡುಗಡೆ ಮಾಡಿ ಕ್ಷೇತ್ರದಲ್ಲಿ 150ಕ್ಕೂ ಹೆಚ್ಚು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳು ನೆಲದ ಮೇಲೆ ಕೂರಬಾರದೆಂಬುದು ನನ್ನ ಸಂಕಲ್ಪವಾಗಿತ್ತು ಎಂದು ಹೇಳಿದ ಪ್ರಹ್ಲಾದ ಜೋಶಿ.
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಪ್ರತಿ ಮಗುವಿಗೆ ಉತ್ತಮ ಶಿಕ್ಷಣ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಎನ್‌ಟಿಪಿಸಿ ಕಂಪನಿಯ ಸಿಎಸ್‌ಆರ್ ಚಟುವಟಿಕೆಯ ₹ 54 ಲಕ್ಷ ವೆಚ್ಚದ ಅನುದಾನದ ಅಡಿಯಲ್ಲಿ ನೂತನ ಕಟ್ಟಡದ ಭೂಮಿಪೂಜೆ ಹಾಗೂ 125 ಡೆಸ್ಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕಂಪನಿಗಳ ಸಿಎಸ್‌ಆರ್ ಅನುದಾನ ಬಿಡುಗಡೆ ಮಾಡಿ ಕ್ಷೇತ್ರದಲ್ಲಿ 150ಕ್ಕೂ ಹೆಚ್ಚು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳು ನೆಲದ ಮೇಲೆ ಕೂರಬಾರದೆಂಬುದು ನನ್ನ ಸಂಕಲ್ಪವಾಗಿತ್ತು. ಅದರಂತೆ ನಾನೇ ಸ್ವತಃ ಖಾಸಗಿ ಕಂಪನಿಗಳಿಂದ ಅನುದಾನ ಪಡೆದು ಡೆಸ್ಕ್ ಒದಗಿಸಿದ್ದೇನೆ. ಅದರಂತೆ ಈ ಶಾಲೆಗೂ 125 ಡೆಸ್ಕ್ ವಿತರಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಎರಡು ಶಾಲಾ ಕೊಠಡಿಗಳನ್ನು ₹ 28 ಲಕ್ಷ ವೆಚ್ಚದಲ್ಲಿ ವಿವೇಕ ಯೋಜನೆ ಅಡಿ ಮಂಜೂರು ಮಾಡಿಸಲಾಗಿದೆ ಎಂದರು.ಈ ವೇಳೆ ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷ ಶಂಕರಕೊಮಾರ ದೇಸಾಯಿ, ಭೀಮಣ್ಣ ರಾಮದುರ್ಗ, ಸಹದೇವ ಹಾವೇರಿ, ಗುರುನಾಥಗೌಡ, ಸವಿತಾ ಅಮರಶೆಟ್ಟಿ, ಬಸವರಾಜ ತಂಬಾಕದ ಸೇರಿದಂತೆ ಹಲವರಿದ್ದರು.