ತರಬೇತಿಯ ಜ್ಞಾನ ಅಳವಡಿಸಿಕೊಂಡರೆ ಮಾತ್ರ ಗುಣಮಟ್ಟದ ಶಿಕ್ಷಣ: ಕರಬಸಯ್ಯ ದಂಡಿಗಿಮಠ

| Published : Mar 01 2025, 01:03 AM IST

ತರಬೇತಿಯ ಜ್ಞಾನ ಅಳವಡಿಸಿಕೊಂಡರೆ ಮಾತ್ರ ಗುಣಮಟ್ಟದ ಶಿಕ್ಷಣ: ಕರಬಸಯ್ಯ ದಂಡಿಗಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತಮ ಶಿಕ್ಷಕರಾಗಲು ತರಬೇತಿಯಲ್ಲಿನ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ ಎಂದು ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಹೇಳಿದರು.

ಕಾಲೇಜು ಮಕ್ಕಳಿಗೆ ಬೀಳ್ಕೊಡುಗೆ

ಯಾದಗಿರಿ: ಉತ್ತಮ ಶಿಕ್ಷಕರಾಗಲು ತರಬೇತಿಯಲ್ಲಿನ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ ಎಂದು ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಹೇಳಿದರು.

ಸಮೀಪದ ಬಾಡಿಯಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಿಕಟ ಸೇವಾ ತರಬೇತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಸತತ ಪ್ರರಿಶ್ರಮ ಅತೀ ಮುಖ್ಯವಾಗಿದೆ. ಟಿಇಟಿ ನಂತರದ ಸಿಇಟಿಯಲ್ಲಿ ಉತ್ತೀರ್ಣರಾದಾಗ ಮಾತ್ರ ಶಿಕ್ಷಕರಾಗಲು ಸಾಧ್ಯ. ಈ ದಿಸೆಯಲ್ಲಿ ನಾವು ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪ್ರಮಾಣ ಪತ್ರ ಪಡೆಯುವ ಶಿಕ್ಷಕರಾಗದೆ, ಮಕ್ಕಳು ನಿಮ್ಮನ್ನು ಗುರುತಿಸುವ ಉತ್ತಮ ಗುರುಗಳಾಗಬೇಕು. ಇದಕ್ಕಾಗಿ ಅನುಭವಿ ಹಾಗೂ ಸೇವಾನಿರತ ಶಿಕ್ಷಕರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯಗುರು ಸೈಯದ್ ಶೇರ್‌ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳ ಸೇವಾ ಮನೋಭಾವನೆಯ ಗುಣಗಳಿಂದ ಮಕ್ಕಳ ಕಲಿಕೆಗೆ ಉಪಯೋಗವಾಗಿದೆ. ಅವರ ಸಮಯ ಪರಿಪಾಲನೆ ಹಾಗೂ ಶಿಸ್ತು ಮಾದರಿಯಾಗಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಕಟ ಸೇವೆ ತರಬೇತಿಯಲ್ಲಿ 33 ದಿನಗಳವರೆಗೆ ಕಾರ್ಯನಿರ್ವಹಿಸಿದ ಪ್ರಶಿಕ್ಷಣಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮೊನೇಶ ವಿಶ್ವಕರ್ಮ, ವೆಂಕಟೇಶ, ಉಪನ್ಯಾಸಕ ಹಣಮಂತ, ಶಿಕ್ಷಕರಾದ ಅಮರೇಶ ಚಂದ್ರಗಿರಿ, ಶ್ರೀನಿವಾಸ, ಗಂಗಮ್ಮ, ಅತಿಥಿ ಶಿಕ್ಷರಾದ ಜ್ಯೋತಿ, ಉಮಾದೇವಿ, ಈಶ್ವರಿ, ಪದ್ಮಾ, ನಂದಿನಿ, ಪ್ರಶಿಕ್ಷಣಾರ್ಥಿಗಳಾದ ಭಾವನ, ನಿರ್ಮಲ, ಮೇಘನಾ, ಸುಮಂಗಲ, ರಾಧಿಕಾ, ಸುನಿತಾ ಸೇರಿದಂತೆ ಇತರರಿದ್ದರು.

ಬಸವರಾಜ ಚಂದ್ರಗಿರಿ ನಿರೂಪಿಸಿದರು. ಸಂಜೀವಪ್ಪ ವಂದಿಸಿದರು.