ಗಡಿ ಗ್ರಾಮೀಣ ಭಾಗದಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ದಾಖಲಾತಿ ಹೆಚ್ಚಳ : ವೃಷಬೇಂದ್ರಯ್ಯ

| Published : Aug 08 2024, 01:46 AM IST / Updated: Aug 08 2024, 09:24 AM IST

ಸಾರಾಂಶ

ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿಗೆ ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಹಠಾತ್ ಭೇಟಿ ನೀಡಿದ ವೇಳೆ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳೊಂದಿಗೆ.

 ಯಾದಗಿರಿ :  ಗಡಿ ಗ್ರಾಮೀಣ ಭಾಗದಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ದಾಖಲಾತಿ ಹೆಚ್ಚಾಗಿರುವುದು ಸಂತಸದ ವಿಷಯವಾಗಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಿದರೆ ಸಂಸ್ಥೆಯ ಮಹತ್ವ ಹೆಚ್ಚಾಗುತ್ತದೆ ಎಂದು ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಹೇಳಿದರು.

ತಾಲೂಕಿನ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಕುರಿತು ಚರ್ಚಿಸಿ ಅವರು ಮಾತನಾಡಿದರು.

ಸತತ ಪ್ರಯತ್ನದಿಂದ ಉತ್ತಮ ಸಾಧನೆ ನಮ್ಮದಾಗುತ್ತದೆ. ಇದಕ್ಕಾಗಿ ಕಡ್ಡಾಯವಾಗಿ ಹಾಜರಾತಿ ಹೊಂದಬೇಕು. ಪ್ರಮಾಣ ಪತ್ರ ಪಡೆಯುವ ಶಿಕ್ಷಕರಾಗದೆ ಆದರ್ಶ ಮಾದರಿ ಶಿಕ್ಷಕರು ನೀವಾಗಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಡಯಟ್ ಹಿರಿಯ ಉಪನ್ಯಾಸಕ ಡಿ.ಎಂ.ಹೊಸಮನಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಇದೊಂದು ಅತ್ಯಂತ ಗೌರವಯುತವಾದ ವೃತ್ತಿಯಾಗಿದ್ದೂ ಇದರ ಮಹತ್ವ ಹೆಚ್ಚಾಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಲ್ಲರೂ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ. 

ಅದಕ್ಕಾಗಿ ಗುರಿ ಮತ್ತು ಸಾಧನೆಯ ಛಲ ನಮ್ಮದಾಗಬೇಕು ಎಂದರು.ಈ ವೇಳೆ ಮುಖ್ಯ ಗುರುಲಿಂಗಾರೆಡ್ಡಿ ನಾಯಕ, ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಂಪಣ್ಣ ಸಜ್ಜನಶೆಟ್ಟಿ, ಸಾಬಯ್ಯ ರಾಯಪ್ಪನೋರ, ಡಯಟ ಉಪನ್ಯಾಸಕರಾದ ಶರಣಗೌಡ, ವೆಂಕಟೇಶ, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.