ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಬಿದರಕುಂದಿ ಗ್ರಾಮ ವ್ಯಾಪ್ತಿಯ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಮಾದರಿ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಸರ್ಕಾರ ಮಕ್ಕಳಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗುಂಡಣ್ಣ ಕೊಟಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಬಿದರಕುಂದಿ ಗ್ರಾಮ ವ್ಯಾಪ್ತಿಯ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಮಾದರಿ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಸರ್ಕಾರ ಮಕ್ಕಳಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗುಂಡಣ್ಣ ಕೊಟಗಿ ಹೇಳಿದರು.ತಾಲೂಕಿನ ಬಿದರಕುಂದಿ ಗ್ರಾಮ ವ್ಯಾಪ್ತಿಯ ಆದರ್ಶ ವಿದ್ಯಾಲಯ (ಆರ್‌ಎಮ್‌ಎಸ್‌ಎ) ಶಾಲೆಯಲ್ಲಿ ನಡೆದ ಪಾಲಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರ್‌ಎಮ್‌ಎಸ್‌ಎ ಶಾಲೆ ಹಲವು ವರ್ಷಗಳಿಂದ ಎಸ್‌ಎಸ್‌ಎಲ್ಸಿ ಪರಿಕ್ಷೇಯಲ್ಲಿ ನೂರಕ್ಕೆ ನೂರು ಫಲಿತಾಂಶ ನೀಡುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ ಬೋಧಿಸುತ್ತಿದ್ದಾರೆ. ಸಾಂಸ್ಕೃತಿಕ, ಕ್ರೀಡೆ ಹೀಗೆ ಮಕ್ಕಳ ಮನೋಬಲ ಆತ್ಮಸ್ಥೈರ್ಯ ತುಂಬುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂಬ ತರಬೇತಿ ನೀಡುವ ಮೂಲಕ ಸೈ ಎನಿಸಿಕೊಂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ವೇಳೆ ಆರ್‌ಎಂಎಸ್‌ಎ ಶಾಲೆ ಮುಖ್ಯ ಶಿಕ್ಷಕ ಅನೀಲಕುಮಾರ ರಾಠೋಡ, ಪಾಲಕರಾದ ಶರಣಗೌಡ ಬಿರಾದಾರ, ಸಂತೋಷ ಸಾಸನೂರ, ಮಹಾಂತಗೌಡ ಪಾಟೀಲ, ಎಸ್ಟಿ ಹೆಬ್ಬಾಳ, ಎಸ್.ಪಿ ರಾಯಗೊಂಡ, ವಿ.ಎಸ್.ನಾಯಕ, ನ್ಯಾಯವಾದಿ ಎಸ್.ಎಂ.ಚಿಲ್ಲಾಳಶೇಟ್ಟೆರ, ಎಂ.ಕೆ.ಹಿರೇಮಠ, ಕವಿತಾ ಪಾಟೀಲ, ಲಲಿತಾ ಶ್ಯಾಬಾದಿ, ರಾಜು ರಾಠೋಡ, ವಿನಾಯಕ ಪೂಜಾರಿ, ರೂಪಾ ಮೇಟಿ, ವಿಜಯಲಕ್ಷ್ಮೀ ಬಡಿಗೇರ, ಶೋಭಾಕನ್ನೂರ ಸೇರಿದಂತೆ ಹಲವರು ಇದ್ದರು