ಸಾರಾಂಶ
ಲೆಕ್ಕ ಪರಿಶೋಧಕರದ ಆಯಿಷಾ ರವರು ಏಳು ದಿನಗಳ ಕಾಲ ನರೇಗಾ ಕಾಮಗಾರಿಗಳು ನಡೆದಂತಹ ಸ್ಥಳದಲ್ಲಿ ಪರಿಶೀಲನೆ ನಡೆಸಿ ಇಂದು ದಾಖಲೆಗಳ ಸಮೇತ ಸಭೆಯಲ್ಲಿ ತಿಳಿಸಿದ್ದಾರೆ. 99 ರಷ್ಟು ಕಾಮಗಾರಿಗಳು ಗುಣಮಟ್ಟದಲ್ಲಿ ನಡೆದಿವೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಉದ್ಯೋಗ ಖಾತ್ರಿ ಎನ್ನುವುದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಕ ಕೆಲಸ ಮಾಡಿಸಿ ಕೊಳ್ಳುವುದರ ಮೂಲಕ ಆರ್ಥಿಕ ಭದ್ರತೆ ಮಾಡಿಕೊಳ್ಳಬಹುದು ಎಂದು ನೋಡಲ್ ಅಧಿಕಾರಿ ಮುನಿರಾಜು ತಿಳಿಸಿದರು. ತಾಲೂಕಿನ ಬೂದಿಕೋಟೆ ಗ್ರಾ.ಪಂ ಆವರಣದಲ್ಲಿ ನಡೆದ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮ ಸಭೆಯಲ್ಲಿ ಮಾತನಾಡಿ, ಇಂದು ಗ್ರಾಮ ಸಭೆಯಲ್ಲಿ ಕಳೆದ ವರ್ಷ ನಡೆದಂತಹ ನರೇಗಾ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಹಾಗೂ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ, ಆರ್ಥಿಕವಾಗಿ ನಡೆದಿರುವ ಖರ್ಚು ವೆಚ್ಚಗಳ ಬಗ್ಗೆ ಸತತ 7 ದಿನಗಳಿಂದ ವರದಿಯನ್ನು ತಯಾರಿಸಿ ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಯಿತು ಎಂದರು.ಲೆಕ್ಕಪರಿಶೋಧನೆ ಸಮರ್ಪಕಈ ಗ್ರಾಮ ಪಂಚಾಯಿತಿಯಲ್ಲಿ ಎಲ್ಲಾ ದಾಖಲೆಗಳು ಸಕ್ರಿಯವಾಗಿ ಪರಿಶೀಲಿಸಿದ್ದಾರೆ. ಲೆಕ್ಕಪರಿಶೋಧಕಿ ಆಯಿಶಾ ಸುಲ್ತಾನ್ ನರೇಗಾ ಯೋಜನೆಯಡಿಯ ಸಾಮಾಜಿಕ ಲೆಕ್ಕ ಪರಿಶೋಧನೆ ಉದ್ದೇಶ, ಅನುದಾನ, ಬಳಸಿದ ಅನುದಾನ ಕುರಿತು ಸಂಪೂರ್ಣವಾಗಿ ವಿವರಿಸಿದ್ದಾರೆ. ಸಣ್ಣಪುಟ್ಟ ಕೆಲವೊಂದು ತಪ್ಪುಗಳಾಗಿವೆ ಬಿಟ್ಟರೆ ಬೇರೆ ಒಟ್ಟಾರೆಯಾಗಿ ಇಂದು ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ ಯಶಸ್ವಿಯಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್ ಮಂಜುನಾಥ್ ಮಾತನಾಡಿ, ಲೆಕ್ಕ ಪರಿಶೋಧಕರದ ಆಯಿಷಾ ರವರು ಏಳು ದಿನಗಳ ಕಾಲ ನರೇಗಾ ಕಾಮಗಾರಿಗಳು ನಡೆದಂತಹ ಸ್ಥಳದಲ್ಲಿ ಪರಿಶೀಲನೆ ನಡೆಸಿ ಇಂದು ದಾಖಲೆಗಳ ಸಮೇತ ಸಭೆಯಲ್ಲಿ ತಿಳಿಸಿದ್ದಾರೆ ಎಂದರು.
ಶೇ.99ರಷ್ಟು ಗುಣಮಟ್ಟದ ಕಾಮಗಾರಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರಗಳು ನಡೆಯದಂತೆ ನೂರಕ್ಕೆ 99 ರಷ್ಟು ಕಾಮಗಾರಿಗಳು ಗುಣಮಟ್ಟದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು, ಆಸ್ಪತ್ರೆ ಅಭಿವೃದ್ಧಿ,ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಮಾಡಲು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಿಶೋರ್ ಕುಮಾರ್, ಸಾಮಾಜಿಕ ಲೆಕ್ಕ ಪರಿಶೋಧಕಿ ಆಯಿಷಾ ಸುಲ್ತಾನ್, ಕಾರ್ಯದರ್ಶಿ ಮುನಿರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.