ಸಾರಾಂಶ
ನಿಗಮದ ನೋಂದಾಯಿತ ಕುಶಲಕರ್ಮಿಗಳಲ್ಲಿ ಹಲವರು ಹಿರಿಯ ಕುಶಲಕರ್ಮಿಗಳಿದ್ದು, ಪ್ರಸ್ತುತ ಅವರಿಗೆ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಅಂಥವರನ್ನು ಗುರುತಿಸಿ ಪ್ರತಿ ತಿಂಗಳು ಮಾಸಾಶನ ನೀಡುವಂತೆ ಈ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೆಶಕರಿಗೆ ತಿಳಿಸಿದಾಗ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಪ್ರಯತ್ನ ನಡೆದಿಲ್ಲ. ಅನುಕಂಪದ ಆಧಾರದ ಮೇಲೆ ಹಕ್ಕುದಾರರಿಗೆ ಶೀಘ್ರವಾಗಿ ಗುರುತಿನಚೀಟಿ ವರ್ಗಾವಣೆ, ನೋಂದಾಯಿತ ಕುಶಲಕರ್ಮಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶ್ರೀಗಂಧದ ಮರಕ್ಕೆ ಕೊಡುವಂತೆ ಇತರ ಜಾತಿಯ ಮರಗಳಿಗೂ ರಿಯಾಯಿತಿ (ಸಬ್ಸಿಡಿ) ಕೊಡುವುದು, ನಿಗಮದ ಎಲ್ಲ ಕಟ್ಟಡಗಳಲ್ಲೂ ಮುಖ್ಯವಾಗಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
- ಸಾಗರ, ಸೊರಬ, ಶಿರಸಿ, ಕುಮಟಾ ವಿಭಾಗದ 70ಕ್ಕೂ ಅಧಿಕ ನೊಂದ ಕುಶಲಕರ್ಮಿಗಳಿಂದ ಮನವಿ
- ಶ್ರೀಗಂಧದ ಮರಕ್ಕೆ ಕೊಡುವಂತೆ ಇತರ ಜಾತಿಯ ಮರಗಳಿಗೂ ರಿಯಾಯಿತಿ ನೀಡಲು ಒತ್ತಾಯ- - - ಕನ್ನಡಪ್ರಭವಾರ್ತೆ ಸಾಗರ
ರಾಜ್ಯದಲ್ಲಿರುವ ಶ್ರೀಗಂಧದ ಕುಶಲಕರ್ಮಿಗಳಿಗೆ ನಿವೇಶನ ಹಸ್ತಾಂತರ, ಹಿರಿಯ ಕುಶಲಕರ್ಮಿಗಳಿಗೆ ಮಾಸಾಶನ, ಖರೀದಿ ದರದಲ್ಲಿ ಇತರ ಮರಗಳಿಗೂ ರಿಯಾಯಿತಿ ನೀಡುವುದು ಮೊದಲಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾಗರ, ಸೊರಬ, ಶಿರಸಿ, ಕುಮಟಾ ವಿಭಾಗದ 70ಕ್ಕೂ ಅಧಿಕ ನೊಂದ ಕುಶಲಕರ್ಮಿಗಳು ಬುಧವಾರ ಪಟ್ಟಣದ ಶ್ರೀಗಂಧದ ಸಂಕೀರ್ಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಮುಖಂಡರು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಯೋಜನಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ನಿಗಮವು ಸಾಗರ, ಸೊರಬ. ಶಿರಸಿ, ಕುಮಟಾಗಳಲ್ಲಿ ಕುಶಲಕರ್ಮಿಗಳಿಗೆ ವಾಸಕ್ಕೆ ನಿವೇಶನಗಳನ್ನು ನೀಡಿದೆ. ನಿರ್ದಿಷ್ಟ ಅವಧಿಯ ನಂತರ ಆ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿವುದಾಗಿ ಹೇಳಿತ್ತು. ಇದಾಗಿ, ಹಲವು ವರ್ಷ ಕಳೆದರೂ ಮನೆಗಳನ್ನು ಹಸ್ತಾಂತರಿಸದೇ ಕಾಲಹರಣ ಮಾಡಲಾಗುತ್ತಿದೆ. ಹೀಗಾಗಿ, ಬಡ ಕುಶಲಕರ್ಮಿಗಳು ಜೀವನ ಸಾಗಿಸುವುದು ಕಷ್ಟವಾಗಿದೆ. ಕೂಡಲೇ ನಿಗಮವು ಫಲಾನುಭವಿಗಳ ಮನೆ ಹಸ್ತಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ನಿಗಮದ ನೋಂದಾಯಿತ ಕುಶಲಕರ್ಮಿಗಳಲ್ಲಿ ಹಲವರು ಹಿರಿಯ ಕುಶಲಕರ್ಮಿಗಳಿದ್ದು, ಪ್ರಸ್ತುತ ಅವರಿಗೆ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಅಂಥವರನ್ನು ಗುರುತಿಸಿ ಪ್ರತಿ ತಿಂಗಳು ಮಾಸಾಶನ ನೀಡುವಂತೆ ಈ ಹಿಂದೆ ನಿಗಮದ ವ್ಯವಸ್ಥಾಪಕ ನಿರ್ದೆಶಕರಿಗೆ ತಿಳಿಸಿದಾಗ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಪ್ರಯತ್ನ ನಡೆದಿಲ್ಲ. ಅನುಕಂಪದ ಆಧಾರದ ಮೇಲೆ ಹಕ್ಕುದಾರರಿಗೆ ಶೀಘ್ರವಾಗಿ ಗುರುತಿನಚೀಟಿ ವರ್ಗಾವಣೆ, ನೋಂದಾಯಿತ ಕುಶಲಕರ್ಮಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ಶ್ರೀಗಂಧದ ಮರಕ್ಕೆ ಕೊಡುವಂತೆ ಇತರ ಜಾತಿಯ ಮರಗಳಿಗೂ ರಿಯಾಯಿತಿ (ಸಬ್ಸಿಡಿ) ಕೊಡುವುದು, ನಿಗಮದ ಎಲ್ಲ ಕಟ್ಟಡಗಳಲ್ಲೂ ಮುಖ್ಯವಾಗಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿ.ಬಂಗಾರಪ್ಪ, ಧರ್ಮರಾಜ್, ಎಚ್.ವಿ. ಶ್ರೀಧರ, ಬಿ.ರಂಗನಾಥ, ಆದರ್ಶ, ಬಿ.ಶಿವಕುಮಾರ್, ಎಸ್.ಜಿ. ರಂಗನಾಥ, ಎಂ. ಚೇತನಕುಮಾರ್, ಶೋಭಾ, ಎನ್.ಮುಕ್ತ, ಸುನಿತಾ ಫರ್ನಾಂಡಿಸ್, ಗಂಗಮ್ಮ ಇತರ ಪ್ರಮುಖರು ಹಾಜರಿದ್ದರು.- - - -6ಕೆ.ಎಸ್.ಎ.ಜಿ.1:
ಸಾಗರದ ಶ್ರೀಗಂಧದ ಸಂಕೀರ್ಣದಲ್ಲಿ ನೋಂದಾಯಿತ ಕುಶಲಕರ್ಮಿಗಳು ಪ್ರತಿಭಟನೆ ನಡೆಸಿದರು.