ಸಾರಾಂಶ
ಎಲ್ಲರೂ ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು. ಸಂಸ್ಥೆ ಸದಸ್ಯರು ಸೇವಾ ಚಟುವಟಿಕೆಯಲ್ಲಿ ಕಾರ್ಯನಿರತರಾಗಿ ಸಮಾಜಕ್ಕೆ ಒಂದಿಷ್ಟು ಸೇವೆ ನೀಡುತ್ತಿದೆ. ಅದು ನಿರಂತರವಾಗಿ ನಡೆಯಲಿದೆ. ಅದಕ್ಕೆ ಸಾರ್ವಜನಿಕ ಕೈಜೊಡಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಇನ್ನರ್ ವ್ಹೀಲ್ ಸಂಸ್ಥೆ ಸಮಾಜಮುಖಿ ಕೆಲಸಗಳಿಂದ ಜನಪರ ಸಂಘಟನೆಯಾಗಿ ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದು ನೂತನ ಅಧ್ಯಕ್ಷೆ ಧರಣಿ ಪುಟ್ಟೇಗೌಡ ತಿಳಿಸಿದರು.ಚಾಂಶುಗರ್ಸ್ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಪದಗ್ರಹಣ ಹಾಗೂ ಸ್ಥಾಪನಾ ಸಮಿತಿ ಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕೆ.ಎಂ.ದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜವನ್ನು ಅಭಿವೃದ್ಧಿ ಪಡಿಸಲು ಹಾಗೂ ಪರಿಸರ ಸಂರಕ್ಷಣೆ ಮಾಡಲು ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷೆ ಲಕ್ಷ್ಮಿಮಂಜುಳಾ ಬೋರೇಗೌಡ ಮಾತನಾಡಿ, ಎಲ್ಲರೂ ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು. ಸಂಸ್ಥೆ ಸದಸ್ಯರು ಸೇವಾ ಚಟುವಟಿಕೆಯಲ್ಲಿ ಕಾರ್ಯನಿರತರಾಗಿ ಸಮಾಜಕ್ಕೆ ಒಂದಿಷ್ಟು ಸೇವೆ ನೀಡುತ್ತಿದೆ. ಅದು ನಿರಂತರವಾಗಿ ನಡೆಯಲಿದೆ. ಅದಕ್ಕೆ ಸಾರ್ವಜನಿಕ ಕೈಜೊಡಿಸಬೇಕು ಎಂದು ಕೋರಿದರು.ಈ ವೇಳೆ ಸಂಸ್ಥೆ ಸದಸ್ಯರಾದ ಟಿ.ಬಿ.ಹಳ್ಳಿ ಪುಟ್ಟಮ್ಮ, ಪುಟ್ಟರತ್ನಮ್ಮ, ಸೌಭಾಗ್ಯ, ಲೀಲಾ, ಪಿಡಿಒ ಸುಧಾ, ಮೆಳ್ಳಹಳ್ಳಿ ತಾರಾ, ಯೋಗಶ್ರೀ, ದಿವ್ಯ, ರಶ್ಮಿ, ನಿರ್ಮಲಾ, ಮಾನಸ, ಸುಧಾ, ಪ್ರಭಾ, ಆಶಾ, ನಂದ, ಇಂದ್ರ, ರಶ್ಮಿ ಸೇರಿದಂತೆ ಹಲವರಿದ್ದರು.
ಇದೇ ವೇಳೆ ಸಂಸ್ಥೆಗೆ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷ ಮೆಣಸಗೆರೆ ಕೆ.ಎನ್. ಧರಣಿ ಪುಟ್ಟೇಗೌಡ, ಕಾರ್ಯದರ್ಶಿ ಸವಿತ ಚಂದ್ರೇಶ್ ಆಯ್ಕೆಯಾದರೆ, ಎಡಿಟರ್ ಐಎಸ್‌ಒ ಜಯಲಕ್ಷ್ಮೀ ಪುಟ್ಟಸ್ವಾಮಿ, ಜಯಮ್ಮ ಲಕ್ಷ್ಮಣ್ಣ, ಖಜಾಂಚಿ ಜಯಲಕ್ಷ್ಮಿ ವೆಂಕಟೇಗೌಡ ನೇಮಕಗೊಂಡರು. ನಂತರ ಅನುಮಪ ಸತೀಶ್, ಶ್ವೇತಾ, ಪವಿತ್ರ ಅವರು ಇನ್ನರ್ ವಿಲ್ ಸಂಸ್ಥೆ ನೂತನ ಸದಸ್ಯತ್ವ ಸ್ವೀಕರಿಸಿದರು.ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಡ್ಯ: ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜು.೨೬ ರಂದು ಗುತ್ತಲು ರಸ್ತೆಯ ಸಫ್ದಾರಿಯಾಬಾದ್ ಮೊಹಲ್ಲಾದ ಎಚ್.ಎಸ್.ಕಾಂಪ್ಲೆಕ್ಸ್‌ನಲ್ಲಿ ಸಂಜೆ ೭.೩೦ರಿಂದ ೯.೩೦ರರವರೆಗೆ ನಡೆಸಲಾಗುವುದು ಎಂದು ನ್ಯೂರೋಸೈಕಿಯಾಟ್ರಿಸ್ಟ್ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ. ನರರೋಗ ಸಮಸ್ಯೆಗಳು, ಮಂಡಿನೋವು, ತಲೆನೋವು, ಸೊಂಟನೋವು, ಮಹಿಳಾ ಆರೋಗ್ಯ ಸಮಸ್ಯೆಗಳು, ಉಚಿತ ಬಿ.ಪಿ., ಮಧುಮೇಹ ತಪಾಸಣೆ, ಉಚಿತ ಇಸಿಜಿ, ರಕ್ತತಪಾಸಣೆ ಮಾಡಲಾಗುವುದು. ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಕೂಡ ಶೀಬಿರದಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.