ಸಾರಾಂಶ
ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವ ವಿಕಸನ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ರಸಪ್ರಶ್ನೆಯಂತಹ ಉಪಯುಕ್ತ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು
ಅಂಕೋಲಾ:
ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವ ವಿಕಸನ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ರಸಪ್ರಶ್ನೆಯಂತಹ ಉಪಯುಕ್ತ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಿ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಜೈಹಿಂದ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಶ್ರೀ ಪದ್ಮನಾಭ ಪ್ರಭು ಹೇಳಿದರು. ಅವರು ಅಂಕೋಲೆಯ ಬಾರ್ಡೋಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ನಾಡು, ನುಡಿಯ ಕುರಿತು ಜೈಹಿಂದ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು.ಬಾರ್ಡೋಲಿ ಪ್ರತಿಷ್ಠಾನದ ರೂವಾರಿ, ಸಾಹಿತಿ ವಿಠ್ಠಲ ಗಾಂವಕರ ಮಾತನಾಡಿ, ಕನ್ನಡ ಭಾಷೆ, ಕನ್ನಡ ನೆಲದ ಬಗ್ಗೆ ಪ್ರತಿಯೊಬ್ಬರು ಮಾಹಿತಿ ಹಾಗೂ ಗೌರವ ಹೊಂದಿರಬೇಕು. ಅಂಕೋಲೆಯ ಇತರ ಶಾಲೆಗಳಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಮ್ಮ ಪ್ರತಿಷ್ಠಾನ ಹಮ್ಮಿಕೊಳ್ಳಲಿದೆ ಎಂದರು. ಮುಖ್ಯಾಧ್ಯಾಪಕ ಪ್ರಭಾಕರ ಸ್ವಾಗತಿಸಿದರು. ಲೇಖಕ ಮಹಾಂತೇಶ ರೇವಡಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರಶಾಂತ ನಾರ್ವೇಕರ ಕಾರ್ಯಕ್ರಮ ನಿರೂಪಿಸಿದರು. ಡಾ. ಕರುಣಾಕರ ವಂದಿಸಿದರು.ವಿಜೇತರಿಗೆ ಬಹುಮಾನರಸಪ್ರಶ್ನೆ ಕಾರ್ಯಕ್ರಮದಲ್ಲಿ ನಿತ್ಯಾನಂದ ಗುರುವ (ಪ್ರಥಮ), ಪಲ್ಲವಿ ಆಗೇರ (ದ್ವಿತೀಯ), ಅಮಿತ ಸ್ವಾಮಿ (ತೃತೀಯ) ಬಹುಮಾನಗಳಿಸಿದರು. ವಿಜೇತರಿಗೆ ನಗದು ಬಹುಮಾನದ ಜತೆ ನಾಡು-ನುಡಿಯ ಕುರಿತು ಉಪಯುಕ್ತ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.