ಕುಶಾಲನಗರ ತಹಸೀಲ್ದಾರ್‌ಗೆ ಆರ್‌.ಅಶೋಕ್‌ ತರಾಟೆ

| Published : Sep 21 2024, 01:46 AM IST

ಕುಶಾಲನಗರ ತಹಸೀಲ್ದಾರ್‌ಗೆ ಆರ್‌.ಅಶೋಕ್‌ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ಅನಾವಶ್ಯಕ ಗೊಂದಲಗಳಿಗೆ ಎಡೆ ಮಾಡಬೇಡಿ. ರಾಜ್ಯದ ಯಾವುದೇ ಕಡೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಇದುವರೆಗೆ ಕಲ್ಪಿಸಿಲ್ಲ. ಈ ರೀತಿ ನೀಡಿದಲ್ಲಿ ಇಡೀ ರಾಜ್ಯದಲ್ಲಿ ಅಧಿಕಾರ ಮಾಡುವ ಸರ್ಕಾರಕ್ಕೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರ ಲಭ್ಯವಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಸರ್ಕಾರದ ಕೈಗೊಂಬೆಯಾಗಿ, ನಿಯಮಬಾಹಿರವಾಗಿ ಕೆಲಸ ನಿರ್ವಹಿಸಿದಲ್ಲಿ ನಿವೃತ್ತರಾದ ಮೇಲೆ ಪಿಂಚಣಿ ಸೌಲಭ್ಯ ಕೂಡ ದೊರಕುವುದು ಸಂಶಯ. ಸಮರ್ಪಕವಾಗಿ ನಿಯಮಾನುಸಾರ ಕೆಲಸ ನಿರ್ವಹಿಸಿ... ಇದು ರಾಜ್ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಡಿಕೇರಿಗೆ ತೆರಳುತ್ತಿದ್ದ ದಾರಿಯಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಅವರ ಕಚೇರಿಗೆ ಭೇಟಿ ನೀಡಿದ ಸಂದರ್ಭ ತಹಸೀಲ್ದಾರ್‌ನ್ನು ತರಾಟೆಗೆ ತೆಗೆದುಕೊಂಡ ವೈಖರಿ.

ಕುಶಾಲನಗರ ಪಟ್ಟಣ ಪಂಚಾಯಿತಿ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವ ಬಗ್ಗೆ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ನಡೆಯುತ್ತಿದ್ದ ಬಿಜೆಪಿ ಪ್ರತಿಭಟನೆ ನಡೆಯುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ಅನಾವಶ್ಯಕ ಗೊಂದಲಗಳಿಗೆ ಎಡೆ ಮಾಡಬೇಡಿ. ರಾಜ್ಯದ ಯಾವುದೇ ಕಡೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಇದುವರೆಗೆ ಕಲ್ಪಿಸಿಲ್ಲ. ಈ ರೀತಿ ನೀಡಿದಲ್ಲಿ ಇಡೀ ರಾಜ್ಯದಲ್ಲಿ ಅಧಿಕಾರ ಮಾಡುವ ಸರ್ಕಾರಕ್ಕೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರ ಲಭ್ಯವಾಗಲಿದೆ ಎಂದರು.

ಕೆಟ್ಟ ಪರಂಪರೆ ಸೃಷ್ಟಿಸಬೇಡಿ. ಅನಾಹುತಕ್ಕೆ ದಾರಿ ಮಾಡಬೇಡಿ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಿಗೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಅವಕಾಶ ಇರುವುದಿಲ್ಲ ಎಂದ ಆರ್. ಅಶೋಕ್ , ತಕ್ಷಣ ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸರಿಪಡಿಸುವಂತೆ ಸೂಚನೆ ನೀಡಿದರು.