ಸಾರಾಂಶ
ತಾಲೂಕಿನ ಆಬಲವಾಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಆರ್. ಸುರೇಶ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಹಾಲಿ ಅಧ್ಯಕ್ಷೆ ಬಿ.ಎಂ. ಪವಿತ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಆರ್.ಸುರೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ತಾಪಂ ಇಒ ರಾಮಲಿಂಗಯ್ಯ ಅಂತಿಮವಾಗಿ ಪ್ರಕಟಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಆಬಲವಾಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಆರ್. ಸುರೇಶ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಗ್ರಾಪಂ ಹಾಲಿ ಅಧ್ಯಕ್ಷೆ ಬಿ.ಎಂ. ಪವಿತ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಆರ್.ಸುರೇಶ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ತಾಪಂ ಇಒ ರಾಮಲಿಂಗಯ್ಯ ಅಂತಿಮವಾಗಿ ಪ್ರಕಟಿಸಿದರು.
ನೂತನ ಅಧ್ಯಕ್ಷ ಸುರೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಜನತೆ ಅಭಿವೃದ್ಧಿ ದೃಷ್ಟಿಯಿಂದ ತಮ್ಮನ್ನು ಎರಡನೇ ಬಾರಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಇವರೆಲ್ಲರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.ತಾವು ಎರಡನೇ ಬಾರಿಗೆ ಆಯ್ಕೆಯಾಗಲು ಮಾಜಿ ಸಚಿವ ಡಿ. ಸಿ.ತಮ್ಮಣ್ಣ , ಮಾಜಿ ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಅವರ ಸಹಕಾರ ಕಾರಣವಾಗಿದೆ. ತಮ್ಮ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ಆಶ್ವಾಸನೆ ನೀಡಿದರು.
ನೂತನ ಅಧ್ಯಕ್ಷ ಸುರೇಶ್ ಅವರನ್ನು ಉಪಾಧ್ಯಕ್ಷೆ ಚುಂಚಮ್ಮ, ಸದಸ್ಯರಾದ ಸತೀಶ್, ದೇವರಾಜು, ನರಸಿಂಹಾಚಾರಿ, ಸಾಗರ್, ಕೆ.ಪುಷ್ಪ, ಎಚ್.ಎನ್. ಸತ್ಯವತಿ, ಅನ್ನಪೂರ್ಣ, ಗ್ರಾಮದ ಜೆಡಿಎಸ್ ಮುಖಂಡರಾದ ಕೋಟಿ ರಾಮಲಿಂಗಯ್ಯ, ರವೀಂದ್ರ, ವೀರಣ್ಣ, ಯಜಮಾನರಾದ ಪುಟ್ಟಸ್ವಾಮಿ, ತಿಮ್ಮೇಶ್, ಗಿಡ್ಡಪ್ಪ, ಶಂಕರಣ್ಣ, ಶಶಿ, ನಂದೀಶ ಹಾಗೂ ಮಾರಂಗೆರೆ ಪ್ರಕಾಶ್ ಮತ್ತಿತರರು ಅಭಿನಂದಿಸಿದರು.