ಶಿಕ್ಷಣಕ್ಕೆ ರಾಧಾಕೃಷ್ಣನ್‌ ಕೊಡುಗೆ ಅನನ್ಯ: ಶಾಸಕ ಎನ್.ಎನ್.ಚನ್ನಬಸಪ್ಪ

| Published : Sep 06 2025, 01:00 AM IST

ಶಿಕ್ಷಣಕ್ಕೆ ರಾಧಾಕೃಷ್ಣನ್‌ ಕೊಡುಗೆ ಅನನ್ಯ: ಶಾಸಕ ಎನ್.ಎನ್.ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನೈತಿಕತೆ ಅಧಃಪತನಕ್ಕೆ ಇಳಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರಸ್ತುತವಾಗುತ್ತವೆ ಎಂದು ಶಾಸಕ ಎನ್.ಎನ್.ಚನ್ನಬಸಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೈತಿಕತೆ ಅಧಃಪತನಕ್ಕೆ ಇಳಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರಸ್ತುತವಾಗುತ್ತವೆ ಎಂದು ಶಾಸಕ ಎನ್.ಎನ್.ಚನ್ನಬಸಪ್ಪ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಮಹತ್ವವನ್ನು ಚೆನ್ನಾಗಿ ಅರಿತಿದ್ದ ರಾಧಾಕೃಷ್ಣನ್‌ ಮಹಾನ್ ಸಾಧಕರಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಳ್ಳುವವರಾಗಿದ್ದಾರೆ ಎಂದರು.

ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ವ್ಯವಸ್ಥೆಯ ನಡುವೆ ಸಂಘರ್ಷ ಕಂಡುಬರುತ್ತಿದೆ. ಈ ವಿಷಯದ ಕುರಿತು ಗಂಭೀರ ಸ್ವರೂಪದ ಚರ್ಚೆಗಳು ನಡೆದು ಅಂತಿಮವಾಗಿ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುವಂತಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸಾಹಿತಿ, ಚಿಂತಕ ವೈ.ವಿ.ಗುಂಡೂರಾವ್‌ ಶಿಕ್ಷಕರು ಕೈಗೊಳ್ಳಬಹುದಾದ ಪರಿಣಾಮಕಾರಿ ಬೋಧನಾ ವಿಧಾನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸೂಡಾ ಅಧ್ಯಕ್ಷ ಸುಂದರೇಶ್, ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಧು, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ಧರ್ಮಪ್ಪ, ದಿನೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥಸ್ವಾಮಿ ಮತ್ತಿತರರು ಹಾಜರಿದ್ದರು.

ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಿಲ್ಲೆಯ 40 ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹ ಶಿಕ್ಷಕರಾದ ಪಿ.ಶೀಲಾ, ಸಾಗರ. ಡಿ.ಮಂಜಪ್ಪ, ಹೊಸನಗರ. ಎಚ್.ಎಂ. ಜ್ಯೋತಿ ತೀರ್ಥಹಳ್ಳಿ, ಎಸ್‌.ಶಾರದಾ ಭದ್ರಾವತಿ, ಎನ್‌.ಗಣೇಶ್ ನಾಯ್ಕ ಸೊರಬ, ಕೆ.ಸುರೇಶ್ ಶಿಕಾರಿಪುರ, ತಸ್ನಿಂ ಕೌಸರ್. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಡ್ತಿ ಮುಖ್ಯ ಶಿಕ್ಷಕರಾದ ಎಚ್‌.ಎ,ಸುಮ ತೀರ್ಥಹಳ್ಳಿ, ರಾಧಾಬಾಯಿ ಶಿವಮೊಗ್ಗ, ಎಚ್‌.ವಿ.ಕೃಷ್ಣಪ್ಪ ಸೊರಬ ಹಾಗೂ ಸಹ ಶಿಕ್ಷಕರಾದ ಡಿ. ಬೂದ್ಯಪ್ಪ ಸಾಗರ, ಜೆ.ಶಿಲ್ಪ ಹೊಸನಗರ, ಎಸ್‌.ಭಾರತಿ ಭದ್ರಾವತಿ, ಮಹೇಶಪ್ಪ ಬಂಡಿಬೈರನಹಳ್ಳಿ ಶಿಕಾರಿಪುರ. ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಶಿಕ್ಷಕರಾದ ಎಸ್‌.ಎಚ್‌. ಗಜೇಂದ್ರ ಸಾಗರ, ಎಸ್.ಜೆ. ರಾಮಚಂದ್ರ ಸೊರಬ ಹಾಗೂ ಸಹ ಶಿಕ್ಷಕರಾದ ಸಿ.ಚಂದ್ರು ಹೊಸನಗರ, ಡಿ.ಕೃಷ್ಣಪ್ಪ ತೀರ್ಥಹಳ್ಳಿ, ಛಾಯಾ ಶ್ಯಾಮಸುಂದರ ಭದ್ರಾವತಿ, ಪಿ.ನಾಗರಾಜಪ್ಪ ಶಿಕಾರಿಪುರ, ಕೆ.ಹೆಚ್.ಹಸನ್ ಸಾಬ್ ಶಿವಮೊಗ್ಗ.

ವಿಶೇಷ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರಾದ ಎ.ಶರಣ್ಣಪ್ಪ ಸಾಗರ, ಬಿ.ಕೆ.ಆಶಾ ತೀರ್ಥಹಳ್ಳಿ, ಮುಖ್ಯ ಶಿಕ್ಷಕರಾದ ಎ.ಭಾರತಿ ಹೊಸನಗರ, ಸಹ ಶಿಕ್ಷಕರಾದ ಶಬಿನಾ ಭದ್ರಾವತಿ, ಡಿ.ಬಿ.ದುರುಗಪ್ಪ ಸೊರಬ, ಸಂಜೀವ ನಾಯ್ಕಶಿಕಾರಿಪುರ, ಕೆ.ಕೆ.ಪುಟ್ಟಸ್ವಾಮಿ ಹೊನಸಗರ, ಆರ್.ತಿಪ್ಪೆಸ್ವಾಮಿ ಭದ್ರಾವತಿ, ಎಸ್‌.ಟಿ.ರವಿ ಶಿವಮೊಗ್ಗ, ಜಯ ಎಂ. ಶೇಟ್ ಶಿವಮೊಗ್ಗ, ಸಂಜಿದಾ ಬಾನು ಶಿವಮೊಗ್ಗ, ಜಿ.ಎಸ್‌. ಶಿಲ್ಪ ಶಿಕಾರಿಪುರ, ಎ.ಆರ್‌.ಆಶಾರಾಣಿ ಶಿಕಾರಿಪುರ, ವಿ.ಎಂ ಅಪರ್ಣ ಸೊರಬ, ಎ.ಕಲಾವತಿ ಸೊರಬ, ಅಂಥೋನಿ ಫರ್ನಾಂಡಿಸ್ ಸಾಗರ, ವಿ.ಗೋಪಿ ತೀರ್ಥಹಳ್ಳಿ, ಚಿತ್ರಕಲಾ ಶಿಕ್ಷಕರಾದ ಟಿ.ಎನ್.ಅರವಿಂದ ತೀರ್ಥಹಳ್ಳಿ, ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್‌. ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.