ಮಿಮ್ಸ್ ಕ್ಯಾನ್ಸರ್ ಕೇಂದ್ರದಲ್ಲಿ ರೇಡಿಯೋಥೆರಪಿ ಪುನಾರಂಭ

| N/A | Published : Aug 14 2025, 01:00 AM IST

ಮಿಮ್ಸ್ ಕ್ಯಾನ್ಸರ್ ಕೇಂದ್ರದಲ್ಲಿ ರೇಡಿಯೋಥೆರಪಿ ಪುನಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಯಾನ್ಸರ್ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ರೇಡಿಯೋಥೆರಪಿ ಚಿಕಿತ್ಸೆ ಮತ್ತೆ ಪುನಾರಂಭಗೊಂಡಿದೆ. ನಾನಾ ಕಾರಣಗಳಿಂದಾಗಿ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಚಿಕಿತ್ಸೆ ಇದೀಗ ಚಾಲನೆ ದೊರಕಿರುವುದು ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಿದೆ.

 ಮಂಡ್ಯ :  ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕ್ಯಾನ್ಸರ್ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ರೇಡಿಯೋಥೆರಪಿ ಚಿಕಿತ್ಸೆ ಮತ್ತೆ ಪುನಾರಂಭಗೊಂಡಿದೆ. ನಾನಾ ಕಾರಣಗಳಿಂದಾಗಿ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಚಿಕಿತ್ಸೆ ಇದೀಗ ಚಾಲನೆ ದೊರಕಿರುವುದು ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಿದೆ.

ಮೈಸೂರಿನ ಕೆ.ಅರ್.ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಅನು ಇದೀಗ ಮಿಮ್ಸ್ ಕ್ಯಾನ್ಸರ್ ಕೇಂದ್ರದ ರೇಡಿಯೇಷನ್ ಆಂಕಾಲಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ರೇಡಿಯೇಷನ್ ಟೆಕ್ನ ಆಲಜಿಸ್‌ಟ್, ಒಬ್ಬರು ರೇಡಿಯೇಷನ್ ಸೇಫ್ಟಿ ಆಫೀಸಸರ್ ಕೂಡ ಇದ್ದು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೇಡಿಯೋಥೆರಪಿಗೆ ಸೀಮಿತವಾಗಿ ಮಿಮ್ಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕ್ಯಾನ್ಸರ್ ಸಂಬಂಧಿತ ಸಣ್ಣಪುಟ್ಟ ಸಮಸ್ಯೆಗಳಿಗಷ್ಟೇ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಕ್ಯಾನ್ಸರ್ ಕೇಂದ್ರದಲ್ಲಿ ವೈದ್ಯರು ಮಾತ್ರ ಇದ್ದರು. ತಾಂತ್ರಿಕ ಸಿಬ್ಬಂದಿ ಯಾರೂ ಇರಲಿಲ್ಲ. ಜನರೇಟರ್ ವ್ಯವಸ್ಥೆಯೂ ಇರದಂತಾಗಿತ್ತು. ಇರುವ ಒಬ್ಬ ವೈದ್ಯರಿಂದ ಚಿಕಿತ್ಸೆ ನೀಡುವುದು ಕಷ್ಟದಾಯಕವಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು.

ಮಿಮ್ಸ್ ಕ್ಯಾನ್ಸರ್ ಕೇಂದ್ರ ಆರಂಭವಾದ ವರ್ಷಗಳಳ್ಲಿ ನಿತ್ಯ 15 ರಿಂದ 25 ರೋಗಿಗಳು ಬರುತ್ತಿದ್ದರು. ಮಂಡ್ಯ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಟಿ.ನರಸೀಪುರ ಸೇರಿದಂತೆ ಹೊರಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು. ಆನಂತರದಲ್ಲಿ ಸಿಬ್ಬಂದಿ ಕೊರತೆಯಿಂದ ಕ್ಯಾನ್ಸರ್ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದಂತಾಗಿತ್ತು. ರೋಗಿಗಳ ಸಂಖ್ಯೆಯೂ ಕ್ಷೀಣಿಸಿತ್ತು. ಪ್ರಸ್ತುತ ದಿನಕ್ಕೆ ಎರಡು-ಮೂರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ರೇಡಿಯೋಥೆರಪಿ ಹೊರತುಪಡಿಸಿ ಕಿಮೋಥೆರಪಿ, ಸರ್ಜರಿ, ಫಾರ್ಮಾ ಯಾವುದೇ ಸೌಲಭ್ಯವಿಲ್ಲ. ಅದಕ್ಕೆ ಮೈಸೂರು ಮತ್ತು ಬೆಂಗಳೂರಿಗೆ ರೋಗಿಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ.

ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಮೂರ್ತಿ ಅವರು ಮುತುವರ್ಜಿ ವಹಿಸಿ ಸರ್ಕಾರದ ಮಟ್ಟದಲ್ಲಿ ಗಮನಸೆಳೆದು ಕ್ಯಾನ್ಸರ್ ಕೇಂದ್ರಕ್ಕೆ ಅಗತ್ಯ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಕೇಂದ್ರಕ್ಕೆ ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜನರೇಟರ್ ಸೌಲಭ್ಯವನ್ನೂ ಒದಗಿಸಿದ್ದಾರೆ. ಮಿಮ್ಸ್ ನಿರ್ದೇಶಕರು ಸೇರಿದಂತೆ ಎಲ್ಲರಿಂದ ಉತ್ತಮ ಸಹಕಾರ ದೊರಕುತ್ತಿದೆ ಎಂದು ವೈದ್ಯರು, ಸಿಬ್ಬಂದಿ ತಿಳಿಸಿದರು.ಮಿಮ್ಸ್ ಕ್ಯಾನ್ಸರ್ ಕೇಂದ್ರದಲ್ಲಿ ರೇಡಿಯೋಥೆರಪಿ ಚಿಕಿತ್ಸೆ ಆರಂಭಗೊಂಡಿರುವುದು ಇನ್ನೂ ಎಷ್ಟೋ ಜನರಿಗೆ ಗೊತ್ತಿಲ್ಲ. ನಿತ್ಯ ಎರಡು-ಮೂರು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ತಾಂತ್ರಿಕ ಸಿಬ್ಬಂದಿ ಇರುವುದರಿಂದ ರೇಡಿಯೋ ಥೆರಪಿ ಚಿಕಿತ್ಸೆಗೆ ಮೈಸೂರು-ಬೆಂಗಳೂರಿಗೆ ಹೋಗಬೇಕಿಲ್ಲ. ನಮ್ಮಲ್ಲೇ ಲಭ್ಯವಿರುವುದರಿಂದ ಸದುಪಯೋಗಪಡಿಸಿಕೊಳ್ಳಬಹುದು.

- ಡಾ.ಅನು, ರೇಡಿಯೇಷನ್ ಆಂಕಾಲಜಿಸ್ಟ್

Read more Articles on