ತೆಪ್ಪ ದುರಂತ: ಮತ್ತಿಬ್ಬರ ಶವ ಪತ್ತೆ, ಐದಕ್ಕೇರಿದ ಸಾವು

| Published : Jul 05 2024, 12:53 AM IST

ತೆಪ್ಪ ದುರಂತ: ಮತ್ತಿಬ್ಬರ ಶವ ಪತ್ತೆ, ಐದಕ್ಕೇರಿದ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಹಳೆ ಬಳೂತಿ ಬಳಿ ಕೃಷ್ಣಾ ನದಿ ಹಿನ್ನೀರಿನ ದಡದಲ್ಲಿ ಜೂಜಾಟವಾಡಲು ಹೋದ ವೇಳೆ ಪೊಲೀಸರು ದಾಳಿ ನಡೆಸಿದ್ದರೆಂಬ ಕಾರಣಕ್ಕೆ ಅವರಿಂದ ತಪ್ಪಿಸಿಕೊಂಡು ತೆಪ್ಪದಲ್ಲಿ ಹೋಗುತ್ತಿದ್ದಾಗ ಎಂಟು ಜನರಿದ್ದ ತೆಪ್ಪ ಮಂಗಳವಾರ ಮಗುಚಿ ನದಿಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು, ಮೂರುದಿನಗಳ ಶೋಧ ಕಾರ್ಯ ಅಂತ್ಯಗೊಂಡಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ತಾಲೂಕಿನ ಹಳೆ ಬಳೂತಿ ಬಳಿ ಕೃಷ್ಣಾ ನದಿ ಹಿನ್ನೀರಿನ ದಡದಲ್ಲಿ ಜೂಜಾಟವಾಡಲು ಹೋದ ವೇಳೆ ಪೊಲೀಸರು ದಾಳಿ ನಡೆಸಿದ್ದರೆಂಬ ಕಾರಣಕ್ಕೆ ಅವರಿಂದ ತಪ್ಪಿಸಿಕೊಂಡು ತೆಪ್ಪದಲ್ಲಿ ಹೋಗುತ್ತಿದ್ದಾಗ ಎಂಟು ಜನರಿದ್ದ ತೆಪ್ಪ ಮಂಗಳವಾರ ಮಗುಚಿ ನದಿಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು, ಮೂರುದಿನಗಳ ಶೋಧ ಕಾರ್ಯ ಅಂತ್ಯಗೊಂಡಿತು.ಗುರುವಾರ ಮೆಹಬೂಬ್ ವಾಲಿಕಾರ (30) ಹಾಗೂ ರಫೀಕ್ ಜಾಲಗಾರ ಅಲಿಯಾಸ್ ಬಾಂಬೆ (55) ಇರ್ವರ ಮೃತ ದೇಹಗಳನ್ನು ಪತ್ತೆಯಾಗಿವೆ. ಮಂಗಳವಾರ ಕೊಲ್ಹಾರದ ಪುಂಡಲೀಕ ಮಲ್ಲಪ್ಪ ಯಂಕಂಚಿ (36) ಮೃತ ದೇಹ ಪತ್ತೆಯಾಗಿತ್ತು. ಬುಧವಾರ ಕೊಲ್ಹಾರದ ತೌಫೀಕ್ ಚೌಧರಿ(42), ದಶರಥ ಗೌಡರ ಸೂಳಿಭಾವಿ(63) ಮೃತ ದೇಹಗಳು ಪತ್ತೆಯಾಗಿದ್ದವು. ತೆಪ್ಪ ದುರಂತದಲ್ಲಿ ಒಟ್ಟು 8 ಜನರ ಪೈಕಿ 5 ಜನರ ಮೃತಪಟ್ಟು, 3 ಜನರು ಈಜಿ ಪಾರಾಗಿದ್ದಾರೆ.

ಕೊಲ್ಹಾರ ಪಟ್ಟಣದ ಸಚಿನ್ ಅಶೋಕ ಕಟಬರ್, ಬಶೀರ ಅಹ್ಮದ್ ಹೊನವಾಡ, ಪಾರೂಖ ಪತ್ತೆಅಹ್ಮದ್ ಮೂವರು ಈಜಿ ದಡ ಸೇರಿದ್ದಾರೆ. ತೆಪ್ಪ ದುರಂತ ಸಂಭವಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ದಿನಗಳ ಕಾಲ ಹಗಲು ರಾತ್ರಿ ನಿರಂತರ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರಗೆತೆಗೆದು ಗುರುವಾರ ಕಾರ್ಯಾಚರಣೆ ಕೊನೆಗೊಳಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಮೀನುಗಾರರು ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಇದ್ದರು.