ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ವಿಚಾರವಾಗಿ ಈಗಾಗಲೇ ರಾಜ್ಯಾದ್ಯಂತ, ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಇದೀಗ ಸ್ವಾಮಿ ವಿವೇಕಾನಂದ ಸೇನೆಯ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಹನ್ನೆರಡು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಸಚಿವರು ಉತ್ತರಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ಏನೇನು ಪ್ರಶ್ನಾವಳಿಗಳು..?:
ಸಂವಿಧಾನದಲ್ಲಿರದ ಪ್ರತ್ಯೇಕ ವಕ್ಫ್ ಕಾಯ್ದೆಯನ್ನು 1954ರಲ್ಲಿ ಕಾಂಗ್ರೆಸ್ ಏಕೆ ಜಾರಿ ಮಾಡಿತು?1995 ಹಾಗೂ 2013ರಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿ, ವಕ್ಫ್ ಟ್ರಿಬ್ಯೂನಲ್ ವಿರುದ್ಧ ಯಾವುದೇ ಕೋರ್ಟ್‌ಗೆ ಹೋಗದಂತೆ ಮಾಡಿತು ಏಕೆ?.
1974ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಯಾವ ಆಧಾರದ ಮೇಲೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತು?50 ವರ್ಷಗಳ ನಂತರ ರೈತರ ಭೂಮಿಯನ್ನು ವಕ್ಫ್ ಹೆಸರಿಗೆ ಬದಲಾಯಿಸಿ, ಪಹಣಿಯಲ್ಲಿ ವಕ್ಫ್ ಸುನ್ನಿ ಎಂದು ಏಕೆ ನಮೂದಿಸುತ್ತಿದ್ದಾರೆ?.
ರಾಜ್ಯದಲ್ಲಿ 1,12,000 ಎಕರೆ, ಭಾರತದಲ್ಲಿ 9,46,000 ಎಕರೆ ವಕ್ಫ್ ಭೂಮಿಯನ್ನು, ಯಾವ ಮುಸ್ಲಿಮರು ಯಾವಾಗ ದಾನ ನೀಡಿದರು? ಅವರ ಹೆಸರನ್ನು ಬಹಿರಂಗಪಡಿಸಬಲ್ಲಿರಾ?.ಹಿಂದಿನ ಮೈನಾರಿಟಿ ಕಮಿಷನ್ ಅಧ್ಯಕ್ಷ ಅನ್ವರ ಮಾನಿಪ್ಪಾಡಿ ವರದಿ ನೀಡಿ, ರಾಜ್ಯದಲ್ಲಿ 96,000 ಎಕರೆ ಭೂಮಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದು ₹ 2,30,000 ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ದಾಖಲೆ ನೀಡಿದ್ದಾರೆ. ಇದರ ತನಿಖೆ ಯಾಕೆ ಮಾಡಿಲ್ಲ?.
2013ರಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ದೆಹಲಿಯ ಕೋಟ್ಯಂತರ ಬೆಲೆಬಾಳುವ 123 ಆಸ್ತಿಗಳನ್ನು ವಕ್ಫ್‌ಗೆ ಯಾಕೆ ನೀಡಿದರು?.ರೈತರ ಜಮೀನುಗಳು, ಮಠ- ಮಂದಿರಗಳು, ಪ್ರಾಚೀನ ಸ್ಮಾರಕಗಳು, ವಕ್ಫ್ ಬೋರ್ಡ್ ತನ್ನದೆಂದು ಹೇಳುತ್ತಿದೆ. ಇದಕ್ಕೆ ತಮ್ಮ ಉತ್ತರವೇನು?.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಕ್ಫ್ ಟ್ರಿಬ್ಯೂನಲ್‌ನ ಮಾರಕ ಕಾಯ್ದೆಗೆ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತಿದ್ದುಪಡಿಗಳನ್ನು ತರಲು ಹೊರಟಿದೆ. ಇದಕ್ಕೆ ತಮ್ಮ ಬೆಂಬಲವಿದೆಯೇ?.ಮತಾಂಧನೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಿಂತು ಸಚಿವ ಎಂ.ಬಿ.ಪಾಟೀಲರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ವಾಮಾಗೋಚರವಾಗಿ ನಿಂದಿಸಿದವನಿಗೆ ಕಾಂಗ್ರೆಸ್‌ನಲ್ಲಿ ಅಧಿಕಾರ ನೀಡಿದ್ದೀರಿ ಏಕೆ?
ಹಿಂದೂ ಸಮಾಜ ಆತಂಕದಲ್ಲಿರುವುದನ್ನು ಮನಗಂಡು ಮಠಾಧೀಶರು ಧರ್ಮರಕ್ಷಣೆಗಾಗಿ, ಹೋರಾಟದಲ್ಲಿ ಪಕ್ಷಾತೀತವಾಗಿ ಭಾಗಿಯಾಗಿದ್ದಾರೆ, ಅವರ ಮೇಲೆ ಆರೋಪ ಹೊರಿಸುವುದು ಎಷ್ಟು ಸೂಕ್ತ?.ವಕ್ಫ್ ಕಾಯ್ದೆ ತಂದವರು ಕಾಂಗ್ರೆಸ್‌ನವರು, ಅದಕ್ಕೆ ಹೆಚ್ಚಿನ ಅಧಿಕಾರ ನೀಡಿದವರು ಕೂಡ ಕಾಂಗ್ರೆಸ್ ನವರು. ಇವೆಕ್ಕೆಲ್ಲ ಉತ್ತರಿಸಬೇಕು, ಇಲ್ಲದಿದ್ದರೆ ನೀವು ಇದು ಪ್ರಶ್ನೆಗಳಿಂದ ಜಾರಿಕೊಳ್ಳುವ ತಂತ್ರ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.-----------