ಸಾರಾಂಶ
ಗೋಕರ್ಣ: ಹವ್ಯಕ ಸಂಸ್ಕೃತಿ-ಸಂಪ್ರದಾಯ, ಆಹಾರ-ವಿಹಾರ, ಆಚಾರ- ವಿಚಾರಗಳನ್ನು ಬಿಂಬಿಸುವ ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲೋತ್ಸಕ್ಕೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಶುಕ್ರವಾರ ಅಶೋಕೆಯ ವಿದ್ಯಾನಂದ ಆವರಣದಲ್ಲಿ ಚಾಲನೆ ನೀಡಿದರು.
ಪುಟ್ಟ ಮಗುವಿಗೆ ಸಿಹಿ ತಿನಿಸುವ ಮೂಲಕ, ಹವ್ಯಕ ಆಹಾರ ವೈವಿಧ್ಯವನ್ನು ಬಿಂಬಿಸುವ ಆಹಾರೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು.ಬಳಿಕ ಸಂಧ್ಯಾರಾಗ ಪರಿಕಲ್ಪನೆಯಡಿ ವಿದುಷಿ ಅನುಷಾ ಚೇಕೋಡ್ ಅವರ ಕರ್ನಾಟಕಿ ಸಂಗೀತ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದೂಷಿ ಸಿರಿ ಶರ್ಮಾ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಯಲಿನ್‍ನಲ್ಲಿ ಜ್ಯೋತಿಲಕ್ಷ್ಮೀ ಅಮೈ ಮತ್ತು ಮೃದಂಗದಲ್ಲಿ ತಮನ್ ಎಕ್ಕಡ್ಕ ಸಾಥ್ ನೀಡಿದರು.
ಬಳಿಕ ಕಾರ್ತೀಕ ಮಾಸದ ವಿಶೇಷ ಕಾರ್ಯಕ್ರಮವಾದ ದಾಮೋದರ ಆರತಿ ನಡೆಯಿತು. ಭಾಗವತದ 10ನೇ ಸ್ಕಂದದಲ್ಲಿ ಬರುವ ಶ್ರೀಕೃಷ್ಣನ ಬಾಲಲೀಲೆಗಳ ಕಥಾನಕವನ್ನು, ಗಲ್ಘ್ ದೇಶಗಳಲ್ಲಿ ಇಂಥ ನೂರಾರು ಭಕ್ತಿಪ್ರಧಾನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸ್ವರ್ಣಗೌರಿ ಸಾಯ ವಿಷ್ಣುಗುಪ್ತ ವಿಶ್ವವಿದ್ಯಾಲಯದ ಮಕ್ಕಳಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಶ್ರೀಗಳು ದಾಮೋದರ ಆರತಿ ನೆರವೇರಿಸುವ ಮೂಲಕ ಈ ವಿಶೇಷ ಕಾರ್ಯಕ್ರಮ ಸಂಪನ್ನಗೊಂಡಿತು.ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಎಸ್. ಹೆಗಡೆ, ರುಕ್ಮಾವತಿ ಸಾಗರ, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಎಂ., ಮಾತೃ ಪ್ರಧಾನರಾದ ವೀಣಾ ಗೋಪಾಲಕೃಷ್ಣ, ವಿವಿಧ ಮಂಡಲಗಳ ಅಧ್ಯಕ್ಷರಾದ ಮಹೇಶ್ ಚಟ್ನಳ್ಳಿ, ಮುರಳಿ ಗೀಜಗಾರ್, ಆರ್.ಜಿ. ಹೆಗಡೆ ಹೊಸಾಕುಳಿ, ಪದಾಧಿಕಾರಿಗಳಾದ ರಮೇಶ್ ಭಟ್ ಸರವು, ಕೇಶವ ಕಿರಣ, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಅರವಿಂದ ಧರ್ಬೆ, ಲಲಿತಾ ಹೆಬ್ಬಾರ, ಪಾರ್ವತಿ ಹೆಬ್ಬಾರ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ಮುಖಂಡರಾದ ಜಿ.ವಿ. ಹೆಗಡೆ, ಸ್ವಾತಿ ಭಾಗ್ವತ್, ಶ್ರೀಕಾರ್ಯದರ್ಶಿ ಮಧು ಜಿ.ಕೆ., ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು.
ಉಂಡ್ಲಕಾಳು, ಹಲಸಿನ ಉಪ್ಪು ಸೊಳೆ ವಡೆ, ಮೈಸೂರುಪಾಕ್, ಸೆವೆನ್‍ಕಪ್, ಚಕ್ಕುಲಿ, ಖಾರಾ ಬೂಂದಿ, ಮನೋಹರಮ ತುಕ್ಕುಡಿ (ಶಂಕರಪೊಳೆ), ಬಾಳೆಕಾಯಿ ಚಿಪ್ಸ್, ಕಾರಕಡ್ಡಿ, ಸೇಮಿಗೆ, ಕಾಯಿವಡೆ, ಬೆಲ್ಲ ತೆಂಗಿನಕಾಯಿ ಉಂಡೆ, ಅತಿರಸ, ಸುಕ್ಕಿನುಂಡೆ, ನೇಂದ್ರ ಚಿಪ್ಸ್, ಚಾಕೊಲೇಟ್ ಕಡಿ, ಸೋಂಪಾ ಪುಡಿ, ಕೋಡುಬಳೆ, ಖಾರಾ ಶೇವ್, ಪಪ್ಪಾಯಿ ಸಿಹಿ (ಹಲ್ವ), ನಿಪ್ಪಟ್ಟು, ಬಾಳೆ ಹಣ್ಣಿನ ಹಲ್ವ, ಬೂಂದಿ ಲಾಡು, ಅವಲಕ್ಕಿ ಚುಡುವಾ, ರವೆ ಉಂಡೆ, ಮಿಶ್ಚರ್, ಕಾಯಿ ಹೋಳಿಗೆ, ಗೋಡಂಬಿ ಚಿಕ್ಕಿ, ಕ್ಯಾರೆಟ್- ತೆಂಗಿನಕಾಯಿ ಬರ್ಫಿ, ಇದರ ಜತೆಗೆ ಬಿಸಿ ಬಿಸಿ ದೋಸೆ, ಜಿಲೇಬಿ, ಬಿಸ್ಕೆಟ್ ರೊಟ್ಟಿ, ಬೇಯಿಸಿದ ಶೇಂಗಾ, ಹಲಸಿನ ಎಲೆಯ ಕೊಟ್ಟೆ ಕಡುಬು ಹೀಗೆ ಹವ್ಯಕರ ಆಹಾರ ಪದ್ಧತಿಯ ವೈವಿಧ್ಯಮಯ ತಿಂಡಿ ತಿನಸುಗಳು ಈ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿವೆ.