ಅಖಾಡಕ್ಕೆ ರಘು ಚಂದನ್ ಎಂಟ್ರಿ

| Published : Apr 13 2024, 01:03 AM IST

ಸಾರಾಂಶ

ಚಿತ್ರದುರ್ಗ ಲೋಕಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಯುವ ಮುಖಂಡ ರಘು ಚಂದನ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಗೆ ಜನ ಸಂಘಟಿಸಿ ಕಾರ್ಯಕ್ರಮ ಉಸ್ತುವಾರಿ ಹೊತ್ತ ಬಗೆ ಭರ್ಜರಿ ಎಂಟ್ರಿ ಸಾಬೀತು ಪಡಿಸಿದಂತೆ ಗೋಚರಿಸಿತು.

ಹೊಳಲ್ಕೆರೆ: ಚಿತ್ರದುರ್ಗ ಲೋಕಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಯುವ ಮುಖಂಡ ರಘು ಚಂದನ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ಹೊಳಲ್ಕೆರೆಯಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಗೆ ಜನ ಸಂಘಟಿಸಿ ಕಾರ್ಯಕ್ರಮ ಉಸ್ತುವಾರಿ ಹೊತ್ತ ಬಗೆ ಭರ್ಜರಿ ಎಂಟ್ರಿ ಸಾಬೀತು ಪಡಿಸಿದಂತೆ ಗೋಚರಿಸಿತು.

ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ರಘು ಚಂದನ್ ಕಡೇಗಳಿಗೆಯವರೆಗೂ ಗಂಭೀರ ಪ್ರಯತ್ನ ಮಾಡಿದ್ದರು. ಆದರೆ ಪಕ್ಷದ ಹೈಕಮಾಂಡ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಿತ್ತು. ಚುನಾವಣೆ ಪ್ರಚಾರದಲ್ಲಿ ರಘು ಚಂದನ್ ಪಾಲ್ಗೊಳ್ಳುತ್ತಾರೋ, ನೇಪಥ್ಯಕ್ಕೆ ಸರಿಯುತ್ತಾರೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದಿರುವುದಾಗಿ ರಘುಚಂದನ್ ಹೇಳುವುದರ ಮೂಲಕ ಅನುಮಾನಗಳನ್ನು ನಿವಾರಿಸಿದ್ದಾರೆ.

ಈ ವೇಳೆ ಮಾತನಾಡಿದ ರಘು ಚಂದನ್, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಸಹಜವಾಗಿಯೇ ಅಸಮಧಾನವಾಗಿತ್ತು. ಟಿಕೆಟ್ ತಪ್ಪಿದಾಗ ಬೇರೆ ಪಕ್ಷದವರು ಆಹ್ವಾನಿಸಿದ್ದರು. ನಂಬಿದ ಕಾರ್ಯಕರ್ತರ ಕತ್ತು ಕೊಯ್ಯುವುದಿಲ್ಲವೆಂದು ಕರೆದವರಿಗೆ ಹೇಳಿದ್ದೆ. ಬಳಿಕ ಬಿ.ಎಸ್‌.ವೈ, ಬಿ.ವೈ.ವಿಜಯೇಂದ್ರ ಮನವೊಲಿಸಿದ್ದರು. ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ಹೆಚ್ಚಿನ ಮತಗಳ ಲೀಡ್ ಕೊಡಿಸುವೆ. ನಾವು ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ, ಬಳಸಿಕೊಳ್ಳಲ್ಲ. ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುವುದೇ ನನ್ನ ಗುರಿ ಎಂದರು.