ಜಿಲ್ಲಾ ಜೆಡಿಎಸ್ ವಕ್ತಾರರಾಗಿ ರಘು ಹೊಂಗೆರೆ ಅವರು ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಯುವ ಜನತಾದಳದ ರಾಜ್ಯ ಕಾರ್ಯದರ್ಶಿಯಾಗಿದ್ದ ರಘು ಅವರು, ನಂತರ ೨೦೧೬ ಫೆಬ್ರವರಿ ೧೩ರಂದು ಮೊದಲ ಬಾರಿಗೆ ಜಿಲ್ಲಾ ಜೆಡಿಎಸ್ ವಕ್ತಾರರಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್. ಡಿ. ದೇವೇಗೌಡರಿಂದ ನೇಮಕಗೊಂಡರು. ಜಿಲ್ಲೆಯ ವಿವಿಧ ಜ್ವಲಂತ ಸಮಸ್ಯೆಗಳ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ದನಿ ಎತ್ತುವ ರಘು ಅವರು, ಈ ಮೂಲಕ ಆಳುವ ಸರ್ಕಾರ ಗಮನ ಸೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ.
ಹಾಸನ: ಜಿಲ್ಲಾ ಜೆಡಿಎಸ್ ವಕ್ತಾರರಾಗಿ ರಘು ಹೊಂಗೆರೆ ಅವರು ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ಯುವ ಜನತಾದಳದ ರಾಜ್ಯ ಕಾರ್ಯದರ್ಶಿಯಾಗಿದ್ದ ರಘು ಅವರು, ನಂತರ ೨೦೧೬ ಫೆಬ್ರವರಿ ೧೩ರಂದು ಮೊದಲ ಬಾರಿಗೆ ಜಿಲ್ಲಾ ಜೆಡಿಎಸ್ ವಕ್ತಾರರಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್. ಡಿ. ದೇವೇಗೌಡರಿಂದ ನೇಮಕಗೊಂಡರು. ೨೦೨೨ರಲ್ಲಿ ಅಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ೨ನೇ ಬಾರಿಗೆ ಮರು ಆಯ್ಕೆ ಮಾಡಿದರು. ಇದರೀಗ ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡರು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಘು ಹೊಂಗೆರೆ ಅವರು, ಪಕ್ಷದ ವರಿಷ್ಠರಾದ ದೇವೇಗೌಡರಾದಿಯಾಗಿ ಪಕ್ಷದ ಎಲ್ಲ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಪಕ್ಷ ಸಂಘಟನೆ ಹಾಗೂ ಪ್ರಚಾರದ ವಿಷಯದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಮಾಧ್ಯಮ ಮಿತ್ರರೊಂದಿಗೆ ಅನ್ಯೂನ್ಯ ಮತ್ತು ಆಪ್ತ ಸಂಬಂಧ ಹೊಂದಿರುವ ರಘು ಅವರು, ಜೆಡಿಎಸ್ ಪಕ್ಷ ಹಾಗೂ ತಮ್ಮ ನಾಯಕರ ಸುದ್ದಿ ವಿಚಾರಗಳು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಪ್ಪದೇ ಪ್ರಸಾರ, ಪ್ರಕಟಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯ ವಿವಿಧ ಜ್ವಲಂತ ಸಮಸ್ಯೆಗಳ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ದನಿ ಎತ್ತುವ ರಘು ಅವರು, ಈ ಮೂಲಕ ಆಳುವ ಸರ್ಕಾರ ಗಮನ ಸೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ.