ರಾಗಿ ಮಾಲ್ಟ್‌ನಿಂದ ಮಕ್ಕಳ ಆರೋಗ್ಯ ಸದೃಢ: ಶಾಸಕ ಬಸವರಾಜು ಶಿವಗಂಗಾ

| Published : Mar 13 2024, 02:00 AM IST

ರಾಗಿ ಮಾಲ್ಟ್‌ನಿಂದ ಮಕ್ಕಳ ಆರೋಗ್ಯ ಸದೃಢ: ಶಾಸಕ ಬಸವರಾಜು ಶಿವಗಂಗಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಗಿಮಾಲ್ಟ್ ನಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳ ಮಿಶ್ರಣಗಳು ಒಳಗೊಂಡಿದ್ದು ಮಕ್ಕಳು ಖುಷಿಯಿಂದ ಕುಡಿಯಲು ಮುಂದೆ ಬರುತ್ತಿದ್ದಾರೆ ಮತ್ತು ಈ ಮಾಲ್ಟ್ ನಿಂದ ಉತ್ತಮ ಆರೋಗ್ಯ ಲಭಿಸುವ ಜೊತೆಗೆ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಲವಲವಿಕೆಯಿಂದ ಶಾಲೆಗೆ ಬರಲು ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆರೋಗ್ಯವಂತರಾಗಿರಬೇಕು ಎಂಬ ಉದ್ದೇಶದಿಂದ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಪುಷ್ಟಿದಾಯಕ ರಾಗಿ ಮಾಲ್ಟ್ ನೀಡಿ ಮಕ್ಕಳ ಆರೋಗ್ಯ ಸದೃಢಗೊಳಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.

ತಾಲೂಕಿನ ಇಟ್ಟಿಗೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳ ಆರೋಗ್ಯ ವರ್ಧನೆಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮಕ್ಕಳಿಗೆ ಬೇಕಾದ ಪೌಷ್ಟಿಕಾಂಶಗಳು ಸಿಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ ರಾಗಿಮಾಲ್ಟ್ ನಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳ ಮಿಶ್ರಣಗಳು ಒಳಗೊಂಡಿದ್ದು ಮಕ್ಕಳು ಖುಷಿಯಿಂದ ಕುಡಿಯಲು ಮುಂದೆ ಬರುತ್ತಿದ್ದಾರೆ ಮತ್ತು ಈ ಮಾಲ್ಟ್ ನಿಂದ ಉತ್ತಮ ಆರೋಗ್ಯ ಲಭಿಸುವ ಜೊತೆಗೆ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಲವಲವಿಕೆಯಿಂದ ಶಾಲೆಗೆ ಬರಲು ಅನುಕೂಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹಾಲಸಿದ್ದಪ್ಪ, ಶಾಲೆ ಮುಖ್ಯ ಶಿಕ್ಷಕ ಕರಿಸಿದ್ದಪ್ಪ ಮಾಸ್ತರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಧುರಾ, ಗ್ರಾ.ಪಂ ಸದಸ್ಯರಾದ ವೆಂಕಟೇಶ್, ಹರೀಶ್, ಎಸ್.ಡಿಎಂಸಿ ಅಧ್ಯಕ್ಷ ತಿಮ್ಮಯ್ಯ ಸೇರಿ ಇತರರಿದ್ದರು.