ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಜಿಲ್ಲೆಯ ರೈತರಿಂದ ಫೆ. 16ರಿಂದ ರಾಗಿ ಖರೀದಿ ಮಾಡಲಾಗುತ್ತಿದ್ದು, ರೈತರು ತಮ್ಮ ತಾಲೂಕು ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿ ಜಿ. ಪ್ರಭು ರೈತರಲ್ಲಿ ಮನವಿ ಮಾಡಿದರು.ತಾಲೂಕಿನ ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಮ್ಮುಖದಲ್ಲಿ ಸೋಮವಾರ ತಾಲೂಕಿನ ವರದಹಳ್ಳಿಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಸ್ಥಳೀಯ ಜನಪ್ರತಿನಿಧಿಗಳು ಈವೇಳೆ ಸಹ ಭಾಗವಹಿಸಲಿದ್ದಾರೆ ಎಂದರು.
2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 7392 ರೈತರು ನೋಂದಣಿ ಮಾಡಿಕೊಂಡು ಸು 1,57,428 ಕ್ವಿಂಟಲ್ ರಾಗಿಯನ್ನು ಮಾರಾಟ ಮಾಡಲು ರೈತರು ಇಚ್ಚೆ ಪಟ್ಟಿರುತ್ತಾರೆ. ಅದರಂತೆ 6 ತಾಲೂಕುಗಳಲ್ಲಿ 6 ತಾಲೂಕು ಖರೀದಿ ಕೇಂದ್ರಗಳನ್ನು ತೆರೆದು ರಾಗಿ ಖರೀದಿಸಲು ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಸಮರ್ಪಕವಾಗಿ ಮಾಡಿಕೊಂಡಿದೆ. ರಾಗಿ ಖರೀದಿ ವೇಳೆ ಯಾವುದೇ ತಾಂತ್ರಿಕ ಅಡೆತಡೆಗಳು ಉದ್ಭವವಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರುರೈತರಲ್ಲಿ ಹೆಚ್ಚಿನ ಆತಂಕ ಬೇಡ:
ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಸಮಕ್ಷಮದಲ್ಲಿಯೇ ರಾಗಿಯನ್ನು ತೂಕ ಮಾಡಿ ಪಡೆಯಲಾಗುತ್ತದೆ. ಯಾವುದೇ ರೈತರಿಗೆ ತಮ್ಮ ರಾಗಿಯನ್ನು ಬೇರೆ ಕಡೆ ತೂಕ ಮಾಡಲು ಇಚ್ಛೆಪಟ್ಟರೆ ಅಂತಹವರ ಅನುಕೂಲಕ್ಕಾಗಿಯೇ ಜಿಲ್ಲೆಯಲ್ಲಿ ನೋಂದಾಯಿತವಾಗಿರುವ ಅಧಿಕೃತ 14 ವೇ ಬ್ರಿಡ್ಜ್ ಗಳನ್ನು ಈ ವರ್ಷ ಗುರುತಿಸಲಾಗಿದ್ದು ಸದರಿ ವೇ ಬ್ರಿಡ್ಜ್ ಗಳಲ್ಲಿ ರಾಗಿಯನ್ನು ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು. ಈಗಾಗಲೇ ದಿನಾಂಕ ವಾರು ವೇಳಾಪಟ್ಟಿಯಂತೆ ರಾಗಿ ಖರೀದಿಸಲು ರೈತರಿಗೆ ಟೋಕನ್ ನೀಡಲಾಗಿದ್ದು, ಅದರಂತೆ ರೈತರು ರಾಗಿಯನ್ನು ಯಾವುದೇ ಹೆಚ್ಚಿನ ಆತಂಕಕ್ಕೆ ಒಳಗಾಗದೆ ಜಿಲ್ಲಾಡಳಿತ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ರಾಗಿ ಖರೀದಿ ಕೇಂದ್ರಗಳ ತಾಲೂಕುವಾರು ವಿಳಾಸ ಸಹಿತ ವಿವರ ಕೆಳಕಂಡಂತಿದೆ. ಎ.ಪಿಎಂ.ಸಿ ಪ್ರಾಂಗಣ ಬಾಗೇಪಲ್ಲಿ , ಎಸ್.ಡಬ್ಲ್ಯೂ.ಸಿ, ವರದಹಳ್ಳಿ ಚಿಕ್ಕಬಳ್ಳಾಪುರ , ಎಸ್.ಡಬ್ಲ್ಯೂ.ಸಿ, ಕಾಗತಿ ಚಿಂತಾಮಣಿ, ಎಸ್.ಡಬ್ಲ್ಯೂ.ಸಿ, ಎ.ಪಿಎಂ.ಸಿ ಪ್ರಾಂಗಣ, ಬಾಲೇನಹಳ್ಳಿ ಬೀಚಗಾನಹಳ್ಳಿ ಪೋ.ಗುಡಿಬಂಡೆ,ಎಸ್.ಡಬ್ಲ್ಯೂ.ಸಿ, ವರದಹಳ್ಳಿ ಶಿಡ್ಲಘಟ್ಟ , ಖರೀದಿ ಅಧಿಕಾರಿಗಳ ಹೆಸರು ಮೊಬೈಲ್ ನಂಬರ್ ಮಂಜುನಾಥ್ ವೈ ಜಿ,-9008132673 ಬಾಗೇಪಲ್ಲಿ, ಸುಧಾಕರ್.ಡಿ- 9008132673-ಚಿಕ್ಕಬಳ್ಳಾಪುರ,, ವೀಣಾ ಎಚ್.ಎನ್- 9008132673-ಚಿಂತಾಮಣಿ, ಮಂಜುನಾಥ್ ವೈ ಜಿ,- 9008132673-ಗೌರಿ ಬಿದನೂರು, ಮಂಜುನಾಥ್ ವೈ.ಜಿ- 9008132673-ಗುಡಿಬಂಡೆ, ಸುಧಾಕರ್ ಡಿ- 8892288961-ಶಿಡ್ಲಘಟ್ಟ.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ಆಹಾರ ನಿರೀಕ್ಷಕ ರಾಮಕೃಷ್ಣ ಇದ್ದರು.ಸಿಕೆಬಿ-1 ತಾಲೂಕಿನ ವರದಹಳ್ಳಿಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ ನೀಡಿ, ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.