ಕಡೂರಲ್ಲಿ ರಾಗಿ ಖರೀದಿ ಕೇಂದ್ರ ಆರಂಭ 2 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ನೊಂದಣಿಸ

| Published : Mar 10 2025, 12:21 AM IST

ಕಡೂರಲ್ಲಿ ರಾಗಿ ಖರೀದಿ ಕೇಂದ್ರ ಆರಂಭ 2 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ನೊಂದಣಿಸ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ರೈತರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆರಂಭಿಸಿರುವ ರಾಗಿ ಖರೀದಿ ಕೇಂದ್ರದಲ್ಲಿ ಸುಮಾರು 2 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.

3ಕ್ಕೆ..ಮಿಡಲ್‌ - ಕಡೂರಲ್ಲಿ ರಾಗಿ ಖರೀದಿ ಕೇಂದ್ರ ಆರಂಭ 2 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ನೊಂದಣಿಸಕನ್ನಡಪ್ರಭ ವಾರ್ತೆ, ಕಡೂರು

ರೈತರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆರಂಭಿಸಿರುವ ರಾಗಿ ಖರೀದಿ ಕೇಂದ್ರದಲ್ಲಿ ಸುಮಾರು 2 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.ಭಾನುವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಬಯಲು ನಾಡಿನಲ್ಲಿ ಹೆಚ್ಚು ಬೆಳೆಯುವ ರಾಗಿ ಬೆಳೆಗೆ ಶಾಸಕ ಕೆ.ಎಸ್.ಆನಂದ್ ಶ್ರಮಿಸುವ ಮೂಲಕ ರಾಗಿ ಖರೀದಿ ಕೇಂದ್ರ ಸ್ಥಾಪಿಸಿದ್ದಾರೆ. ಕೊಬ್ಬರಿ, ರಾಗಿ, ಕಡ್ಲೆ ಯನ್ನು ಈಗಾಗಲೆ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದು ರೈತರು ಯಾವುದೇ ಗೊಂದಲ ಮಾಡಿಕೊಳ್ಳದೆ ಇಲಾಖೆ ಅಧಿಕಾರಿ ಗಳ ಹೇಳಿದ ದಿನದಂದು ರಾಗಿ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು. ಕಡೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಜಿ.ಏಳುಕೋಟಿ ಮಾತನಾಡಿ ತಾಲೂಕಿನಲ್ಲಿ 5 ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು ರೈತರು ನೋಂದಣಿ ಸಮಯದಲ್ಲಿ ಬಯೋಮೆಟ್ರಿಕ್ ನೀಡಬೇಕು ನಂತರ ರಾಗಿಯನ್ನು ಕೇಂದ್ರಕ್ಕೆ ನೀಡು ವಾಗ ಮತ್ತೊಮ್ಮೆ ಬಯೋಮೆಟ್ರಿಕ್ ನೀಡಬೇಕೆಂಬ ನಿಯಮವಿದೆ. ಎಲ್ಲಿಯೂ ಗೊಂದಲವಿಲ್ಲದೆ ಖರೀದಿಗೆ ಎಲ್ಲಾ ವ್ಯವಸ್ಥೆ ಮಾಡಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ಎಪಿಎಂಸಿ ಸಹಾಯಕ ಕಾರ್ಯದರ್ಶಿ ಧರ್ಮರಾಜ್ ಮಾತನಾಡಿ, ಎರಡು ಬಾರಿ ಬಯೋಮೆಟ್ರಿಕ್ ನೀಡುವ ಮೂಲಕ ಸ್ವಚ್ಛ ಗೊಳಿಸಿದ ರಾಗಿಯನ್ನೇ ನೀಡಿ. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ದಿನವೊಂದಕ್ಕೆ 30 ಫಲಾನುಭವಿಗಳಿಗೆ ಮಾತ್ರ ಅವಕಾಶವಿದ್ದು ಜೇಷ್ಠತಾ ಪಟ್ಟಿಯಂತೆ ಖರೀದಿಸುತ್ತಾರೆ ಎಂದರು. ಸಹಕಾರ ಮಹಾ ಮಂಡಲದ ವ್ಯವಸ್ಥಾಪಕ ಪ್ರಶಾಂತ್, ರಾಗಿ ಖರೀದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ರೈತರು ಗೊಂದಲ ಗಳಿಲ್ಲದೆ ರಾಗಿ ನೀಡಿ ಎಂದು ಮನವಿ ಮಾಡಿದರು.ನಿವೃತ್ತ ಉಪನ್ಯಾಸಕ ಜಿ.ರೇವಣ್ಣ,ರೈತ ಹೋಚೀಹಳ್ಳಿ ದೇವರಾಜ್ ಹಾಗೂ ಅಧಿಕಾರಿ ವರ್ಗದವರು ಇದ್ದರು.-- ಬಾಕ್ಸ್ ಸುದ್ದಿ --

2,06,456.50 ಕ್ವಿಂಟಾಲ್ ರಾಗಿ ಖರೀದಿ

ತಾಲೂಕಿನಲ್ಲಿ 5 ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದ್ದು ಕಡೂರು-1ನೇ ಕೇಂದ್ರದಲ್ಲಿ 4 ಸಾವಿರ ರೈತರು ನೋಂದಣಿ ಮಾಡಿಸಿಕೊಂಡಿದ್ದು 66,313.50 ಕ್ವಿಂಟಾಲ್ ಖರೀದಿ ನಡೆಯಲಿದೆ. ಕಡೂರು- 22,757 ನೋಂದಣಿಯಾಗಿದ್ದು 45,580. ಕ್ವಿಂಟಾಲ್ ಖರೀದಿಯಾಗಲಿದೆ, ಬೀರೂರು ಕೇಂದ್ರದಲ್ಲಿ 1906 ನೋಂದಾಯಿಸಿದ್ದು 31,088.50 ಕ್ವಿಂಟಾಲ್, ಪಂಚನಹಳ್ಳಿ-1ರಲ್ಲಿ 1908 ನೋಂದಣಿಯಾಗಿದ್ದು 32,161.50 ಕ್ವಿಂಟಾಲ್ ಪಂಚನಹಳ್ಳಿ-2ರಲ್ಲಿ 1891 ನೋಂದಣಿಯಾಗಿ 31,313 ಕ್ವಿಂಟಾಲ್ ಖರೀದಿಯಾಗಲಿದೆ. ಒಟ್ಟಾರೆ 12,462 ರೈತರು ನೋಂದಣಿ ಮಾಡಿಸಿದ್ದು 2,06,456.50 ಕ್ವಿಂಟಾಲ್ ರಾಗಿ ಖರೀದಿಯಾಗಲಿದೆ.

9ಕೆಕೆಡಿಯು1.

ಕಡೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆಸಂದಿ ಕಲ್ಲೇಶ್ ಉದ್ಘಾಟಿಸಿದರು. ಜಿ.ರೇವಣ್ಣ, ದೇವರಾಜ್, ಪ್ರಶಾಂತ್, ಏಳುಕೋಟಿ ಮತ್ತು ಧರ್ಮರಾಜ್ ಇದ್ದರು.