ಸಾರಾಂಶ
ಜನಪ್ರನಿಧಿಗಳು ಸಹ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ನದಿ ಕಲುಷಿತಗೊಳ್ಳುವುದರ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು
ಕನ್ನಡಪ್ರಭ ವಾರ್ತೆ ಮುಗಳಖೋಡ
ರಾಹುಲ್ ಗಾಂಧಿಯವರು ನುರಿತ, ಪ್ರಬುದ್ಧ ರಾಜಕಾರಣಿ ಎಂಬ ವಿಶ್ವಾಸದಿಂದ ದೇಶದ ಜನತೆ ಕಾಂಗ್ರೆಸ್ ಕೈ ಹಿಡಿದಿದೆ. ಹೀಗಾಗಿ, ಲೋಕಸಭಾ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೆಲವೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅವರ, ಕುರಿತು ಹೇಳಿಕೆ ನೀಡುವವರಿಗೆ ಟ್ಯಾಕ್ಸ್, ಜಿಎಸ್‌ಟಿ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.ಮುಗಳಖೋಡದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರಬುದ್ಧ ರಾಜಕಾರಣಿ ಇರುವುದರಿಂದ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಹೀಗಾಗಿ ಲೋಕಸಭೆಯಲ್ಲಿ 100ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಒಲಿದಿವೆ ಎಂದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಮತ್ತೆ ನೀರು ಬಿಡುಗಡೆ ಮಾಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಹಾಗೂ ಜಾನುವಾರುಗಳಿಗೆ ಹೆಚ್ಚಿನ ನೀರು ಬೇಕು. ಎಲ್ಲ ಕಾಲುವೆಗಳ ಮೂಲಕ ರೈತರಿಗೆ ನೀರು ತಲುಪಿಸುವ ಕೆಲಸವಾಗಿದೆ. ಕ್ಷೇತ್ರದ ಜನರಿಗೆ ಯಾವುದೇ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲೆಲ್ಲಿ ಕಾಲುವೆಗಳ ಸಮಸ್ಯೆಯಾಗಿದೆ ಎಂಬುವುದನ್ನು ಖುದ್ಧಾಗಿ ಪರಿಶೀಲನೆ ನಡೆಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಕಾರ್ಖಾನೆಗಳಿಂದ ಕೃಷ್ಣಾ ನದಿಯು ಕಲುಷಿತಗೊಳ್ಳುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಜನಪ್ರನಿಧಿಗಳು ಸಹ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ನದಿ ಕಲುಷಿತಗೊಳ್ಳುವುದರ ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಎಸ್.ಬಿ.ಘಾಟಿಗೆ, ಬೆಳಗಾವಿ ಬಿಮ್ಸ್ ನಿರ್ದೇಶಕರು, ನ್ಯಾಯವಾದಿ ರಾಜು ಶಿರಾಗಾಂವಿ, ಕೆಪಿಸಿಸಿ ಜಿಲ್ಲಾ ಯೂತ್ ಅಧ್ಯಕ್ಷ ಯಲ್ಲಪ್ಪ ಶಿಂಗೆ, ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ, ಬೆಳಗಾವಿ ಉತ್ತರ ವಲಯ ಸಿಇ ಬಿ.ಆರ್.ರಾಠೋಡ, ಸೂಪರ್ ಡೆಂಟ್ ಇಂಜಿನಿಯರ್ ಆರ್.ಟಿ.ಮೇತ್ರಿ, ಜಮಖಂಡಿ ನೀರಾವರಿ ಇಲಾಖೆ ಇಇ ಎಸ್.ಎಸ್. ಕಲ್ಯಾಣಿ, ನಾಗೇಶ ಕೊಲಕಾರ, ಹಾರೂಗೇರಿ ನೀರಾವರಿ ಇಲಾಖೆಯ ಎಇಇ ಟಿ.ಹೆಚ್.ಕಟ್ಟಿಮನಿ, ಎಂ.ಪಿ. ಗುರವ, ಎ.ಬಿ.ನಾಯಕ, ಎಂ.ಪಿ.ನೇಮಗೌಡರ, ಶೇಖರ ರಾಥೋಡ, ಹಾರೂಗೇರಿ ಸಿಪಿಐ ರತನಕುಮಾರ ಜಿರಗ್ಯಾಳ, ಗಿರೀಶ ದರೂರ, ದಸ್ತಗೀರ ಕಾಗವಾಡೆ, ಕುಡಚಿ ಕಂದಾಯ ನಿರೀಕ್ಷಕ ರಾಜು ದಾನೋಳಿ, ಅಶೋಕ ಕೊಪ್ಪದ, ಅಜ್ಜು ನಾಯಕವಾಡೆ, ಮುಪ್ಪಯ್ಯ ಹಿರೇಮಠ, ಮಹಮದ್ ಮುಸ್ತಾಫ್ ಇದ್ದರು.