ಸಾರಾಂಶ
ಲಿಂಗನಾಯಕನಹಳ್ಳಿ ಮಠದ ಹಿಂಭಾಗದಲ್ಲಿನ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ
ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ನಡೆಯುತ್ತಿರುವ ಮರಳು ಅಕ್ರಮ ದಂಧೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿ ಯಾಂತ್ರಿಕೃತ ಬೋಟ್ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಲಿಂಗನಾಯಕನಹಳ್ಳಿ ಮಠದ ಹಿಂಭಾಗದಲ್ಲಿನ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆಗೆ ಬಳಕೆ ಮಾಡುತ್ತಿದ್ದ, ಯಾಂತ್ರಕೃತ ಬೋಟ್‌ನ್ನು ನೀರಿನಲ್ಲಿನ ಮರಳು ಎತ್ತಲು ಮರಳು ಅಕ್ರಮ ದಂಧೆಕೋರರು ತಂದಿದ್ದರು. ಆ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು, ತಹಸೀಲ್ದಾರ್ ಹಾಗೂ ಪೊಲೀಸರು ದಾಳಿ ಮಾಡಿ ಬೋಟ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ತಹಸೀಲ್ದಾರ್ ಜಿ. ಸಂತೋಷಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮಲ್ಲಯ್ಯ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.