ಕಾಡಾನೆಗಳ ಸಂರಕ್ಷಣೆಗೆ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಿ

| Published : Aug 27 2025, 01:00 AM IST

ಕಾಡಾನೆಗಳ ಸಂರಕ್ಷಣೆಗೆ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 10 ವರ್ಷಗಳಲ್ಲಿ ತಾಲೂಕಿನ ಬಾಳ್ಳುಪೇಟೆಯಿಂದ ಗಡಿ ಚೌಡೇಶ್ವರಿ ದೇವಸ್ಥಾನದವರಗಿನ 51 ಕಿ.ಮೀ. ವ್ಯಾಪ್ತಿಯಲ್ಲಿ ಐದು ಕಾಡಾನೆಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರೈಲಿಗೆ ಸಿಲುಕಿ ಕಾಡಾನೆಗಳು ಬಲಿಯಾಗುವುದನ್ನು ತಡೆಯಲು ರೈಲ್ವೆ ಇಲಾಖೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸೂಚಿಸಿದ್ದಾರೆ.ಮಂಗಳವಾರ ಪಟ್ಟಣದ ರೈಲ್ವೆ ಇಲಾಖೆ ಸಭಾಂಗಣದಲ್ಲಿ ರೈಲ್ವೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ರೈಲ್ವೆ ಇಲಾಖೆಯ ಲೋಕೋ ಪೈಲೆಟ್ ಹಾಗೂ ಸಹಾಯಕ ಲೋಕೋ ಪೈಲೆಟ್‌ಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ತಾಲೂಕಿನ ಬಾಳ್ಳುಪೇಟೆಯಿಂದ ಗಡಿ ಚೌಡೇಶ್ವರಿ ದೇವಸ್ಥಾನದವರಗಿನ 51 ಕಿ.ಮೀ. ವ್ಯಾಪ್ತಿಯಲ್ಲಿ ಐದು ಕಾಡಾನೆಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

50ಕ್ಕೂ ಅಧಿಕ ಕಾಡುಪ್ರಾಣಿಗಳು ಅಸುನೀಗಿವೆ. ಆದ್ದರಿಂದ, ಈ ವಲಯದಲ್ಲಿ ರೈಲಿನ ವೇಗವನ್ನು 30 ಕಿ.ಮೀ ಮಿತಿಗೊಳಿಸ ಬೇಕು. ಕಾಡಾನೆಗಳು ಸಂಚರಿಸುವ ಪ್ರದೇಶದಲ್ಲಿ ಸೈನಿಂಗ್ ಬೋರ್ಡ್ ಆಳವಡಿಸಬೇಕು ಹಾಗೂ ರೈಲ್ವೆ ಹಳಿ ಸಮೀಪಕ್ಕೆ ಬೆಳೆದಿರುವ ಲಾಂಟನ ತೆರವುಗೊಳಿಸಬೇಕು ಎಂಬ ಸಲಹೆ ನೀಡಿದ್ದು ರೈಲ್ವೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಕಾರ್ಯಾಗಾರದಲ್ಲಿ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಇಂಜಿನೀಯರ್ ಧರ್ಮೇಂದ್ರ ಕುಮಾರ್, ಪೌಲಿನ್, ಉಪವಲಯ ಅರಣ್ಯಾಧಿಕಾರಿಗಳಾದ ಮಹದೇವ್, ಮಂಜುನಾಥ್, ಅರ್ಜುನ್, ಮೋಹನ್‌ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.೨೬ ಎಸ್‌ಕೆಪಿಪಿ ೨ ರೈಲ್ವೆ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಗಾರ ಪಟ್ಟಣದ ರೈಲ್ವೆ ಇಲಾಖೆ ಸಭಾಂಗಣದಲ್ಲಿ ನಡೆಯಿತು.