ರೈಲ್ವೆ ಮೇಲುಸೇತುವೆ ಶಾಸಕರಿಂದ ಸ್ಥಳ ಪರಿಶೀಲನೆ

| Published : Jun 17 2024, 01:33 AM IST

ಸಾರಾಂಶ

ಬೆಂಗಳೂರು ನೈರುತ್ಯ ರೈಲ್ವೆ ವಲಯದ ವಿಭಾಗಾಧಿಕಾರಿಗಳು ತುಮಕೂರಿಗೆ ಭೇಟಿ ನೀಡಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಬೆಂಗಳೂರು ನೈರುತ್ಯ ರೈಲ್ವೆ ವಲಯದ ವಿಭಾಗಾಧಿಕಾರಿಗಳು ತುಮಕೂರಿಗೆ ಭೇಟಿ ನೀಡಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಿದರು. ತುಮಕೂರು ನಗರ ರೈಲ್ವೆ ನಿಲ್ದಾಣದಲ್ಲಿ ಆಗಬೇಕಾಗಿರುವ ಪ್ರಯಾಣಿಕರ ಸೌಲಭ್ಯಗಳ ಉನ್ನತೀಕರಣ ಹಾಗೂ ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ಎರಡನೇ ಪ್ರವೇಶ ದ್ವಾರದ ಬಗ್ಗೆ ಚರ್ಚಿಸಲಾಯಿತು.ತುಮಕೂರು ನಗರದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ರೈಲ್ವೆ ಮೇಲುಸೇತುವೆ, ಕೆಳಸೇತುವೆ ಬಗ್ಗೆ ಹಾಗೂ ನಗರದ ಗೋಕುಲ ಬಡಾವಣೆ ಬಳಿ, ಮಹಾಲಕ್ಷ್ಮೀನಗರ, ಕ್ಯಾತಸಂದ್ರ, ಭೀಮಸಂದ್ರ ಹಾಗೂ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ ನಿರ್ಮಾಣ ಮಾಡಲು ಸ್ಥಳವನ್ನು ಗುರುತಿಸಿ, ಸ್ಥಳ ಪರಿಶೀಲನೆ ಮಾಡಿ, ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕರು ಮನವಿ ಸಲ್ಲಿಸಿದರು. ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ವೀಣಾ ಮನೋಹರಗೌಡ, ರೈಲ್ವೆ ಅಧಿಕಾರಿಗಳು ಇತರರು ಇದ್ದರು.