ಸಾರಾಂಶ
Railway Minister Somanna visited and inspected the train carriage manufacturing unit
ಕನ್ನಡಪ್ರಭ ವಾರ್ತೆ ಯಾದಗಿರಿ
ಮಂಗಳವಾರ ಸಂಜೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಾಲೂಕಿನ ಗಡಿ ಭಾಗದಲ್ಲಿರುವ ಕಡೇಚೂರು ರೈಲು ಬೋಗಿ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಯಚೂರು ಮೂಲಕ ಅವರು ಜಿಲ್ಲೆಗೆ ಆಗಮಿಸಿದ್ದು, ಬುಧವಾರವೂ ಯಾದಗಿರಿಯಲ್ಲಿ ವಿವಿಧೆಡೆ ಪರಿಶೀಲನ ಸಭೆ ನಡೆಸಲಿದ್ದಾರೆ.ರೈಲ್ವೆ ಉನ್ನತ ಅಧಿಕಾರಿಗಳೊಂದಿಗೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಬೋಗಿಗಳ ಸಾಮಗ್ರಿಗಳ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಅವರ ಜೊತೆ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಜಿಲ್ಲಾಧಿಕಾರಿ ಡಾ. ಸುಶೀಲಾ, ಎಸ್ಪಿ. ಜಿ. ಸಂಗೀತಾ, ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಸಿಕಂದರಾಬಾದ್‌ನ ಇಲಾಖೆಯ ಹೆಚ್ಚುವರಿ ಜನರಲ್ ಮ್ಯಾನೇಜರ್ ನೀರಜ್ ಅಗರವಾಲ, ಗುಂತಕಲ್ ಡಿಆರ್ ಎಮ್ ವಿಜಯಕುಮಾರ ಎಂ, ಮಧುಸೂದನ್ ಆರ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
-----ಫೋಟೋ:3ವೈಡಿಆರ್12
ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿರುವ ರೈಲ್ವೆ ಬೋಗಿ ಫ್ಯಾಕ್ಟರಿಯ ಘಟಕದ ವೀಕ್ಷಣೆ ಮಾಡಿದರು.