ಶಾಲೆ ವಿದ್ಯಾರ್ಥಿಗಳಿಗೆ ರೈಲ್ವೆ ಪೊಲೀಸ್‌ ಮಾರ್ಗದರ್ಶನ

| Published : Oct 24 2024, 12:39 AM IST

ಶಾಲೆ ವಿದ್ಯಾರ್ಥಿಗಳಿಗೆ ರೈಲ್ವೆ ಪೊಲೀಸ್‌ ಮಾರ್ಗದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ವಸ್ತು ಬಾಲ್ಯ ವಿವಾಹ ಮತ್ತು ಅಪರಿಚಿತರು ಯಾವುದೇ ಆಹಾರ ವಸ್ತುಗಳನ್ನು ನೀಡಿದರೆ ಪಡೆಯಬಾರದು. ನೀವು ಅಪರಿಚಿತರು ಕರೆದರೆ ಯಾವುದೇ ವಾಹನಗಳನ್ನು ಹತ್ತಬಾರದು. ರಸ್ತೆಯನ್ನು ದಾಟುವಾಗ ಮತ್ತು ಇತರ ಕಡೆ ಸಂಚರಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದರು. ಅಪ್ರಾಪ್ತರ ವಿವಾಹ ಆಗುವ ಮಾಹಿತಿ ನಿಮಗೆ ಸಿಕ್ಕರೆ ಅದನ್ನು ತಿಳಿಸಬೇಕು ಎಂದ ಅವರು, ಸರಕಾರಿ ಶಾಲೆಗಳಲ್ಲಿ ಓದಿ ಅನೇಕ ಮಹನೀಯರುಗಳು ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ರೈಲ್ವೆ ಸಬ್ ಇನ್ಸ್ಪೆಕ್ಟರ್‌ ಮಹೇಶ್ ಇ. ಜಿ ಸ್ಫೂರ್ತಿದಾಯಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿಗಳಿಗೆ ಸುರಕ್ಷತೆ ಮತ್ತು ಸದಾ ಜಾಗೃತರಾಗಿರುವಂತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ರೈಲ್ವೆ ಸಬ್ ಇನ್ಸ್ಪೆಕ್ಟರ್‌ ಮಹೇಶ್ ಇ. ಜಿ ಕರೆ ನೀಡಿದರು.

ಇಲಾಖೆಯ ತೆರೆದ ಮನೆ ಕಾರ್ಯಕ್ರಮದಲ್ಲಿ ನಗರದ ಬಿ ಎಚ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಯಾವುದೇ ಅಡ್ಡದಾರಿಗಳು ಇಲ್ಲ. ಪರಿಶ್ರಮದಿಂದ ಮಾತ್ರ ಸಾಧನೆ ಮಾಡಬೇಕು. ಮನೆಯಲ್ಲಿ ಹಿರಿಯರು ಬುದ್ಧಿವಾದ ಹೇಳುತ್ತಾರೆ, ಅದು ನಿಮ್ಮ ಮುಂದಿನ ಸುಂದರ ಭವಿಷ್ಯಕ್ಕಾಗಿ ಅವರು ಹೇಳುವ ಮಾರ್ಗದರ್ಶನವನ್ನು ಅನುಸರಿಸಿ ಚಂಚಲ ಮನಸ್ಸಿನಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಮೊದಲು ಗುರಿ ಇರಬೇಕು. ನಾನು ಬಡತನದಲ್ಲಿಯೇ ಬಂದವನು. ನಾನು ಶಾಲೆಗೆ ಹೋಗುವಾಗ ಒಂದು ದಿನ ಹರಿದ ಅಂಗಿಯನ್ನು ಹಾಕಿಕೊಂಡು ಹೋಗಿದ್ದೆ, ಅದನ್ನು ಗಮನಿಸಿದ ಶಿಕ್ಷಕರು ನನಗೆ ಒಂದು ಅಂಗಿಯನ್ನು ಪ್ರಾಥಮಿಕ ಶಿಕ್ಷಣ ಸಮಯದಲ್ಲಿ ಕೊಡಿಸಿದ್ದರು. ನಾನು ಈ ಹುದ್ದೆಗೆ ಬಂದಾಗ ನಿವೃತ್ತಿಯಾಗಿದ್ದ ಅವರನ್ನು ಭೇಟಿ ಮಾಡಿ ನಮಸ್ಕರಿಸಿ ಬಂದೆ ಎಂದರು. ಮಾದಕ ವಸ್ತು ಬಾಲ್ಯ ವಿವಾಹ ಮತ್ತು ಅಪರಿಚಿತರು ಯಾವುದೇ ಆಹಾರ ವಸ್ತುಗಳನ್ನು ನೀಡಿದರೆ ಪಡೆಯಬಾರದು. ನೀವು ಅಪರಿಚಿತರು ಕರೆದರೆ ಯಾವುದೇ ವಾಹನಗಳನ್ನು ಹತ್ತಬಾರದು. ರಸ್ತೆಯನ್ನು ದಾಟುವಾಗ ಮತ್ತು ಇತರ ಕಡೆ ಸಂಚರಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದರು. ಅಪ್ರಾಪ್ತರ ವಿವಾಹ ಆಗುವ ಮಾಹಿತಿ ನಿಮಗೆ ಸಿಕ್ಕರೆ ಅದನ್ನು ತಿಳಿಸಬೇಕು ಎಂದ ಅವರು, ಸರಕಾರಿ ಶಾಲೆಗಳಲ್ಲಿ ಓದಿ ಅನೇಕ ಮಹನೀಯರುಗಳು ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಸ್ಫೂರ್ತಿದಾಯಕ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈಲ್ವೆ ಪೊಲೀಸ್‌ಗೆ ಶಾಲೆ ಬಹಳ ಹತ್ತಿರವಾಗಿದೆ. ಕಳೆದ ವರ್ಷವೂ ನಮ್ಮ ಶಾಲೆಯಲ್ಲಿ ಕಾರ್ಯಕ್ರಮನ ಆಯೋಜಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಲಾಗಿತ್ತು. ಈ ಬಾರಿಯೂ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳಿಗೆ ಸಿಹಿನೀರಿ ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸಿದ್ದಾರೆ ಎಂದು ಮಹೇಶ್ ಮತ್ತು ಅವರ ಸಿಬ್ಬಂದಿಗೆ ಕೃತಜ್ಞತೆ ಹೇಳಿದರು, ಸಿಬ್ಬಂದಿಗಳಾದ ಬಸವರಾಜ್ ಹುದಲಿ, ಮಂಜುನಾಥ್, ತಬಸುಮ್ ಇತರರು ಇದ್ದರು.