ಸಾರಾಂಶ
ಬಿಸಿಲ ಝಳ, ಉಷ್ಣ ಗಾಳಿಗೆ ತತ್ತರಿಸಿದ್ದ ದಾವಣರೆರೆ ನಗರ, ಜಿಲ್ಲೆಯ ವಿವಿಧ ತಾಲೂಕುಗಳ ಜನರ ಮನಸ್ಸು ತಣಿಯುವಂತೆ ಶುಕ್ರವಾರ ಸಂಜೆ 4.45 ರಿಂದ ಸುಮಾರು ಗಂಟೆಗಳ ಮಳೆಯಾಗಿ, ಹೊಸ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ನಗರದ ವರ್ತುಲ ರಸ್ತೆಯಿಂದ ಊರ ಹೊರಗೆ ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರ ಪರದಾಟ ಎರಡನೇ ದಿನವೂ ಮುಂದುವರಿಯಿತು.
- ತೋಟಗಳು, ಹೊಲ-ಗದ್ದೆಗಳ ಬೆಳೆಗಳಿಗೆ ಆಸರೆಯಾದ ಮಳೆ
- ಜಾನುವಾರುಗಳಿಗೆ ಹಸಿರು ಮೇವು ಭಾಗ್ಯ, ಇಂದೂ ಮಳೆ ನಿರೀಕ್ಷೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆಬಿಸಿಲ ಝಳ, ಉಷ್ಣ ಗಾಳಿಗೆ ತತ್ತರಿಸಿದ್ದ ನಗರ, ಜಿಲ್ಲೆಯ ವಿವಿಧ ತಾಲೂಕುಗಳ ಜನರ ಮನಸ್ಸು ತಣಿಯುವಂತೆ ಶುಕ್ರವಾರ ಸಂಜೆ 4.45 ರಿಂದ ಸುಮಾರು ಗಂಟೆಗಳ ಮಳೆಯಾಗಿ, ಹೊಸ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ನಗರದ ವರ್ತುಲ ರಸ್ತೆಯಿಂದ ಊರ ಹೊರಗೆ ಸ್ಥಳಾಂತರಗೊಂಡ ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರ ಪರದಾಟ ಎರಡನೇ ದಿನವೂ ಮುಂದುವರಿಯಿತು.
ನಗರ, ಜಿಲ್ಲಾದ್ಯಂತ ಬೆಳಗ್ಗೆ ಸುಮಾರು ಹೊತ್ತು ಹಾಗೂ ಸಂಜೆ ಹೊತ್ತಿಗೆ ದಟ್ಟ ಮೋಡಗಳು ಆವರಿಸಿದ್ದವು. ಗುರುವಾರದಂತೆ ಮತ್ತೆ ಉತ್ತಮ ಮಳೆ ಶುರುವಾಗಿ ಸಿಡಿಲು, ಮಿಂಚು, ಗುಡುಗಿನ ಆರ್ಭಟ ಕಂಡುಬಂತು. ಕಳೆದೊಂದು ವರ್ಷದಿಂದ ಆಗೊಮ್ಮೆ ಈಗೊಮ್ಮೆ ಎಂಬಂತೆ ಮಳೆ ಕಂಡಿದ್ದ ಜಿಲ್ಲೆ ಜನರು ಸಂಜೆ ಸುರಿದ ಮಳೆಯಿಂದಾಗಿ ಹರ್ಷಗೊಂಡರು.ಮಳೆಯಾರ್ಭಟ:
2ನೇ ದಿನ ಶುಕ್ರವಾರವೂ ಸಂಜೆ ಮಳೆ ಸುರಿದಿದ್ದರಿಂದ ಜನವಸತಿ ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು ಖುಷಿಯಿಂದ ನೆನೆಯುತ್ತ ಮಳೆಯನ್ನು ಸಂಭ್ರಮಿಸಿದರು. ಜೋರು ಮಳೆಯಾಗಿ ಬಡಾವಣೆ ಪ್ರದೇಶಗಳ ಸಿಮೆಂಟ್ ರಸ್ತೆಗಳು, ವಿವಿಧ ಇಳಿಜಾರು ಪ್ರದೇಶಕ್ಕೆ ನೀರು ಹರಿದು ಬರತೊಡಗಿತು. ತಗ್ಗು ಪ್ರದೇಶದಲ್ಲೂ ಸಾಕಷ್ಟು ದಿನಗಳ ನಂತರ ಮಳೆಯಾಗಿದ್ದರಿಂದ ಚರಂಡಿಗಳು ಸ್ವಚ್ಛಗೊಂಡವು. ಮಳೆಯಿಂದಾಗಿ ಜನರು ಮಳೆಯಲ್ಲಿಯೇ ವಾಹನಗಳಲ್ಲಿ ಸಾಗುತ್ತಿದ್ದರು. ಗುಡುಗು, ಮಿಂಚಿನ ಆರ್ಭಟದಿಂದಾಗಿ ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆದಿದ್ದು ಸಾಮಾನ್ಯವಾಗಿತ್ತು.ಹಾರಿಹೋದ ಶೆಡ್‌ಗಳ ಪ್ರದೇಶಕ್ಕೆ ಮುಖಂಡರ ಭೇಟಿ:
ಕೆಲ ಸಂಘಟನೆಗಳ ಮುಖಂಡರು ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿದ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಅವ್ಯಸ್ಥೆ, ಕಳೆದೆರೆಡು ದಿನದಿಂದ ಸುರಿದ ಮಳೆಯಿಂದಾಗಿ ವಿದ್ಯುತ್ ಕಂಬ, ತಾತ್ಕಾಲಿಕ ತಗಡಿನ ಶೆಡ್ಡುಗಳು ಗಂಟೆಗೆ ಆರೇಳು ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿ ಹೊಡೆತಕ್ಕೆ ಕಿತ್ತುಹೋಗಿರುವುದು, ತಾಡಾಪಾಲುಗಳು ಸತತ ಬಿಸಿಲ ತಾಪದಿಂದ ಲಂಡಾಗಿ, ಹರಿದು ಹೋಗಿದ್ದರಿಂದ ಸಂತ್ರಸ್ತರು ಪುನಃ ರಾಮಕೃಷ್ಣ ಹೆಗಡೆ ನಗರಕ್ಕೆ ವಾಪಸಾಗಿ ಬದುಕು ಕಟ್ಟಿಕೊಳ್ಳುವುದನ್ನು ಸಮರ್ಥಿಸಿಕೊಂಡರು.ಬೆಳೆಗಳಿಗೆ ಬಂದು ಉಸಿರು:
ಜಿಲ್ಲಾ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿತ್ತು. ರಾತ್ರಿ 9 ಗಂಟೆ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದರೆ, ಮಧ್ಯರಾತ್ರಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇಲ್ಲದಿಲ್ಲ ಎಂಬ ವಾತಾವರಣ ಇತ್ತು. ಶನಿವಾರವೂ ವರುಣನ ಕೃಪೆ ಮುಂದುವರಿಯುವ ಲಕ್ಷಣ ಗೋಚರಿಸಿತು. ಸದ್ಯಕ್ಕೆ ಮಳೆಯಿಂದಾಗಿ ತೋಟದ ಬೆಳೆಗಳು, ವಿವಿಧ ಬೆಳೆಗಳು ಉಸಿರಾಡುವಂತಾಗಿದೆ. ಹಸಿಮೇವು ಇಲ್ಲದೇ, ಒಣ ಮೇವೇ ಆಸರೆಯಾಗಿದ್ದ ರಾಸುಗಳಿಗೆ ಸದ್ಯಕ್ಕೆ ಸ್ವಲ್ಪ ದಿನ ಹಸಿ ಮೇವಿನ ಭಾಗ್ಯ ಲಭಿಸುವ ಆಶಯವಿದೆ.- - - -17ಕೆಡಿವಿಜಿ18, 19, 20:
ದಾವಣಗೆರೆ ತಾ. ಬಾತಿ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಹಳೆ ಪಿಬಿ ರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದೇ, ಬಿಕೋ ಎನ್ನುತ್ತಿರುವುದು.