ಮಳೆ ಅವಾಂತರ: ಕಾಫಿನಾಡಲ್ಲಿ ಈವರೆಗೆ 3 ಪ್ರಾಣ ಹಾನಿ

| Published : May 22 2024, 12:45 AM IST

ಸಾರಾಂಶ

ಚಿಕ್ಕಮಗಳೂರು, ಹಿಂಗಾರು ಮಳೆ ಆರಂಭದಲ್ಲಿ ವಿಳಂಭವಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಣ್ಣು ತರಕಾರಿ ದರ ಗಗನಕ್ಕೆ ಮುಖ ಮಾಡಿತ್ತು. ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ರೈತರು ಹಿಂದೇಟು ಹಾಕಿದ್ದರು.

- 48 ಮನೆಗಳಿಗೆ ಹಾನಿ । 2 ಜಾನುವಾರುಗಳು ಮೃತ । ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂಗಾರು ಮಳೆ ಆರಂಭದಲ್ಲಿ ವಿಳಂಭವಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಣ್ಣು ತರಕಾರಿ ದರ ಗಗನಕ್ಕೆ ಮುಖ ಮಾಡಿತ್ತು. ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ರೈತರು ಹಿಂದೇಟು ಹಾಕಿದ್ದರು.

ಆದರೆ, ಈ ಕರಾಳ ವಾತಾವರಣವನ್ನು ಏಪ್ರಿಲ್‌ ಕೊನೆಯಿಂದ ಈವರೆಗೆ ಸುರಿದ ಮಳೆ ದೂರ ಮಾಡಿದೆ. ಪ್ರತಿ ದಿನ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಬಿತ್ತನೆ ಕಾರ್ಯವೂ ಕೂಡ ಭರದಿಂದ ನಡೆಯುತ್ತಿದೆ.

ಈ ನಡುವೆ ಮಳೆ ಒಂದೆಡೆ ಹರ್ಷ ಮೂಡಿಸಿದ್ದರೆ, ಇನ್ನೊಂದೆಡೆ ಕಾಫಿನಾಡಿನಲ್ಲಿ ನಷ್ಟವನ್ನು ಸಹ ಉಂಟು ಮಾಡಿದೆ. ಏಪ್ರಿಲ್‌ 1 ರಿಂದ ಈವರೆಗೆ ಮಳೆ ಹಾಗೂ ಅದಕ್ಕೆ ಸಂಬಂಧಿಸಿದ ಅವಘಡದಿಂದಾಗಿ 3 ಮಂದಿ ಮೃತಪಟ್ಟಿದ್ದಾರೆ. ಕೊಪ್ಪ, ಎನ್‌.ಆರ್‌.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 48 ಮನೆಗಳಿಗೆ ಹಾನಿ ಸಂಭವಿಸಿದೆ. ಇವುಗಳಲ್ಲಿ ಶೇ.15 ರಿಂದ ಶೇ. 25 ರಷ್ಟು ಹಾನಿಯಾಗಿರುವ ಮನೆಗಳ ಸಂಖ್ಯೆ 41 ಇದ್ದರೆ, ಶೇ. 75 ರಷ್ಟು ಹಾನಿಯಾಗಿರುವ ಮನೆಗಳ ಸಂಖ್ಯೆ 7, ಚಿಕ್ಕಮಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 11, ಮೂಡಿಗೆರೆ ತಾಲೂಕಿನಲ್ಲಿ 4, ಕೊಪ್ಪ - 9, ಎನ್‌.ಆರ್‌.ಪುರ- 12, ತರೀಕೆರೆ- 2, ಅಜ್ಜಂಪುರ- 6, ಕಳಸ ತಾಲೂಕಿನಲ್ಲಿ 3 ಮನೆಗಳಿಗೆ ಹಾನಿಯಾಗಿದೆ.

ಕಳಸ ಹಾಗೂ ತರೀಕೆರೆ ತಾಲೂಕುಗಳಲ್ಲಿ ತಲಾ ಒಂದೊಂದು ಹಸುಗಳು ಮೃತಪಟ್ಟಿವೆ.----- ಬಾಕ್ಸ್‌ -------

ಜಿಲ್ಲೆಯಾದ್ಯಂತ ಮುಂದುವರಿದ ಮಳೆಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಬಿಡುವು ಕೊಟ್ಟಿಲ್ಲ, ಮಂಗಳವಾರವೂ ಕೂಡ ಮುಂದುವರಿದಿತ್ತು. ಆದರೆ, ಕಳೆದೆರಡು ದಿನಗಳಿಗೆ ಹೋಲಿಕೆ ಮಾಡಿದರೆ, ಮಲೆನಾಡು ಸೇರಿದಂತೆ ಬಯಲುಸೀಮೆಯಲ್ಲೂ ಇಳಿಮುಖವಾಗಿತ್ತು.

ಶೃಂಗೇರಿ, ಮೂಡಿಗೆರೆ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ತುಂತುರು ಮಳೆಯಾಗಿದ್ದು, ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಡುವು ನೀಡಿತ್ತು.

ಶೃಂಗೇರಿ ತಾಲೂಕಿನಲ್ಲಿ ಮಧ್ಯಾಹ್ನ 3 ಗಂಟೆಯಿಂದ 5 ರವರೆಗೆ ಗುಡುಗು ಸಹಿತ ಮಳೆ ಬಂದು ನಂತರದಲ್ಲಿ ಮುಂಗಾರು ಮಳೆ ರೀತಿ ನಿರಂತರವಾಗಿ ಸುರಿದಿತ್ತು. ಆದರೆ, ಕೊಪ್ಪ, ಎನ್‌.ಆರ್‌.ಪುರ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣವಾಗಿತ್ತು.

ಆದರೆ, ಸೋಮವಾರ ಮಧ್ಯ ರಾತ್ರಿ ಸುರಿದ ಮಳೆಗೆ ಬಯಲುಸೀಮೆಯ ಕೆಲವೆಡೆ ಹಾನಿ ಸಂಭವಿಸಿದೆ. ಕಡೂರು ತಾಲೂಕಿನ ವಿ. ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿಕೆರೆ ಕೋಡಿ ಬಿದ್ದಿದೆ. ಹೇಮಗಿರಿ, ಕೆರೆಸಂತೆ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಕೆಲವೆಡೆ ಶುಂಠಿ ಬೆಳೆಗೆ ಮಳೆ ಹಾನಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ವಾಡಿಕೆಗೂ ಮೀರಿ ಮಳೆ:

ಚಿಕ್ಕಮಗಳೂರು ನಗರದಲ್ಲಿ 28 ಮಿ.ಮೀ. ಮಳೆಯಾಗಿದ್ದರೆ, ಅಂಬಳೆಯಲ್ಲಿ 18.6, ಆಲ್ದೂರು- 22.3, ಸಂಗಮೇಶ್ವರ ಪೇಟೆ- 22.9, ಆವುತಿ- 40.9, ಜಾಗರ- 44.6, ಕಡೂರು- 57.4, ಬೀರೂರು- 55.9, ಹಿರೇನಲ್ಲೂರು- 28.4, ಸಖರಾಯ ಪಟ್ಟಣ- 51.2, ಸಿಂಗಟಗೆರೆ- 82.6, ಯಗಟಿ- 34.4, ಕೊಪ್ಪ- 61.8, ಹರಿಹರಪುರ- 50.2, ಮೂಡಿಗೆರೆ- 13.8, ಎನ್‌.ಆರ್‌.ಪುರ- 22, ಬಾಳೆಹೊನ್ನೂರು- 34.6, ಶೃಂಗೇರಿ- 35.9, ತರೀಕೆರೆ- 13.6, ಅಜ್ಜಂಪುರ- 46.9, ಶಿವನಿ- 33, ಕಳಸದಲ್ಲಿ 24.8 ಮಿ.ಮೀ. ಮಳೆ ಬಂದಿದೆ.

--

ಭಾರೀ ಮಳೆಗೆ ತುಂಬಿದ ಕೆರೆಗಳುರೈತರ ಮೊಗದಲ್ಲಿ ಮೂಡಿದ ಮಂದಹಾಸಕನ್ನಡಪ್ರಭ ವಾರ್ತೆ, ಕಡೂರುಸೋಮವಾರ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಯಿಂದ ಅನೇಕ ಕೆರೆಗಳಿಗೆ ನೀರು ಹರಿಯುತ್ತಿರುವುದು ಜನರಲ್ಲಿ ಹರ್ಷ ಮೂಡಿಸಿದೆ. ತಾಲೂಕಿನ ಸೀಗೆಹಡ್ಲು ಕೆರೆ ನಿನ್ನೆ ಸುರಿದ ಒಂದೇ ಮಳೆಗೆ ಪೂರ್ಣ ತುಂಬಿ ಕೋಡಿ ಹರಿಯುತ್ತಿದೆ. ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೇಮಗಿರಿಯ ವಿಷ್ಣುಸಮುದ್ರ ಕೆರೆಗೆ ಅಪಾರ ಮಳೆಯಿಂದ ನೀರಿನ‌ ಹರಿವು ಹೆಚ್ಚಿದೆ.ಕಳೆದ ಒಂದೂವರೆ ವರ್ಷದಿಂದ ಬತ್ತಿ ಹೋಗಿದ್ದ ಆವತಿ ನದಿಯಲ್ಲಿ ನೀರು ಹರಿಯುತ್ತಿದೆ. ಒಣಗಿದ್ದ ಹಳ್ಳ ಕೊಳ್ಳಗಳಲ್ಲಿ ನೀರು ಹರಿಯಲಾರಂಭಿಸಿರುವುದು ರೈತರಲ್ಲಿ ಸಂತಸ ಮೂಡಿಸಿದೆ.ವಿ.ಯರದ ಕೆರೆಯ ದೊಡ್ಡಮ್ಮನ ಕೆರೆ ಚೆಕ್ ಡ್ಯಾಂ ಪೂರ್ಣ ತುಂಬಿ ಹರಿಯುತ್ತಿದೆ. ಚಿಕ್ಕಪಟ್ಟಣಗೆರೆಯ ಕೆರೆ ಏರಿ ಎರಡು ಕಡೆ ಕುಸಿದಿದೆ. ಆಣೇಗೆರೆ ಕೆರೆ ಏರಿ ಸಹ ಒಂದೆರಡು ಕಡೆ ಬಿರುಕುಂಟಾಗಿದ್ದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿತು.ತಾಲೂಕಿನಲ್ಲಿ ವೇದಾ ಹಳ್ಳ, ವೇದಾವತಿ ನದಿ ಪಾತ್ರ ಮತ್ತು ವಿವಿಧೆಡೆ ನಿರ್ಮಿಸಿರುವ ಅನೇಕ ಚೆಕ್ ಡ್ಯಾಂ ಗಳು ತುಂಬುತ್ತಿವೆ. ಗೌಡನಕಟ್ಟೆ ಹಳ್ಳಿ ಕೆರೆ ಪೂರ್ಣ ತುಂಬಿ ಒತ್ತಡ ಹೆಚ್ಚಾಗಿ ಒಡೆದು ಹೋಗಿದೆ. ಕೆರೆ ಏರಿಯ ಒಂದೆಡೆ ಒಡೆದು ನೀರು ರಭಸದಿಂದ ಹೊರಹೋಗುತ್ತಿದೆ. ಈ ನೀರು ಪಿ.ಕೋಡಿಹಳ್ಳಿ ಕೆರೆಗೆ ಹರಿದು ಶೇಖರಣೆಯಾಗುತ್ತಿದೆ. ನೀರು ಖಾಲಿ ಯಾಗುವ ತನಕ ಕೆರೆ ಏರಿಯ ಮೇಲೆ ಯಾವುದೇ ವಾಹನಗಳು ಹೋಗುವಂತಿಲ್ಲ. ಹಾಗಾಗಿ ದುರಸ್ತಿಗೆ ಕೆಲ ದಿನಗಳು ಬೇಕಾಗಬಹುದು. ಎನ್.ಡಿ.ಆರ್.ಎಫ್. ಅನುದಾನದಲ್ಲಿ ತುರ್ತು ಕಾಮಗಾರಿ ಮಾಡಲು ಅವಕಾಶವಿರುವುದರಿಂದ ಇಲ್ಲಿ ಕೆರೆ ಏರಿ ದುರಸ್ತಿ ಮಾಡಲು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳನ್ನು ತಹಸೀಲ್ದಾರ್ ತೆಗೆದುಕೊಳ್ಳುತ್ತಾರೆ. ಇಲ್ಲಿನ ವಾಸ್ತವ ವರದಿಯನ್ನು ಅವರಿಗೆ ನೀಡಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲಿಸಿದ ತಾಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್ ತಿಳಿಸಿದರು.--- ಬಾಕ್ಸ್--ತಾಲೂಕಿನ‌ ಮಳೆ ಪ್ರಮಾಣಕಡೂರು-55.0ಬೀರೂರು-62.2ಸಿಂಗಟಗೆರೆ-78.8ಯಗಟಿ- 64.2ಎಮ್ಮೆದೊಡ್ಡಿ-62.0ಪಂಚನಹಳ್ಳಿ-78.6ಗಿರಿಯಾಪುರ-23.4ಬಾಸೂರು-57.0ಸಖರಾಯ ಪಟ್ಟಣ-58.2

--

ಬೆಟ್ಟದಹಳ್ಳಿ: ಮಳೆ ಗಾಳಿಗೆ ಮುರಿದು ಬಿದ್ದ ಮರಗಳು

ಗಾಳಿಗೆ ಹಾರಿದ ಸಮುದಾಯ ಭವನದ ಮೇಲ್ಚಾವಣಿಕನ್ನಡಪ್ರಭ ವಾರ್ತೆ, ತರೀಕೆರೆಸಮೀಪದ ಬೆಟ್ಟದಹಳ್ಳಿ ಗ್ರಾಮದಲ್ಲಿ ಸೋಮವಾರ ಸಾಯಂಕಾಲ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಈ ಭಾಗದ ಅನೇಕ ತೋಟಗಳಲ್ಲಿ ಬೆಳೆದಿದ್ದ ಬಾಳೆ, ತೆಂಗು ಮತ್ತು ಅಡಕೆ ಮರಗಳು ಬುಡ ಸಹಿತ ಮುರಿದು ಬಿದ್ದಿವೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೆಟ್ಟದಹಳ್ಳಿ ಗ್ರಾಮದ ಬಿ.ಬಿ.ರವಿಕುಮಾರ್ ತಿಳಿಸಿದ್ದಾರೆ.ಮಳೆ ಜೊತೆಗೇ ಬೀಸಿದ ಭಾರಿ ಗಾಳಿಯಿಂದಾಗಿ ಗ್ರಾಮದಲ್ಲಿರುವ ಸಮುದಾಯ ಭವನದ ಮೇಲ್ಚಾವಣಿ ಹಾರಿ ಹೋಗಿದ್ದು ತುಂಬಾ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಅನೇಕ ತೋಟಗಳಲ್ಲಿ ಫಸಲು ಬಿಡುತ್ತಿದ್ದ ಬಾಳೆಗಿಡಗಳು ತೆಂಗಿನ ಮರ ಮತ್ತು ಅಡಕೆ ಮರಗಳು ಮುರಿದು ಬಿದ್ದಿದ್ದು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಠ ಉಂಟಾಗಿದೆ ಎಂದು ತಿಳಿಸಿದ್ದಾರೆ.ಒತ್ತಾಯ: ರೈತರಿಗೆ ಉಂಟಾಗಿರುವ ಅಪಾರ ಪ್ರಮಾಣದ ನಷ್ಟಕ್ಕೆ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಭಾಗಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.21ಕೆಟಿಆರ್.ಕೆ.1ಃಬೆಟ್ಟದಹಳ್ಳಿ ಗ್ರಾಮದಲ್ಲಿ ಭಾರಿ ಮಳೆ ಮತ್ತು ಗಾಳಿಗೆ ಬಾಳೆ, ತೆಂಗು ಮತ್ತು ಅಡಕೆ ಮರಗಳು ಮುರಿದು ಬಿದ್ದಿದೆ21ಕೆಟಿಆರ್.ಕೆ.2ಃ ಗಾಳಿಗೆ ಹಾರಿಹೋದ ಸಮುದಾಯ ಭವನದ ಮೇಲ್ಚಾವಣಿ

--

ಅರಳಿಕೊಪ್ಪದಲ್ಲಿ ದನದ ಕೊಟ್ಟಿಗೆ ನೆಲಸಮನರಸಿಂಹಾರಜಪುರ: ತಾಲೂಕಿನ ಗುಬ್ಬಿಗಾ ಗ್ರಾಪಂ ಅರಳಿಕೊಪ್ಪ ಗ್ರಾಮದ ಜಯಮ್ಮ ಎಂಬುವವರ ಮನೆ ಸಮೀಪದ ದನದ ಕೊಟ್ಟಿಗೆ ಭಾರೀ ಮಳೆ, ಗಾಳಿಗೆ ನೆಲಸಮವಾಗಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳಿಲ್ಲದೇ ಇರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕೊಟ್ಟಿಗೆಯಲ್ಲಿದ್ದ ಬೈಕ್ ಜಖಂಗೊಂಡಿದೆ. ಸ್ಥಳಕ್ಕೆ ಗ್ರಾಪಂ ಪಿಡಿಒ ಸೀಮಾ ಹಾಗೂ ಗ್ರಾಮ ಲೆಕ್ಕಿಗ ಸುನೀಲ್ ಭೇಟಿ ನೀಡಿದ್ದರು.ಮಣ್ಣು ಕುಸಿತ: ತಾಲೂಕಿನ ಕೂಸ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಪಕ್ಕದ ಜಾಗದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣ್ಣು ಕುಸಿದಿದೆ. ತಾಲೂಕಿನಾದ್ಯಂತ ಸೋಮವಾರ ರಾತ್ರಿ 10 ಗಂಟೆಯಿಂದ 3 ಗಂಟೆವರೆಗೂ ಎಡೆ ಬಿಡದೆ ಮಳೆ ಸುರಿದಿದೆ. ಕಳೆದ 3 ದಿನಗಳಿಂದಲೂ ಸಂಜೆ ಅಥವಾ ರಾತ್ರಿ ಬಾರೀ ಮಳೆ ಬರುತ್ತಿದ್ದು ಮಳೆಗಾಲದ ವಾತಾ ವರಣ ಸೃಷ್ಠಿಯಾಗಿದೆ. ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ಶುರುವಾಗಿದೆ. ವಿದ್ಯುತ್‌ ಸಮಸ್ಯೆ ಯಿಂದ ಇಂಟರ್ ನೆಟ್‌ ಸಮಸ್ಯೆಯೂ ಪ್ರಾರಂಭವಾಗಿದೆ.

--

ಅರಳಿಕೊಪ್ಪದಲ್ಲಿ ದನದ ಕೊಟ್ಟಿಗೆ ನೆಲಸಮನರಸಿಂಹಾರಜಪುರ: ತಾಲೂಕಿನ ಗುಬ್ಬಿಗಾ ಗ್ರಾಪಂ ಅರಳಿಕೊಪ್ಪ ಗ್ರಾಮದ ಜಯಮ್ಮ ಎಂಬುವವರ ಮನೆ ಸಮೀಪದ ದನದ ಕೊಟ್ಟಿಗೆ ಭಾರೀ ಮಳೆ, ಗಾಳಿಗೆ ನೆಲಸಮವಾಗಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳಿಲ್ಲದೇ ಇರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕೊಟ್ಟಿಗೆಯಲ್ಲಿದ್ದ ಬೈಕ್ ಜಖಂಗೊಂಡಿದೆ. ಸ್ಥಳಕ್ಕೆ ಗ್ರಾಪಂ ಪಿಡಿಒ ಸೀಮಾ ಹಾಗೂ ಗ್ರಾಮ ಲೆಕ್ಕಿಗ ಸುನೀಲ್ ಭೇಟಿ ನೀಡಿದ್ದರು.ಮಣ್ಣು ಕುಸಿತ: ತಾಲೂಕಿನ ಕೂಸ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಪಕ್ಕದ ಜಾಗದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣ್ಣು ಕುಸಿದಿದೆ. ತಾಲೂಕಿನಾದ್ಯಂತ ಸೋಮವಾರ ರಾತ್ರಿ 10 ಗಂಟೆಯಿಂದ 3 ಗಂಟೆವರೆಗೂ ಎಡೆ ಬಿಡದೆ ಮಳೆ ಸುರಿದಿದೆ. ಕಳೆದ 3 ದಿನಗಳಿಂದಲೂ ಸಂಜೆ ಅಥವಾ ರಾತ್ರಿ ಬಾರೀ ಮಳೆ ಬರುತ್ತಿದ್ದು ಮಳೆಗಾಲದ ವಾತಾ ವರಣ ಸೃಷ್ಠಿಯಾಗಿದೆ. ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ಶುರುವಾಗಿದೆ. ವಿದ್ಯುತ್‌ ಸಮಸ್ಯೆ ಯಿಂದ ಇಂಟರ್ ನೆಟ್‌ ಸಮಸ್ಯೆಯೂ ಪ್ರಾರಂಭವಾಗಿದೆ.