ಬೈಲಹೊಂಗಲ: ಮಂಗಳವಾರ ಸಂಜೆ ಸುರಿದ ಧಾರಾಕಾರ ಅಕಾಲಿಕ ಮಳೆ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವಾಂತರ ಸೃಷ್ಟಿ ಮಾಡಿತು. ಸಂಜೆ ಸುರಿದ ಮಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿವುಂಟಾಯಿತು.
ಬೈಲಹೊಂಗಲ: ಮಂಗಳವಾರ ಸಂಜೆ ಸುರಿದ ಧಾರಾಕಾರ ಅಕಾಲಿಕ ಮಳೆ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವಾಂತರ ಸೃಷ್ಟಿ ಮಾಡಿತು. ಸಂಜೆ ಸುರಿದ ಮಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿವುಂಟಾಯಿತು. ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದ್ದರಿಂದ ಮುಖ್ಯ ವೇದಿಕೆಯೇ ಮಳೆಯಿಂದ ನೀರು ಸೋರಿದ್ದರಿಂದ ಕಾರ್ಯಕ್ರಮ ಸಂಪೂರ್ಣ ಸ್ಥಬ್ಧವಾಯಿತು. ಸ್ಥಳೀಯ ಕಲಾವಿದರು, ರಾಜ್ಯ ಮಟ್ಟದ ಕಲಾವಿದರು, ಪ್ರೇಕ್ಷಕರು, ಗ್ರಾಮಸ್ಥರು ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಳೆಯಿಂದ ಅಡ್ಡಿವುಂಟಾಯಿತು. ಧಾರಕಾರ ಮಳೆಯಾಗಿದ್ದರಿಂದ ಕಾರ್ಯಕ್ರಮ ವೀಕ್ಷಿಸುವ ಜನರು ಮಳೆಯಲ್ಲಿಯೇ ನೆನೆಯಬೇಕಾಯಿತು. ಕೊನೆಗೆ ಕುರ್ಚಿಗಳನ್ನೇ ಹೊತ್ತುಕೊಂಡು ಜನರು ಮಳೆಯಿಂದ ರಕ್ಷಣೆ ಪಡೆಯಬೇಕಾಯಿತು. ಪಕ್ಕದ ಶಾಲೆ ಕಟ್ಟಡಕ್ಕೆ ತೆರಳಿ ಕೊಠಡಿಗಳಲ್ಲಿ ಆಶ್ರಯ ಪಡೆದು ನಿಂತರು. ದೂರದ ಊರುಗಳಿಂದ ಬಂದಿದ್ದ ಕಲಾವಿದರು, ಕಲಾ ತಂಡಗಳು, ಕಲಾ ಪ್ರೇಕ್ಷಕರು ಮಳೆ ಬಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದರಿಂದ ನಿರಾಶೆಗೊಂಡರು. ಮುಖ್ಯ ವೇದಿಕೆಯ ಮೈದಾನ ಮಳೆ ನೀರಿನಿಂದ ಜಲಾವೃತಗೊಂಡಿತು. ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಪೋಟೋ, ವಿಡಿಯೋಗ್ರಾಫರಗಳು, ಮಾಧ್ಯಮ ಸ್ನೇಹಿತರು ಮಳೆಯಲ್ಲಿ ನೆನೆಯಬೇಕಾಯಿತು